ದಕ್ಷಿಣ ಕನ್ನಡ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮಹೇಶ್ ತಿಮರೋಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಕೋರ್ಟ್ ಮಹೇಶ್ ತಿಮರೋಡಿಗೆ ಜಾಮೀನು ಮಂಜೂರು ಮಾಡಿದೆ. ಉಡುಪಿ ಜಿಲ್ಲಾ ನ್ಯಾಯಾಲಯವೂ ಜಾಮೀನನ್ನು ಮಂಜೂರು ಮಾಡಿದೆ. ಇಂದು ಬೆಳಗ್ಗೆ ಎರಡು ಗಂಟೆಗಳ ಕಾಲ ಪೊಲೀಸರ ಕಸ್ಟಡಿಗೆ ನೀಡಿದ್ದ ಬಳಿಕ ಜಾಮೀನನ್ನು ಮಂಜೂರು ಮಾಡಿದೆ.
ಮಹೇಶ್ ತಿಮರೋಡಿ ಅವರು ಹಲವರ ಬಗ್ಗೆ ಸ್ವಲ್ಪ ರ್ಯಾಶ್ ಆಗಿನೇ ಮಾತನಾಡುತ್ತಾರೆ. ಅದೇ ರೀತಿ ಬಿಎಲ್ ಸಂತೋಷ್ ಅವರ ಬಗ್ಗೆಯೂ ಮಾತನಾಡಿದ್ದರು. ಈ ಸಂಬಂಧ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ಎಂಬುವವರು ದೂರನ್ನ ದಾಖಲು ಮಾಡಿದ್ದರು. ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣೆಗೆ ಹೋಗಿ ದೂರನ್ನ ನೀಡಿದ್ದರು. ದೂರನ್ನ ಸ್ವೀಕರಿಸಿದ ಬ್ರಹ್ಮಾವರ ಪೊಲೀಸರು, ಮಹೇಶ್ ಶೆಟ್ಟಿ ತಿಮರೋಡಿ ಅವರನ್ನ ಬಂಧಿಸಿದ್ದರು.
ಅರೆಸ್ಟ್ ಆದಾಗ ತಿಮರೋಡಿ ಸಿಕ್ಕಾಪಟ್ಟೆ ಆಕ್ರೋಶ ಹೊರಹಾಕಿದ್ದರು. ನನಗೆ ಏನಾದರೂ ಆದರೆ ರಾಜ್ಯ ಸರ್ಕಾರವೇ ಹೊಣೆ ಎಂದು ಜೋರಾಗಿ ಕೂಗಿ ಹೇಳಿ ಜೀಪು ಹತ್ತಿದ್ದರು. ಸೌಜನ್ಯ ಕೊಲೆ ಕೇಸಲ್ಲಿ ಮಹೇಶ್ ತಿಮರೋಡಿ ಹೋರಾಟ ಮಾಡುತ್ತಾ ಇದ್ದಾರೆ. ಅವರ ಜೊತೆಗೆ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವರು ಕೈ ಜೋಡಿಸಿದ್ದಾರೆ. ಸೌಜನ್ಯ ಪ್ರಕರಣ ಇತ್ಯರ್ಥವಾಗದೆ ನಡುವೆ ಧರ್ಮಸ್ಥಳದಲ್ಲಿ ನೂರಾರು ಶವಗಳ ವಿಚಾರ ಬಂತು. ಈಗ ಹೆಣ ತೋರಿಸ್ತೀನಿ ಅಂತ ಬಮನದಾತನೂ ಅರೆಸ್ಟ್ ಆಗಿದ್ದಾನೆ. ಮುಂದಿನ ದಿನಗಳಲ್ಲಿ ಸೌಜನ್ಯ ಸಾವಿಗೆ ನ್ಯಾಯ ಕೇಳುವ ಹೋರಾಟಗಾರರ ಧಿಕ್ಕು ಯಾವ ರೀತಿ ಬದಲಾಗುತ್ತೆ ಅನ್ನೋದನ್ನ ನೋಡಬೇಕಿದೆ.


















