ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 26 :ಸಿಸಿ ಕ್ಯಾಮರ ಅಳವಡಿಕೆ ಮತ್ತು ಕಂಪ್ಯೂಟರ್ ಮಾರಾಟ ಹಾಗೂ ರಿಪೇರಿ ಜತೆಗೆ ಮೀನು ಹಿಡಿಯು ಅಭ್ಯಾಸ ಮಾಡಿಕೊಂಡಿರುವ ಹವ್ಯಾಸಿ ಮಿನುಗಾರ ನಗರದ ಸಂಪಿಗೆ ರಸ್ತೆಯ ಸೈಯಾದ್ ಅಹಮದ್ ಇವರು ಜಗಳೂರಜ್ಜ ದೇವಸ್ಥಾನದ ಹಿಂಭಾಗದ ಕೆರೆಯಲ್ಲಿ ಇವರು ಹಾಕಿದ ಗಾಳಕ್ಕೆ ಸುಮಾರು 4 ಕೆ.ಜಿ.ತೂಕದ ಮೀನು ಬಿದ್ದಿದೆ.

ಹವ್ಯಾಸಿ ಮೀನುಗಾರ ಸೈಯದ್ ಅ ಹಮ್ಮದ್ ಸಿಸಿ ಕ್ಯಾಮೆರಾ ಅಳವಡಿಕೆ ಕಂಪ್ಯೂಟರ್ ಮಾರಾಟ ಹಾಗು ರಿಪೇರಿ ಜತಗೆ ಗಾಳದಿಂದ ಮೀನು ಹಿಡಿಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ತಾಲೂಕಿನ ರಾಣಿಕೆರೆ ಹಾಗೂ ವೇದಾವತಿ ನದಿಯ ಬ್ಯಾರೇಜ್ ಸೇರಿದಂತೆ ವಿವಿಧ ಕೆರೆಗಳಲ್ಲಿ ಮೀನು ಹಿಡಿಯುತ್ತಾರೆ.
ಎಸ್.ಸೈಯಾದ್ ಅಹಮದ್ ಹೇಳುವಂತೆ ಇಂದು ಅಜ್ಜನ ಗುಡಿ ಕೆರೆಯಲ್ಲಿ ಹಾಕಿದ್ದ ಗಾಳದ ಮೂಲಕ 4 ಕೆಜಿ ಮೀನು ಹಿಡಿಯುವುದು ಒಂದು ರೋಮಾಂಚಕ ಅನುಭವವಾಗಿದೆ.ಸಮುದ್ರ ಸೇರಿದಂತ ದೊಡ್ಡ ದೊಡ್ಡ ಕೆರೆಗಳಲ್ಲಿ ಇಂತಹ ಮಿನುಗಳು ಸಿಗುತ್ತವೆ .ಆದರೆ ಈ ಕೆರೆಯಲ್ಲಿ ಇದೆ ಮೊದಲ ಬಾರಿಗೆ 4 ಕೆ.ಜಿ.ತೂಕದ ಗೌರ ಮೀನು ಬಿದ್ದಿರುವುದು ಆಚ್ಚರಿಯಾಗಿದೆ .ಒಮ್ಮೊಮೆ ದಿನ ಪೂರ್ತಿ ಕಾದರೂ ಒಂದು ಮೀನು ಸಹ ಸಿಗುತ್ತಿರಲಿಲ್ಲ ಆದರೆ ಇಂದು ನಾನು ಹಾಕಿದ ಗಾಳಕ್ಕೆ 4 ಕೆ.ಜಿ ತೋಕದ 1 ಗೌರಿ , 2 ಕೆಜಿ ತೋಕದ 2 ರೊವು ಮೀನು ಹಾಗೂ ಜುಲೆಬಿ ಒಟ್ಟು 8 ಕೆಜಿ ಮೀನ ಶಿಖಾರಿ ಮಾಡಿದ್ದೆನೆ ಎಂದ್ದಿದ್ದಾರೆ.


















