Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯ ಸರ್ಕಾರದ ಜನ ವಿರೋಧಿ ನೀತಿ  ಖಂಡಿಸಿ ಬೆಂಗಳೂರಿನಲ್ಲಿ ನವೆಂಬರ್ 26 ರಿಂದ 28ರವರೆಗೆ ಮಹಾ ಸತ್ಯಾಗ್ರಹ : ಕುಮಾರ್ ಸಮತಳ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 20 :  ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ನವೆಂಬರ್ 26 ರಿಂದ 28ರವರೆಗೆ 72 ಗಂಟೆಗಳ ಕಾಲ ಫ್ರೀಡಂ ಪಾರ್ಕಿನಲ್ಲಿ ದುಡಿಯುವ ಜನರ ಮಹಾ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ರವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರಿ ಕಂದಾಯ ಭೂಮಿ ಗೋಮಾಳ, ಖರಾಬು, ಪೋರಂಬೂಕ ಅರಣ್ಯ ಹುಲ್ಲುಬನ್ನಿ ಸೇಂದಿವನ, ಕಾವಲು ಸೋಪ್ಪಿನ ಬೆಟ್ಟ ಅಮೃತ್ ಮಹಲ್ ಕಾವಲುಗಳನ್ನು ಒಳಗೊಂಡಂತೆ ಲಕ್ಷಾಂತರ ಎಕರೆ ಭೂಮಿಯಲ್ಲಿ ಕುಟುಂಬಗಳು ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಈ ಭೂಮಿ ಹಕ್ಕಿಗಾಗಿ ದಶಕಗಳಿಂದ ಅರ್ಜಿಯನ್ನು ಸಲ್ಲಿಸಿ ಭೂಮಿಗಾಗಿ ಕಾತುರದಿಂದ ಇಂದು ಸಿಕ್ಕಿತು ನಾಳೆ ಸಿಕ್ಕಿತು ಎಂದು ಭರವಸೆಯ ಮೇಲೆ ಕಾಯುತ್ತಿದ್ದಾರೆ. ಈ ಮಧ್ಯದಲ್ಲಿ ನಮ್ಮನ್ನು ಇಲ್ಲಿಂದ ಹೂರ ದಬ್ಬುವ ಕಾನೂನುಗಳು ಬರುತ್ತವೆಯೂ ಎಂಬ ಆಂತಕ ಎದುರಾಗಿದೆ. ಈ ಮಧ್ಯದಲ್ಲಿಯೇ ಭೂಮಿಯನ್ನು ಸಾಗುವಳಿ ಮಾಡಲಾಗುತ್ತಿದೆ ಎಂದರು.

‘ಉಳುವವನೇ ಹೊಲದೊಡೆಯ’ ಘೋಷಣೆ ಭೂರಹಿತರಿಗೆ ಜೀವನದಲ್ಲಿ ಹೊಸ ಬೆಳಕನ್ನೇ ತೋರಿಸಿತು. ಅದೇ ಸಮಯದಲ್ಲಿ ಕಾಯ್ದೆ ಇನ್ನೆಷ್ಟು ಶೋಷಿತ ಜನರನ್ನು ತಲುಪಬೇಕಿತ್ತೋಅಷ್ಟನ್ನು ತಲುಪದೇ ಇರುವುದು ಈ ಖಾಯ್ದೆಯ ಮಿತಿಯನ್ನು ತೋರಿಸುತ್ತದಾದರೂ, ಜಾರಿ ಮಾಡುವವರ ಇಚ್ಛಾಶಕ್ತಿಯ ಕೊರತೆಯೇ ಹೆಚ್ಚು ಆದಿವಾಸಿ ಜನರಿಗೆ ಒತ್ತಾಸೆಯಾಗಿ ‘2006ರ ಅರಣ್ಯ ಹಕ್ಕು ಕಾಯ್ದೆ’ ಜಾರಿಗೆ ಬಂದರೂ ‘ಲೆಕ್ಕಕ್ಕಿದೆ. ಜಾರಿಗಿಲ್ಲ’ ಯನ್ನುವಂತಾಗಿದೆ. ಅಧಿಕಾರಿಗಳು ತಮಗಿಷ್ಟ ಬಂದಂತೆ ನೋಡುವ ಹಾಗಾಗಿದೆ.

ಮಲೆನಾಡು ಭಾಗದಲ್ಲಂತೂ ಬಡಜನರ ನಿದ್ದೆಗೆಡಿಸಿದ್ದಾರೆ. ಹತ್ತಾರು ನೂರೆಂಟು ನಿಯಮಗಳು, ಸರ್ಕಾರಿ, ಪೈಸಾರಿ, ಗೋಮಾಳ, ಸೊಪ್ಪಿನ ಬೆಟ್ಟ ಭೂಮಿಗಳೆಲ್ಲವೂ ನಮ್ಮವೇ ಎಂದು ಹೇಳುತ್ತಾ ಕಾಡೊಳಗಿನ ಆದಿವಾಸಿಗಳು, ಕಾಡಂಚಿಲ್ಲಿರುವ ಕಾಡನ್ನೇ ಅವಲಂಬಿಸಿರುವ ಬುಡಕಟ್ಟು ಸಮುದಾಯಗಳಲ್ಲದೆ ಇನ್ನಿತರೆ ಜನ ಪ್ರತಿನಿತ್ಯ ಸಂಘರ್ಷ ಏರ್ಪಟ್ಟಿದೆ. ಬಯಲು ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ. ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ತಿಳುವಳಿಕೆಯೇ ಇಲ್ಲದ ಆಳುವವರಿಂದಾಗಿ ‘ಗ್ರಾಮ ಅರಣ್ಯ ಹಕ್ಕು ಸಮಿತಿ’ ಸಮಿತಿಗಳ ರಚನೆಯೇ ಆಗಿಲ್ಲ. ಅಧಿಕಾರಿಗಳೇ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಎಂದು ದೂರಿದರು.

ಕೇಂದ್ರದ ಬಿಜೆಪಿ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗುವಂತಹ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿ ದೇಶದ ಜನರನ್ನು ದಾಸರನ್ನಾಗಿಸುತ್ತಿದೆ. ದೇಶದ 64 ಭೂಮಿಯನ್ನು ಕಂಪನಿಗಳಿಗೆ ಕೊಡಲು ರೂಪಿಸಿದ್ದ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಗೆ ಒಂದು ವರ್ಷಕಾಲ ಮುತ್ತಿಗೆ ಹಾಕಿ ಸರ್ಕಾರವನ್ನು ಮಣಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಸೋಲೊಪ್ಪಿಕೊಳ್ಳದ ಕೇಂದ್ರ ಸರ್ಕಾರ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜನವಿರೋಧಿ ನೀತಿಗಳನ್ನು ರಾಜ್ಯ ಸರ್ಕಾರಗಳ ಮೂಲಕ ಜಾರಿಗೊಳಿಸುವ ಹುನ್ನಾರ ತಾನೆಷ್ಟು ಕಾರ್ಪೋರೇಟ್ ಕಂಪನಿಗಳ ಪರವಾಗಿದ್ದೇನೆಂದು ಸಾಬೀತು ಪಡಿಸಿದೆ. ಇದೆಲ್ಲದರ ಪರಿಣಾಮವಾಗಿ ಗ್ರಾಮೀಣ ಭಾಗದಲ್ಲಿ ಭೂ ರಹಿತರು. ಅತೀ ಸಣ್ಣ ರೈತರ ಸಂಖ್ಯೆ ಹೆಚ್ಚಾಗುತ್ತಾ ಬದುಕಿಗಾಗಿ ದೂರದ ಊರು, ಪಟ್ಟಣಗಳಲ್ಲಿ ಅಲೆಯುತ್ತಿದ್ದಾರೆ ಎಂದರು.

ಸರ್ಕಾರ ಕೂಡಲೇ ಬಗರ್ ಹುಕುಂ ಸಮಿತಿಗಳನ್ನು ರಚಿಸಬೇಕು. ಮತ್ತು ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಎಲ್ಲಾ ಭೂರಹಿತರಿಗೆ ಭೂಮಿಯ ಹಕ್ಕುಪತ್ರ ನೀಡಬೇಕು.ಅರ್ಜಿ ಸಲ್ಲಿಸಿದ ರೈತರನ್ನು ಯಾವುದೇ ಕಾರಣಕ್ಕೂ ಭೂಮಿಯಿಂದ ಒಕ್ಕಲೇಳಿಸಬಾರದು.ಅರಣ್ಯ ಹಕ್ಕು ಕಾಯ್ದೆ 2006ನ್ನು ಜಾರಿ ಮಾಡುವ ಮೂಲಕ ಅರಣ್ಯವಾಸಿಗಳಿಗೆ ಭೂಮಿ ಮತ್ತು ಅವರು ವಾಸಿಸುವ ಜಾಗಗಳಿಗೆ ಮಂಜೂರಾತಿ ನೀಡಬೇಕು. ಅರಣ್ಯ-ಕಂದಾಯ ಭೂಮಿಗಳ ಜಂಟಿ ಸರ್ವೆ ನಡೆಸಿ, ಭೂರಹಿತರ ಸಾಗುವಳಿ ಭೂಮಿಗಳಿಗೆ ಹಕ್ಕುಪತ್ರ ನೀಡಬೇಕು. ಅರಣ್ಯ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು.

ಅರ್ಜಿ ಸಲ್ಲಿಸಿರುವ ಎಲ್ಲಾ ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ಹಂಚಿಕೆಯಾಬೇಕು. ಸ್ಲಮ್ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕಲ್ಲದೆ ಅವರ ಜಾಗಗಳಿಗೆ ಭದ್ರತೆ ನೀಡಬೇಕು. ಹಲವು ದಶಕಗಳಿಂದ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಜನರ, ನಗರ ಮಿತಿ ವ್ಯಪ್ತಿಯಲ್ಲಿ ತಿರಸ್ಕರಿಸಲ್ಪಟ್ಟ/ಪೆಂಡಿಂಗ್ ನಲ್ಲಿರುವ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಒಂದು ಬಾರಿ ಅವಕಾಶ (ಒನ್ ಟೈಮ್ ಸೆಟಲ್ ಮೆಂಟ್) ಕಲ್ಪಿಸುವ ದೊರಕಿಸಿಕೊಡಬೇಕು. ಮೂಲಕ ನ್ಯಾಯ
ದೂರಕಿಸಿಕೂಡಬೇಕುರೈತರ ಉತ್ಪನ್ನಗಳಿಗೆ ಎಂ.ಎಸ್. ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆ ಹಾಗೂ ಖರೀದಿ ಖಾತ್ರಿ ಒದಗಿಸುವ ಕಾನೂನು ಜಾರಿ ಮಾಡಬೇಕು.

ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಹಾಗೂ ವಿದ್ಯುಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಸಿರುವ ಕಾನೂನು ಹೆಚ್ಚಿಸಬೇಕು. ಎಪಿಎಂಸಿಯನ್ನು ರದ್ದುಗೊಳಿಸಿರುವ ವಾಪಸ್ ತೆಗೆದುಕೊಳ್ಳಬೇಕು.ಭೂಮಿಗಾಗಿ ಹೋರಾಟ ನಡೆಸಿದವರ ಮೇಲೆ ದಾಖಲಿಸಿರುವ ಪೊಲೀಸ್ ಕೇಸುಗಳನ್ನು ವಾಪಸ್ ಪಡೆಯಬೇಕು.ಕೈಗಾರಿಕೆ/ಅಭಿವೃದ್ಧಿ ಹೆಸರಿನಲ್ಲಿ ರೈತರ ಒಪ್ಪಿಗೆಯಿಲ್ಲದೆ, ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನ. 26 ರಿಂದ 28ರವರೆಗೆ 72 ಗಂಟೆಗಳ ಕಾಲ ಫ್ರೀಡಂ ಪಾರ್ಕಿನಲ್ಲಿ ದುಡಿಯುವ ಜನರ ಮಹಾ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಜ್ಯದ ವಿವಿದೆಡೆಗಳಿಂದ ಸಾವಿರಾರು ದುಡಿಯುವ ಜನತೆ ಬರಲಿದ್ದಾರೆ ಚಿತ್ರದುರ್ಗದಿಂದಲೂ ಸಹಾ ಸಾವಿರ ಜನತೆ ಭಾಗವಹಿಸಲಿದ್ದಾರೆ ಎಂದರು.

ಗೋಷ್ಟಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಸತ್ಯಪ್ಪ ಮಲ್ಲಾಪುರ, ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಗೋನೂರು, ಜಿಲ್ಲಾ ಮುಖಂಡರುಗಳಾದ ವೆಂಕಟೇಶ್ ಬಿಬಿಹಟ್ಟಿ, ಸುನಂದಮ್ಮ, ಸಣ್ಣ ವೀರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ನಂಬಿಕೆ ದ್ರೋಹವಾಗಿದೆ,

ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ನಂಬಿಕೆ ದ್ರೋಹವಾಗಿದೆ, ಈ ರಾಶಿಯವರಿಗೆ ಇಷ್ಟವಿಲ್ಲದ ಮದುವೆ, ಸೋಮವಾರ- ರಾಶಿ ಭವಿಷ್ಯ ಡಿಸೆಂಬರ್-11,2023 ಸೂರ್ಯೋದಯ: 06.31 AM, ಸೂರ್ಯಾಸ್ತ : 05.54 PM ಶಾಲಿವಾಹನ ಶಕೆ1944, ಶುಭಕೃತ ನಾಮ

ವಿದ್ಯಾರ್ಥಿಯ ಪರಿಪೂರ್ಣತೆ ಹಾಗೂ ವಿಕಸನಕ್ಕೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಪೂರಕ : ಆರ್. ಪುಟ್ಟಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 10 :  ವಿದ್ಯಾರ್ಥಿಯ ಪರಿಪೂರ್ಣತೆ ಹಾಗೂ ವಿಕಸನಕ್ಕೆ ಪಠ್ಯ ಸಹಿತ ಪಠ್ಯೇತರ ಚಟುವಟಿಕೆಗಳು ಪೂರಕವಾಗುತ್ತವೆ.

ಈ ವಾರ ಬಿಗ್ ಬಾಸ್ ಮನೆಯಿಂದ ಬರ್ತಾ ಯಾರು ಗೊತ್ತಾ..? ಸುದೀಪ್ ಕೊಟ್ಟ ಅವಕಾಶವನ್ನು ಬಳಸಿಕೊಳ್ಳಲಾಗಲಿಲ್ವಾ..?

ಬಿಗ್ ಬಾಸ್ ಸೀಸನ್ 10.. ಈ ವಾರವಂತು ಸಾಕಷ್ಟು ಕಠಿಣವಾಗಿತ್ತು. ಬಿಗ್ ಬಾಸ್ ಏನೋ ನಿರೀಕ್ಷೆ ಮಾಡಿ ಕೊಟ್ಟ ಟಾಸ್ಕ್ ಸಂಪೂರ್ಣವಾಗಿ ಬೇರೆ ರೀತಿಯಾಗಿಯೇ ಟರ್ನ್ ಆಗಿತ್ತು. ರಾಕ್ಷಸರು ಹಾಗೂ ಗಂಧರ್ವರು ಅಂತ ಮಾಡಿದ್ದು

error: Content is protected !!