Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ನಾಳೆ ಧ್ಯಾನೋತ್ಸವ

---Advertisement---

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ರಾಮಚಂದ್ರ ಮಿಷನ್ ವತಿಯಿಂದ ಪ್ರಥಮ ಬಾರಿಗೆ ತ.ರಾ.ಸು. ರಂಗಮಂದಿರದಲ್ಲಿ ಮಾ. 9 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಐದರವರೆಗೆ ಧ್ಯಾನೋತ್ಸವ ಏರ್ಪಡಿಸಲಾಗಿದೆ.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಧ್ಯಾನೋತ್ಸವ ಉದ್ಗಾಟಿಸಲಿದ್ದಾರೆ. ಹಾರ್ಟ್‍ಫುಲ್‍ನೆಸ್ ರಾಜ್ಯ ಸಂಚಾಲಕ ಮೈಸೂರಿನ ಕೆ.ಮಧುಸೂದನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಸ್.ಎನ್. ಕಾಶಿವಿಶ್ವನಾಥಶೆಟ್ಟಿ, ಹಾರ್ಟ್‍ಫುಲ್‍ನೆಸ್ ಹಿರಿಯ ಪ್ರಶಿಕ್ಷಕ ಎನ್.ಎಸ್.ನಾಗರಾಜ, ಡಾ.ಕೆ.ರಘು ಇವರುಗಳು ಭಾಗವಹಿಸಲಿದ್ದಾರೆ. ಹಾರ್ಟ್‍ಫುಲ್‍ನೆಸ್ ಧ್ಯಾನ ಕುರಿತ ಮೊದಲನೆ ಗೋಷ್ಟಿಯಲ್ಲಿ ಎನ್.ಎಸ್.ನಾಗರಾಜ ಹಾರ್ಟ್‍ಫುಲ್‍ನೆಸ್ ಧ್ಯಾನ ಕುರಿತು ಉಪನ್ಯಾಸ ನೀಡಲಿದ್ದಾರೆ.

ಹಾರ್ಟ್‍ಫುಲ್‍ನೆಸ್ ಶುದ್ದೀಕರಣ ಕುರಿತು ಎರಡನೇ ಗೋಷ್ಠಿಯಲ್ಲಿ ಡಾ.ಕೆ.ರಘು ಉಪನ್ಯಾಸ ನೀಡುವರು. ಹಾರ್ಟ್‍ಫುಲ್‍ನೆಸ್ ಪ್ರಾರ್ಥನೆ ಕುರಿತು ಮೂರನೆ ಗೋಷ್ಠಿಯಲ್ಲಿ ಗಿರೀಶ ಟೊಟ್ಲೂರ್ ಉಪನ್ಯಾಸ ನೀಡುವರು. ಡಾ.ಕೆ.ರಘು, ಎಸ್.ವೆಂಕಟಾದ್ರಿ, ಇವರುಗಳು ಗೋಷ್ಠಿಯಲ್ಲಿ ಸಂವಾದ ನಡೆಸುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಾರ್ಟ್‍ಫುಲ್‍ನೆಸ್ ಹಿರಿಯ ಪ್ರಶಿಕ್ಷಕ ಪ್ರಸನ್ನಕೃಷ್ಣ ವಹಿಸುವರು. ಡಾ.ವಿ.ಬಸವರಾಜ ಸಮಾರೋಪ ನುಡಿಗಳನ್ನಾಡುವರು. ಹಾರ್ಟ್‍ಫುಲ್‍ನೆಸ್ ಧ್ಯಾನ ಪದ್ದತಿಯ ವಿವಿಧ ವಿಧಾನಗಳನ್ನು ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ಪ್ರಶ್ನೋತ್ತರಗಳ ಮೂಲಕ ಪರಿಚಯಿಸಲಾಗುವುದು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಜ ಮಾರ್ಗ ಧ್ಯಾನ ಪದ್ದತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಶಿಕ್ಷಕ ಡಾ.ವಿ.ಬಸವರಾಜ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ : 8217200864, 7892244382 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment