Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಲೋಕಸಭಾ ಚುನಾವಣೆ ಮುಗಿದಿದೆ.. ಸಿದ್ದರಾಮಯ್ಯ ಸರ್ಕಾರ ಬೀಳುತ್ತಾ..? ಕೋಡಿಮಠದ ಶ್ರೀಗಳು ಹೇಳಿದ್ದೇನು..?

---Advertisement---

ಕೋಡಿಮಠದ ಶ್ರೀ ಶಿವಯೋಗಿ ಶಿವಾನಂದ ಸ್ವಾಮೀಜಿ ಹೇಳಿರುವ ಭವಿಷ್ಯ ಸಾಕಷ್ಟು ನಿಜವಾಗಿದೆ. ಪ್ರಕೃತಿ ವಕೋಪಗಳ ಬಗ್ಗೆ, ರಾಜಕೀಯದ ಬಗ್ಗೆಯೂ ಸಾಕಷ್ಟು ಭವಿಷ್ಯ ನುಡಿಯುತ್ತಾರೆ. ಅದೆಲ್ಲವೂ ನಿಜ ಕೂಡ ಆಗಿದೆ. ಇದೀಗ ಸಿದ್ದರಾಮಯ್ಯ ಸರ್ಕಾರದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ನಾಯಕರು ಲೋಕಸಭಾ ಚುನಾವಣೆಯ ಬಳಿಕ ಖಂಡಿತ ಕಾಂಗ್ರೆಸ್ ಪಕ್ಷ ಬೀಳಲಿದೆ ಎಂಬ ಮಾತನ್ನೇ ಆಡುತ್ತಿದ್ದರು. ಇದೀಗ ಲೋಕಸಭಾ ಚುನಾವಣೆಯೂ ಮುಗಿದಿದೆ. ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಕೋಡಿ ಮಠದ ಶ್ರೀಗಳು ಒಳ್ಳೆಯ ಭವಿಷ್ಯವನ್ನೇ ನುಡಿದಿದ್ದಾರೆ. ‘ಗುರುಗಳು ಶಿಷ್ಯರಾಗುತ್ತಾರೆ. ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ಶ್ರಾವಣದಲ್ಲಿ ನಾನು ಮತ್ತೊಂದು ಸ್ಪೋಟಕ ಭವಿಷ್ಯ ನುಡಿಯುತ್ತೇನೆ. ದೇಶದಲ್ಲಿ ಕ್ರೋಧಿ ನಾಮ ಸಂವತ್ಸರವಿದೆ. ಶುಭಗಳಿಗೆಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ದೇಶದಲ್ಲಿ ಜಲಕಂಟಕ, ವಾಯುಕಂಟಕ, ಅಗ್ನಿಕಂಟಕಗಳೇ ಹೆಚ್ಚಾಗಲಿವೆ. ರಾಜ್ಯದಲ್ಲಿ ಈ ಬಾರಿ ಅತಿವೃಷ್ಠಿ ಸಾಧ್ಯತೆ ಇದೆ’ ಎಂದಿದ್ದಾರೆ.

ಕೇಂದ್ರ ಸರ್ಕಾರ ಭವಿಷ್ಯವನ್ನು ಶ್ರಾವಣದಲ್ಲಿ ಹೇಳುತ್ತಾರೆ ಎನ್ನಲಾಗಿದೆ. ಎನ್‌ಡಿಎ ಸರಳ ಮತಗಳ ಮೂಲಕ ತಮ್ಮ‌ ಸರ್ಕಾರವನ್ನು ಸ್ಥಾಪಿಸಿದೆ. ಕೇಂದ್ರ ಸರ್ಕಾರ ಹಾಗೂ ಮೋದಿ ಬಗ್ಗೆ ಶ್ರಾವಣದಲ್ಲಿ ಭವಿಷ್ಯ ನುಡಿಯುತ್ತೇನೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಭವಿಷ್ಯ ಕೇಳಲು ಎಲ್ಲರೂ ಉತ್ಸುಕರಾಗಿದ್ದಾರೆ. ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯ ಸತ್ಯವಾಗುವ ಕಾರಣ, ಶ್ರಾವಣದಲ್ಲಿ ಯಾವ ರೀತಿಯ ಭವಿಷ್ಯವನ್ನು ಹೇಳಬಹುದು ಎಂಬ ಕುತೂಹಲವಿದೆ. ಇನ್ನು ರಾಜ್ಯ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಸರ್ಕಾರ ಸೇಫ್ ಎಂಬುದನ್ನು ತಿಳಿಸಿದ್ದಾರೆ‌.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...