Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹೇಶ್ ತಿಮರೋಡಿ ಅರೆಸ್ಟ್ : ನನಗೆ ಏನಾದರೂ ಸರ್ಕಾರವೇ ಹೊಣೆ ಎಂದ ತಿಮರೋಡಿ

---Advertisement---

ಮಂಗಳೂರು: ಬಿಎಲ್ ಸಂತೋಷ್ ವಿರುದ್ಧ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಅವಹೇಳನವಾಗಿ ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆಯ ಅನುಸಾರವಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರು ದೂರನ್ನು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತಿಮ್ಮರೋಡಿ ಮನೆಗೆ ಬಂದಿದ್ದಾರೆ. ಸುಮಾರು ಎಂಟು ಜೀಪ್ ಗಳಲ್ಲಿ ಉಡುಪಿಯಿಂದ ಬಂದಂತ ಪೊಲೀಸರು, ಮಹೇಶ್ ತಿಮರೋಡಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಎಸ್ಪಿ ಸುಧಾಕರ್ ನಾಯಕ್ ಅವರ ನೇತೃತ್ವದ ತಂಡ ಹಾಗೂ ಕಾರ್ಕಳ, ಮಣಿಪಾಲ ಸೇರಿದಂತೆ ಬ್ರಹ್ಮಾವರ ನೇತೃತ್ವದ ತಂಡ ಮಹೇಶ್ ತಿಮರೋಡಿ ಮನೆಗೆ ಬಂದು ಅವರನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ತಿಮರೋಡಿ ಅವರು ಹೈಡ್ರಾಮವನ್ನೇ ಶುರು ಮಾಡಿದ್ದಾರೆ. ನನಗೆ ಏನೆರ ಆದರೂ ಸರ್ಕಾರವೇ ಹೊಣೆ ಎಂದು ಗರಂ ಆಗಿದ್ದಾರೆ.

ನನ್ನ ಜೀವಕ್ಕೆ ಏನಾದರೂ ಆದರೆ ರಾಜ್ಯ ಸರ್ಕಾರವೇ ಕಾರಣವಾಗುತ್ತದೆ. ಇಡೀ ಬಿಜೆಪಿಯವರು ಕಾರಣ ಆಗ್ತಾರೆ. ಸೌಜನ್ಯ ಕೇಸ್ ಗೆ ನ್ಯಾಯ ಸಿಗಬೇಕು. ನನಗೆ ಏನಾದರೂ ಪರವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಅರೆಸ್ಟ್ ಮಾಡುವುದಕ್ಕೆ ಬಂದಾಗ ಗಿರೀಶ್ ಮಟ್ಟಣ್ಣನವರ್ ಅವರು ಕೂಡ ಪೊಲೀಸರನ್ನು ಪ್ರಶ್ನೆ ಮಾಡಿದ್ದರು. ವಿಚಾರಣೆಗೆ ಬರಬೇಕು ಎಂದರೆ ನಾವೇ ಕರೆದುಕೊಂಡು ಬರ್ತೀವಿ. ಇದ್ದಕ್ಕಿದ್ದ ಹಾಗೇ ಇಷ್ಟೊಂದು ಜನ ಪೊಲೀಸರ ಜೊತೆಗೆ ಬರುವುದು ಸರಿಯಾದ ಕ್ರಮವಲ್ಲ. ನಾವೇ ಕರೆದುಕೊಂಡು ಬರ್ತೀವಿ ಎಂಬ ಮಾತನ್ನ ಗಿರೀಶದ ಮಟ್ಟಣ್ಣನವರ್ ಹಾಗೂ ತಿಮರೋಡಿ ಅವರ ಪರ ವಕೀಲರು ಮಾತನಾಡಿದ್ದರು. ಅವರ್ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಉಡುಪಿ ಪೊಲೀಸರು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...