Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ: “ಶಿಶುವಿಗೆ ಹಾಲೇರಿಯಿತಲೇ ಪರಾಕ್” ಕಾರ್ಣಿಕದ ಅರ್ಥವೇನು ?

---Advertisement---

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಈ ಬಾರಿ “ಸಂಪಾಯಿತಲೇ ಪರಾಕ್” ಎಂಬ ಭವಿಷ್ಯವಾಣಿ ನಾಡಿನ ಮಳೆ, ಬೆಳೆ ಹಾಗೂ ಸಮೃದ್ಧಿಗೆ ಶುಭ ಸೂಚನೆ ನೀಡಿದೆ. ಜಾತ್ರಾ ಮಹೋತ್ಸವದ ವೇಳೆ ಗೊರವಯ್ಯ ನೀಲಪ್ಪ ಮಾಕಪ್ಪ ಅವರು ಕಾರ್ಣಿಕ ನುಡಿದು ಭಕ್ತರ ಗಮನ ಸೆಳೆದರು.

“ಮುತ್ತು ಉತ್ಪತ್ತಿ ಆಯಿತು; ಶಿಶುವಿಗೆ ಹಾಲೇರಿಯಿತಲೇ ಪರಾಕ್” ಎಂಬ ಕಾರ್ಣಿಕದ ಅರ್ಥ, ಈ ವರ್ಷ ಉತ್ತಮ ಮಳೆ ಹಾಗೂ ಉತ್ತಮ ಬೆಳೆ ಉಂಟಾಗಲಿದೆ ಎಂಬುದಾಗಿ ಭಕ್ತರು ವಿಶ್ಲೇಷಿಸಿದ್ದಾರೆ.

ಕಾರ್ಣಿಕ ನುಡಿದ ಕ್ಷಣದಲ್ಲಿ ಭಕ್ತರು “ಏಳು ಕೋಟಿ, ಏಳು ಕೋಟಿಗೋ.. ಛಾಂಗ್ ಮಲೋ” ಎಂದು ಘೋಷಣೆ ಕೂಗಿ ಭಕ್ತಿಭಾವ ವ್ಯಕ್ತಪಡಿಸಿದರು.ಮಾರ್ಚ್‌ 1ರಿಂದ 22ರವರೆಗೆ ನಾಲ್ಕು ಭಾನುವಾರಗಳ ಕಾಲ ಮೈಲಾರಲಿಂಗೇಶ್ವರ ದೇವರಿಗೆ ಹಣ್ಣು-ಕಾಯಿ ಸಮರ್ಪಣೆ, ಪಲ್ಲಕ್ಕಿ ಉತ್ಸವ ಹಾಗೂ ಡೋಣಿ ತುಂಬಿಸುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ರಾಮನವಮಿ ದಿನ ಬೆಳಗ್ಗೆ ಭಕ್ತರಿಂದ ಹಣ್ಣು-ತುಪ್ಪ ಡೋಣಿ ತುಂಬಿಸಿ, ನಂತರ ಪಲ್ಲಕ್ಕಿ ಉತ್ಸವ ಗ್ರಾಮದೆಲ್ಲೆಡೆ ಸಂಚರಿಸಿತು. ಡೊಳ್ಳು, ಮಜಲು, ಭಜನೆಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನೆರವೇರಿತು.

ಕಾರ್ಣಿಕದ ತಾತ್ಪರ್ಯ ಈ ವರ್ಷ ಮಳೆ-ಬೆಳೆ ಉತ್ತಮವಾಗಿ, ಜನರ ಜೀವನದಲ್ಲಿ ಸಮೃದ್ಧಿ ನೆಲೆಸಲಿದೆ ಎಂಬುದಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಮುಂದೆ ಗೊರವಯ್ಯರು ಕಬ್ಬಿಣದ ಸರಪಳಿಗಳನ್ನು ಹರಿದು ಸರಪಳಿ ಪವಾಡ ಪ್ರದರ್ಶಿಸಿದರು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು.ಇದಲ್ಲದೆ “ಮುತ್ತಿನ ಗಿಣಿ” ಕಾರ್ಣಿಕವು ಅಂಬಲಿ ರಾಶಿಗೆ ಸಮೃದ್ಧಿಯ ಸಂಕೇತವಾಗಿದ್ದು, ಇದೂ ಧನಾತ್ಮಕ ಸೂಚನೆ ನೀಡುತ್ತದೆ ಎಂದು ಹೇಳಲಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now