Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾ.23 ರಂದು ಬೃಹತ್ ಪಂಜಿನ ಮೆರವಣಿಗೆ : ಹನುಮಂತೇಗೌಡ

Facebook
Twitter
Telegram
WhatsApp

ಚಿತ್ರದುರ್ಗ, (ಮಾ.22) :  ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಮಾ.23ರ ಸಂಜೆ 6 ಗಂಟೆಗೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಸುಖದೇವ್ ಅವರ ಸ್ಮರಣಾರ್ಥ ರಾಷ್ಟ್ರೀಯ ಬಲಿದಾನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ಮೋರ್ಚಾ ಘಟಕದ ಅಧ್ಯಕ್ಷ ಹನುಮಂತೇಗೌಡ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಹಾರರಲ್ಲಿ ಅಗ್ರ ಮಾನ್ಯವಾಗಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಹೋರಾಟಗಾರರಿಗೆ ಸೂರ್ತಿಯಾಗಿದ್ದ ಇವರ ರಾಷ್ಟ್ರಭಕ್ತಿ ಇಂದಿಗೂ ಕೂಡ ನಮ್ಮೆಲ್ಲಾ ಯುವಜನತೆಗೆ ಪ್ರೇರಣೆ ಮತ್ತು ಸೂರ್ತಿಯಾಗಿದೆ.

ಸರ್ವಾಧಿಕಾರಿ ಮನಸ್ಥಿತಿಯ ಬ್ರಿಟಿಷ್ ಸರ್ಕಾರ ಈ ರಾಷ್ಟ್ರ ಭಕ್ತರನ್ನು 1931 ಮಾ.23 ರಂದು ಗಲ್ಲಿಗೇರಿಸಿತು. ಇವರ ರಾಷ್ಟ್ರಭಕ್ತಿ ಮತ್ತು ವಿಚಾರವನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಪೂಜ್ಯನೀಯರಾದ ಇವರ ಸ್ಮರಣೆಯ ಅಂಗವಾಗಿ ಮಾ.23ರ ಸಂಜೆ 6 ಗಂಟೆಗೆ ನಗರದ ಆನೇ ಬಾಗಿಲ ಬಳಿಯಿಂದ ಓನಕೆ ಒಬವ್ವ ವೃತ್ತದವರೆಗೂ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ ಸುಮಾರು 500ಕ್ಕೂ ಹೆಚ್ಚು ಯುವ ಜನತೆ ಭಾಗವಹಿಸಲಿದ್ದಾರೆ. ತದ ನಂತರ ಓನಕೆ ಒಬವ್ವ ವೃತ್ತದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಸಚಿವರಾಧ ಶ್ರೀರಾಮುಲು, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಬಿಜೆಪಿಯ ಅಧ್ಯಕ್ಷರಾದ ಮುರಳಿ  ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನರೇಂದ್ರನಾಥ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಮೋಹನ್, ಭರತ್, ಚಂದ್ರಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

error: Content is protected !!