ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 25 : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದಲ್ಲಿ ಮಾ.1 ರಿಂದ 9 ರವರೆಗೆ 51 ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ, ವನಕಲ್ಲು ಶ್ರೀ ಪ್ರಶಸ್ತಿ, ವಿವಿದ ಪ್ರಶಸ್ತಿ ಪ್ರದಾನ, ಸಂಸ್ಕøತೋತ್ಸವ, ರಾಜ್ಯ ಮಟ್ಟದ ಜಾನಪದೋತ್ಸವ, ಕವಿ ಕಾವ್ಯ ಸಮ್ಮೇಳನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ನಡೆಯಲಿದೆ ಎಂದು ಬಸವ ರಮಾನಂದ ಮಹಾಸ್ವಾಮಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1,2,5 ರಂದು ಯುವಕ-ಯುವತಿಯರು ಹಾಗೂ ಮಕ್ಕಳಿಗೆ ಕ್ರೀಡೆಯನ್ನು ಏರ್ಪಡಿಸಲಾಗಿದೆ. 6, 7 ರಂದು ದನಗಳ ಜಾತ್ರೆ, 8 ರಂದು ಜನಪದೋತ್ಸವ, ಕವಿ ಕಾವ್ಯ ಸಮ್ಮೇಳನ, ರಾಜ್ಯದ 36 ಜಿಲ್ಲೆಗಳಿಂದ 60 ಕ್ಕು ಹೆಚ್ಚು ಕವಿಗಳು ಭಾಗವಹಿಸಿ ಕವನ ವಾಚಿಸುವರು. 9 ರಂದು ಬ್ರಹ್ಮರಥೋತ್ಸವ, ಶಾಲಾ ಶಿಕ್ಷಕರುಗಳಿಂದ ಕುರುಕ್ಷೇತ್ರ ನಾಟಕ ಪ್ರದರ್ಶನಗೊಳ್ಳಲಿದೆ. ವನಕಲ್ಲು ಪ್ರಶಸ್ತಿಯನ್ನು ಡಾ.ಎಂ.ಆರ್.ಸೀತಾರಾಮ್
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿಗೆ ಜಗಜ್ಯೋತಿ ಪ್ರಶಸ್ತಿ, ಡಾ.ಸಿ.ನಾಗಭೂಷಣ್‍ರವರಿಗೆ ವಿಶ್ವಜ್ಯೋತಿ ಪ್ರಶಸ್ತಿ, ಡಾ.ಸಿ.ನಂಜುಂಡಯ್ಯನವರಿಗೆ ಬಾಲಗಂಗಾಧರನಾಥ ಪ್ರಶಸ್ತಿ, ರಜತಾ ಶಿವಕುಮಾರ್‍ರವರಿಗೆ ಶರಣಶ್ರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಸವ ರಮಾನಂದ ಮಹಾಸ್ವಾಮಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ, ಪ್ರಶಸ್ತಿ ಪ್ರದಾನ, ಸಂಸ್ಕøತೋತ್ಸವ, ರಾಜ್ಯ ಮಟ್ಟದ ಜಾನಪದೋತ್ಸವ, ಕವಿ ಕಾವ್ಯ ಸಮ್ಮೇಳನದಿಂದ ನಮ್ಮ ನಾಡಿನ ಸಂಸ್ಕøತಿಯನ್ನು ಉಳಿಸಿ ಬೆಳೆಸಿದಂತಾಗುತ್ತದೆ. ಜೊತೆಗೆ ಕವಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹೊಮ್ಮಿಸಲು ವೇದಿಕೆ ಸೃಷ್ಟಿ ಮಾಡಿದಂತಾಗುತ್ತದೆ ಎಂದರು.
ಯುವ ವಕೀಲರುಗಳಾದ ಓ.ಪ್ರತಾಪ್‍ಜೋಗಿ, ಸೌಮ್ಯ, ಪುಷ್ಪ, ರಮೇಶ್, ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್, ದಲಿತ ಮುಖಂಡ ಬಿ.ರಾಜಪ್ಪ, ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ವಿಜಯಕುಮಾರ್, ನಾಗರಾಜ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮೂರ್ತಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

















