Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಧ್ಯಯನ ಶೀಲತೆಯ ಸಾಹಿತ್ಯ ಯುವ ಸಮುದಾಯಕ್ಕೆ ಆಧಾರ : ಶಾಸಕ ಟಿ. ರಘುಮೂರ್ತಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 05 : ಅಧ್ಯಯನ ಶೀಲತೆಯಿಂದ ರೂಪಗೊಳ್ಳುವ ಸಾಹಿತ್ಯ ಯುವ ಸಮುದಾಯಕ್ಕೆ ಆಧಾರ. ಅಧ್ಯಯನ ಶೀಲ ಸಾಹಿತ್ಯ ಸಮಾಜದಲ್ಲಿ ಉಳಿದು ಕೊಳ್ಳುತ್ತದೆ ಎಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು.

ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹುಣ್ಣುಮೆ ಪ್ರಕಾಶನ ಇವರ ವತಿಯಿಂದ ಹಮ್ಮಿಕೊಂಡಿದ್ದ ಡಾ.ಜಿ.ವಿ. ಆನಂದ ಮೂರ್ತಿ ಅವರ ಕರಿಮಲೆಯಿಂದ ಕೊಂಕಿ ಜರಮಲೆವರೆಗೆ’ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಟಾಟನೆ ಮಾಡಿ ಮಾತನಾಡಿದರು.

 

ಜಿ.ವಿ. ಆನಂದ ಮೂರ್ತಿ ಅವರು ಸುಮಾರು ಹತ್ತು ವರ್ಷಗಳ ಕಾಲಗೊಲ್ಲ ಸಮುದಾಯದ ಜನಜೀವನದ ಪದ್ದತಿಗಳನ್ನು ಅಧ್ಯಯನ ನಡೆಸಿ, ಬರೆದಿರುವ ಕೃತಿ ಪ್ರತಿಯೊಬ್ಬ ಓದುಗರ ಮನ ತಲುಪಲಿ. ಗೊಲ್ಲರ ಮತ್ತು ಮ್ಯಾಸ ನಾಯಕರ ಆಚಾರ ಪದ್ದತಿಗಳು ಮತ್ತು ಮನೆತನದ ಗುಡಿಕಟ್ಟೆ ದೇವರ ಅನುಸರಣೆಯಲ್ಲಿ ಹೊಲಿಕೆ ಇದೆ. ಗೊಲ್ಲರ ಹಟ್ಟಿಗಳಲ್ಲಿ ಮುಗ್ದತೆ ಕಾಣುತ್ತೇವೆ. ದೇವತಾ ಆರಾಧನಾ ಪದ್ದತಿಗಳ ನಂಬಿಕೆವುಳ್ಳವರು. ಇಂತಹ ಕುರುಹುಗಳು ದಾಖಲೆಯಾಗಿ ಉಳಿಯುವಂತೆ ಸಾಹಿತ್ಯ ರಚನೆ ಆಗಬೇಕು ಎಂದು ಹೇಳಿದರು.

 

ಕೊಂಕಿಜರಮಲೆವರೆಗೆ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್, ಬುಡಕಟ್ಟು ಸಂಸ್ಕೃತಿ ಪದ್ದತಿಯನ್ನು ವಿಶ್ಲೇಷಣೆ ದೃಷ್ಟಿಯಿಂದ ನೋಡಬೇಕೆ ಹೊರೆತು, ತನಿಖೆಯಾಗಿ, ಟೀಕಾಕಾರರಾಗಿ ಅಲ್ಲ. ಜಿ.ವಿ. ಆನಂದ ಮೂರ್ತಿ ಸ್ವತಃ ಗೊಲ್ಲ ಜನಾಂಗ ಅಲ್ಲ. ಆದರೂ, ವಿಶಿಷ್ಟ ಆಚರಣೆ ಪದ್ದತಿಗಳನ್ನು ಬದುಕಾಗಿಸಿಕೊಂಡ ಗೊಲ್ಲರ ಜನ ಜೀವನ ಸಂಸ್ಕೃತಿಯನ್ನು ಅಧ್ಯಯನದ ಮೂಲಕ ದಾಖಲು ಮಾಡಿದ್ದಾರೆ.‌ ಕೃಷ್ಣ ನದಿ ತೀರದ ನಾಗರಿಕತೆಯಿಂದ ಗುಂಪಾಗಿ ಚದುರಿದ ಗೊಲ್ಲ ಜನಾಂಗ, ರಾಜ್ಯದ ಚಿತ್ರದುರ್ಗ, ಬಳ್ಳಾರಿ, ತುಮಕೂರು ಭಾಗ ಸೇರಿ ಆಂಧ್ರ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಕಾಣುತ್ತೇವೆ. ಸಂಖ್ಯಾತವಾಗಿ ಕಡಿಮೆ ಅನಿಸಿದರೂ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿನ್ನೆಲೆಯಲ್ಲಿ ವಾಸ್ತವ ಬದಲಾವಣೆಗೆ ಅನುಸಂಧಾನ ನಡೆಸುವ ಪದ್ದತಿ ಈ ಜನಾಂಗದ ವಿಶೇಷ. ಮ್ಯಾಸ ನಾಯಕರ ಮತ್ತು ಗೊಲ್ಲರ ಮೂಲ ಶ್ರೀಶೈಲ ಎನ್ನುತ್ತೇವೆ. ಬೆಡಗು ಮತ್ತು ಜಾತ್ರಾ ಉತ್ಸವ ಆಚರಣೆಗಳಲ್ಲೂ ಸಾಮ್ಯತೆ ಕಾಣುತ್ತೇವೆ. ಹುಲ್ಲುಗಾವಲು ಪ್ರಾಂತ್ಯ ಮ್ಯಾಸ ನಾಯಕರ ಅಧಿಪತ್ಯ. ಪಶುಪಾಲನೆ ವೃತ್ತಿಯ ಗೊಲ್ಲರಿಗೆ ಬೇಕಾದ ಹುಲ್ಲುಗಾವಲಿಗೆ ಯುದ್ದಗಳಾಗಿವೆ.ಜನಾಂಗದ ಈರಗಾರರನ್ನು ಹೋರಾಟಗಾರಾಗಿ ಕಾಣುತ್ತೇವೆ ಎಂದು ಹೇಳಿದರು.

ಕೃತಿಕಾರ ಡಾ.ಜಿ.ವಿ. ಆನಂದ ಮೂರ್ತಿ, ಪ್ರಕಾಶಕ ಡಾ.ಎನ್. ಆರ್. ತಿಪ್ಪೇಸ್ವಾಮಿ, ಡಾ. ಕಲಮರಹಳ್ಳಿ ಮಲ್ಲಿಕಾರ್ಜುನ‌್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಾಹಿತ ತಿಪ್ಪಣ್ಣ ಮರಿಕುಂಟೆ ತಾಲೂಕು ಕಾಡು ಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಸಾಹಿತಿ ಡಾ. ಸಿ. ಶಿವಲಿಂಗಪ್ಪ, ನಾಟಕ ಅಕಡಾಮಿ ಮಾಜಿ ಸದಸ್ಯ ಪಿ. ತಿಪ್ಪೇಸ್ವಾಮಿ ಇಓ ಎಚ್ ಶಶಿಧರ್ ,ಗದ್ದಿಗೆ ತಿಪ್ಪೇಸ್ವಾಮಿ, ನಿಸರ್ಗ ಗೋವಿಂದ್ ರಾಜ್, ಕೋಲಾಟ ಜಾನಪದ ಕಲಾವಿದ ನರಸಜ್ಜ ಹಾಗೂ ಜಾನಪದ ಕಲಾವಿದೆ ಸಿರಿಯಮ್ಮ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು..

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...