ಮೈಸೂರು: ಕೇಂದ್ರದಿಂದ ರಾಜ್ಯಕ್ಕೆ ಜಿಎಸ್ಟಿ ಸಂಬಂಧ ಅನ್ಯಾಯ ಆಗ್ತಾ ಇರೋದು ಇದು ಮೊದಲೇನು ಅಲ್ಲ. ಈ ಸಂಬಂಧ ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರವನ್ನ ಮನವಿ ಕೂಡ ಮಾಡಿದ್ದಾರೆ. ಈಗ ಮತ್ತೊಮ್ಮೆ ಜಿಎಸ್ಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಜಿಎಸ್ಟಿ 2017ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ರೇಟ್ ಜಾಸ್ತಿ ಮಾಡಿದವರು ಯಾರು..? ಅವರೇ. ಎಂಟು ವರ್ಷದ ಮೇಲೆ ಕಡಿಮೆ ಮಾಡಿದ್ದೀವಿ ಅಂತಾರೆ. ಹಾಗಾದ್ರೆ ಎಂಟು ವರ್ಷ ತೆರಿಗೆ ತೆಗೆದುಕೊಂಡರಲ್ಲ ಅದನ್ನ ವಾಪಾಸ್ ಕೊಡ್ತಾರಾ..? ಇದರಲ್ಲಿ ಬೆನ್ನು ತಟ್ಟಿಕೊಳ್ಳುವಂತದ್ದೇನು. ಬಿಹಾರದಲ್ಲಿ ಚುನಾವಣೆ ಬಂದಿದೆ. ಅದಕ್ಕೋಸ್ಕರ ನಾವೂ ಸರಳೀಕರಣ ಮಾಡಿದ್ದೀವಿ, ತೆಗೆದು ಹಾಕಿದ್ದೀವಿ ಅಂದ್ರೆ ಇದು ನ್ಯಾಯನಾ..? ಎಂಟು ವರ್ಷ ವಸೂಲಿ ಮಾಡಿದ್ದಾರೆ. ಜಿಎಸ್ಟಿ ರೇಟ್ ಹಾಕಿ ವಸೂಲಿ ಮಾಡಿದ್ದಾರೆ.
ನೀವೆಲ್ಲಾ ಅವರ ಪರವಾಗಿ ಬರೀತೀರಿ. ಚಾಲೆಂಜಸ್ ಇದೆ ನಮಗೂ ಆದ್ರೂ ನಮ್ಮ ಸರ್ಕಾರ ಅನೌನ್ಸ್ ಮಾಡಿದ ಯೋಜನೆಗಳನ್ನ ಮಾಡ್ತೇವೆ. ಈ ಕಡಿಮೆ ಮಾಡಿರುವುದು ಕೇಂದ್ರ ಸರ್ಕಾರಕ್ಕೆ ನಷ್ಟ ಆಗಲ್ಲ. ರಾಜ್ಯಗಳಿಗೆ ನಷ್ಟ ಆಗುತ್ತೆ. ನಮಗೇನೆ 15,000 ಕೋಟಿ ನಷ್ಟ ಆಗುತ್ತೆ. ಎಂಥ ಇಕ್ಕಟ್ಟಿನ ಪರಿಸ್ಥಿತಿ ಇದೆ ಅಂದ್ರೆ ಜಿಎಸ್ಟಿ ದರ ಕಡಿಮೆ ಮಾಡಿರುವುದನ್ನ ವಿರೋಧಿಸುವಂತಿಲ್ಲ ಸ್ವಾಗತ ಮಾಡಬೇಕು. ನಷ್ಟ ಆಗುವುದು ನಮಗೆ. ಕೇಂದ್ರಕ್ಕೂ ರಾಜ್ಯದ ಕಷ್ಟಗಳು ಅರ್ಥ ಆಗುತ್ತೆ. ಆದ್ರೆ ಅವರಿಗೆ ಬೇಕಾದ ರಾಜ್ಯಗಳಿಗೆ ಕೊಡುತ್ತಾರೆ. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಒಡಿಸ್ಸಾ, ಉತ್ತರಪ್ರದೇಶಗಳಿಗೆ ಕೊಟ್ಟುಕೊಳ್ತಾರೆ. ಬೇರೆ ರಾಜ್ಯಗಳು ಏನಾದರೂ ಆಗಲಿ ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












