ಸುದ್ದಿಒನ್, ಚಿತ್ರದುರ್ಗ,ಅಕ್ಟೋಬರ್.15 : ದಸರಾ ನವರಾತ್ರಿ ಅಂಗವಾಗಿ ಚಿತ್ರದುರ್ಗ ತಾಲ್ಲೂಕಿನ ಲಕ್ಷ್ಮೀ ಸಾಗರದ ಬಳಿ ಇರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಇಂದಿನಿಂದ 9 ದಿನಗಳ ಕಾಲ (ಅಕ್ಟೋಬರ್.15 ರಿಂದ ಅಕ್ಟೋಬರ್ 24 ರವರೆಗೆ) ಅಮ್ಮನವರಿಗೆ 9 ದಿನಗಳ ಕಾಲ ಮಹಾಪೂಜೆ ಇರುತ್ತದೆ.
ಈ ಸಂದರ್ಭದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಸೇವೆ ಇರುತ್ತದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಅಂಬಾ ಭವಾನಿ ದೇವಿಯ ಕೃಪೆಗೆ ಪಾತ್ರರಾಗಬೇಕು ಮತ್ತು ಅಮ್ಮನವರಿಗೆ 9 ದಿನಗಳ ಕಾಲ ನಡೆಯುವ ವಿಶೇಷ ಅಲಂಕಾರಗಳ ಸೇವೆಗಳಿಗೆ ಹೆಸರು ನೋಂದಾಯಿಸಲು ಶ್ರೀ ತುಳಜಾ ಭವಾನಿದೇವಿ ಟ್ರಸ್ಟ್ನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಕ್ತಾಧಿಗಳು ಈ ಕೆಳಕಂಡ ಖಾತೆಗೆ ದೇಣಿಗೆಯನ್ನು ಸಲ್ಲಿಸಬಹುದು.
ಶ್ರೀ ತುಳಜಾ ಭವಾನಿ ದೇವಸ್ಥಾನ ಸೇವಾ ಟ್ರಸ್ಟ್,
ಕೆನೆರಾ ಬ್ಯಾಂಕ್
ಖಾತೆ ಸಂಖ್ಯೆ : 6353101006938
IFSC : CNRB0006353
ಹೊಳಲ್ಕೆರೆ ರಸ್ತೆ ಶಾಖೆ, ಚಿತ್ರದುರ್ಗ ಇವರಿಗೆ ಅಥವಾ ಈ ಕೆಳಗಿನ ಸ್ಕ್ಯಾನರ್ಗೆ ಡಿಜಿಟಲ್ ಪೇಮೆಂಟ್ ಮೂಲಕ ಸಲ್ಲಿಸಬಹುದಾದಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













