Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಮಾಜಕ್ಕೆ ಶೇಷ್ಠ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತ ಮಹಾಯೋಗಿ ವೇಮನ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

Facebook
Twitter
Telegram
WhatsApp

 

 

ಸುದ್ದಿಒನ್,  ಚಿತ್ರದುರ್ಗ. ಜ.19:  ಮಹಾತ್ಮರ ಜೀವನ ಸಂದೇಶಗಳನ್ನು ಮಕ್ಕಳಿಗೆ ತಿಳಿಯಪಡಿಸಬೇಕು. ಈ ಉದ್ದೇಶದಿಂದಲೇ ಸರ್ಕಾರ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ, ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಅವರು ಮಾತನಾಡಿದರು.

ಹುಟ್ಟು ಆಕಸ್ಮಿಕ, ಇಂತಹದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಯಾರೂ ಹುಟ್ಟುವುದಿಲ್ಲ. ಎಲ್ಲರೂ ಹುಟ್ಟುತಾ ಮಾನವರಾಗಿ ಇರುತ್ತಾರೆ. ನಂತರ ಸ್ವಭಾವಗಳಿಂದ ಅಲ್ಪ ಮಾನವರಾಗುತ್ತಾರೆ.  ಮಹನೀಯರಾದ ಕೆಲವೇ ಜನರು ವಿಶ್ವಮಾನವರಾಗುತ್ತಾರೆ ಎಂದರು.

ಆಂಧ್ರಪ್ರದೇಶದ ಮಹಾಯೋಗಿ ವೇಮನ, ಕರ್ನಾಟಕದ ಸರ್ವಜ್ಞ, ಮಹಾರಾಷ್ಟ್ರದ ನಾಮದೇವ, ತಮಿಳುನಾಡಿನ ತಿರುವಳ್ಳುವರ್ ಸಮಕಾಲೀನರು. ತಮ್ಮ ರಚನೆಗಳ ಮೂಲಕ ಸಮಾಜದ ಕಂದಾಚಾರ, ಮೂಢನಂಬಿಕೆ, ಸೋಗಲಾಡಿತನವನ್ನು ಪ್ರಶ್ನಿಸಿದರು. ಶೇಷ್ಠ ಮಾನವೀಯ ಮೌಲ್ಯಗಳನ್ನು ಸಾರುವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಮ್ಮ ನಡೆ ನುಡಿಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಆದರೆ ಈ ಮಹನೀಯರು ನಡೆ ನುಡಿಗಳಲ್ಲಿ ಒಂದೇ ಆಗಿ ಬದುಕಿದರು. ನಾವು ಜಗತ್ತಿಗೆ ಮಾದರಿಯಾಗುವುದಕ್ಕಿಂತ ನಮ್ಮ ಮಕ್ಕಳಿಗೆ ಮಾದರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಸರ್ಕಾರಿ ಕಲಾ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಜಿ.ಎನ್.ಯಶೋಧರ ಮಾತನಾಡಿ, ಮಹಾತ್ಮರನ್ನು ಜಾತಿ, ಮತ, ವರ್ಗಗಳಿಗೆ ಸೀಮಿತ ಮಾಡಬಾರದು. ಭೂಪಾಲ ವಂಶದಲ್ಲಿ,  ಅಂದರೆ ರಾಜ ಮನೆತನದಲ್ಲಿ ಹುಟ್ಟಿದ ವೇಮನ ಅವರು ಶರೀರದ ಬಗ್ಗೆ ವೈರಾಗ್ಯ ತಾಳಿ, ಆತ್ಮಸುಖ ಬಯಸಿ ಜ್ಞಾನೋದಯ ಪಡೆದರು. ವೇಮನರ ಈ ಬದಲಾವಣೆಗೆ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಕಾರಣವಾದರು. ಸರಳವಾದ ತೆಲುಗು ಭಾಷೆಯಲ್ಲಿ ವೇಮನರು ತಮ್ಮ ಅನುಭವ ಹಾಗೂ ಜ್ಞಾನವನ್ನು ವಚನಗಳ ಮೂಲಕ ಸಾದರ ಪಡಿಸಿದ್ದಾರೆ. ‘ವಿಶ್ವದಾಭಿ ರಾಮ ವಿನೂರಾ ವೇಮ’ ಎಂಬುದು ಇವರ ಅಂಕಿತನಾಮವಾಗಿದೆ ಎಂದರು.

ರೆಡ್ಡಿ ಸಮಾಜದ ಹಿರಿಯ ಮುಖಂಡ ಗೋವಿಂದ ರೆಡ್ಡಿ ಮಾತನಾಡಿ, ಸಿ.ಪಿ.ಬ್ರಾನ್ ಎಂಬುವವರು ವೇಮನರ ಕವಿತೆಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಆಂಧ್ರ ಪ್ರದೇಶ ಹಾಗೂ ಕರ್ನಾಟಕದಲ್ಲಿ ವೇಮನರ ಕವಿತೆಗಳು ಜನ ಜನಿತವಾಗಿವೆ. ಜೀವನದ ನಶ್ವರತೆ ತಿಳಿದ ವೇಮನರು ನಗ್ನ ವೈರಾಗಿಯಾಗಿ ನಾಡನ್ನು ಸಂಚರಿಸಿ ಲೋಕಜ್ಞಾನ ಹರಡಿದ್ದಾರೆ ಎಂದರು.

ಮೊಳಕಾಲ್ಮೂರು ತಾಲ್ಲೂಕು ತಮಕೊರ್ಲಹಳ್ಳಿ ಕೆ.ಓ. ಶಿವಣ್ಣ ಮತ್ತು ತಂಡದವರು ಜಯಂತಿ ಕಾರ್ಯಕ್ರಮದಲ್ಲಿ ಗೀತಗಾಯನ ಪ್ರಸ್ತುತ ಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ.ಮಲ್ಲಿಕಾರ್ಜುನ್, ತಹಶೀಲ್ದಾರ್ ಡಾ.ನಾಗವೇಣಿ, ರೆಡ್ಡಿ ಸಮಾಜದ ಜಿ.ಹನುಮಂತರೆಡ್ಡಿ, ತಿಪ್ಪೇಸ್ವಾಮಿ ರೆಡ್ಡಿ, ಜಿ.ಅಶ್ವತ್ಥನಾರಾಯಣ ರೆಡ್ಡಿ, ವೆಂಕಟೇಶ್ ರೆಡ್ಡಿ, ನಾಡಿಗರ ರೆಡ್ಡಿ, ಕಟ್ಟಾ ತಿಪ್ಪಾರೆಡ್ಡಿ, ವಿಜಯಕುಮಾರ ರೆಡ್ಡಿ, ಧನಂಜಯ ರೆಡ್ಡಿ, ಟಿ.ಕೆ.ತಿಮ್ಮಾರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್

error: Content is protected !!