Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೈಬರ್ ವಂಚನೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿ : ಬಹುಮಾನ ಗೆಲ್ಲಿ

---Advertisement---

ಚಿತ್ರದುರ್ಗ. ಜ.13: ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಚಿತ್ರದುರ್ಗ ಸೈಬರ್ ಮಿತ್ರ ಎಂಬ ನೂತನ ಕಾರ್ಯಕ್ರಮದಡಿ ಸೈಬರ್ ವಂಚನೆಗಳ ಬಗ್ಗೆ ವಿನೂತನವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಆಸಕ್ತಿಯುಳ್ಳವರು ಡಿಜಿಟಲ್ ಅರೆಸ್ಟ್, ಇನ್ವೆಸ್ಟ್ಮೆಂಟ್ ಫ್ರಾಡ್, ಆನ್‍ಲೈನ್ ಜಾಬ್ ಫ್ರಾಡ್, ಮೂಲ್ ಅಕೌಂಟ್ಸ್, ಡ್ರಗ್ ಅವೇರ್‍ನೆಸ್, ರಿವೇಜ್ ಪೋರ್ನ್, ಆನ್‍ಲೈನ್ ಲೋನ್ ಫ್ರಾಡ್ಸ್ ಕುರಿತು 90 ಸೆಕೆಂಡ್‍ಗಳಿಗೆ ಮೀರದಂತೆ ರೀಲ್ಸ್ ಮಾಡಿ ಕಳುಹಿಸಬಹುದು.

ರೀಲ್ಸ್ ಕನ್ನಡ ಭಾಷೆಯಲ್ಲಿ ಇರಬೇಕು. ಸಾಂದರ್ಭಿಕವಾಗಿ ಇಂಗ್ಲೀಷ್ ಭಾಷೆಯನ್ನು ಬಳಸಬಹುದು. ಆಸಕ್ತಿಯುಳ್ಳವರು, ರೀಲ್ಸ್ ನಿರ್ದೇಶಿಸಿ, ನಟಿಸಿ, ಪ್ರಕಟಿಸುವ ಹಕ್ಕಿನೊಂದಿಗೆ ಮೊಬೈಲ್ ಸಂಖ್ಯೆ 9480803173 ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಇದೇ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. ಅತ್ಯುತ್ತಮ ರಿಲ್ಸ್‍ಗಳನ್ನು ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಪ್ರಥಮ ಸ್ಥಾನ ಪಡೆದ ರೀಲ್ಸ್‍ಗೆ ರೂ.10,000/-, ದ್ವೀತಿಯ ಸ್ಥಾನ ಪಡೆದ ರೀಲ್ಸ್‍ಗೆ ರೂ.5,000/- ಹಾಗೂ ತೃತೀಯ ಸ್ಥಾನ ಪಡೆದ ರೀಲ್ಸ್‍ಗೆ ರೂ.2,000/- ನಗದು ಸೇರಿದಂತೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಇದರೊಂದಿಗೆ 10 ಸಮಾಧಾನಕರ ಬಹುಮಾನ ನೀಡುವುದಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...