Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಅಪ್ಪನಂತೆ ನಾನು ಕೂಡ : ರೈತರ ಹೋರಾಟದ ಬಗ್ಗೆ ವಿಜಯೇಂದ್ರ ಹೇಳಿದ್ದೇನು..?

---Advertisement---

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ 6 ದಿನಗಳಿಂದ ರೈತರು ಹೋರಾಟ ಮಾಡ್ತಾ ಇದ್ದಾರೆ. ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಎಂದು ತೀವ್ರ ಹೋರಾಟ ಮಾಡುತ್ತಿದ್ದಾರೆ. ನಿಗದಿತ ಬೆಲೆಯನ್ನ ಸರ್ಕಾರ ನೀಡುವ ತನಕ ನಾವೂ ಹೋರಾಟವನ್ನು ಕೈಬಿಡಲ್ಲ ಎಂಬ ಮಾತನ್ನು ಹೇಳಿದ್ದಾರೆ. ರೈತರ ಹೋರಾಟಕ್ಕೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಕೈ ಜೋಡಿಸಿದ್ದಾರೆ. ಇದೆ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆಗಿದ್ದಾರೆ.

ಭಾರತೀಯ ಜನತಾ ಪಾರ್ಟಿ ಕಬ್ಬು ಬೆಳೆಗಾರರು ಮಾಡುತ್ತಿರುವ ಹೋರಾಟಕ್ಕೆ ಬರೀ ಬೆಂಬಲವನ್ನಷ್ಟೇ ಸೂಚಿಸುವುದಕ್ಕೆ ಬಂದಿರೋದಲ್ಲ. ಕಬ್ಬು ಬೆಳೆಗಾರರ ಬೇಡಿಕೆಗಳು ಏನಿದಾವೆ, ಅದಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಬೇಕು. ಅಲ್ಲಿಯವರೆಗೂ ಜೊತೆಗೆ ಇರ್ತೀವಿ. ದುರಂತ ಏನು ಅಂದ್ರೆ ಈ ರಾಜ್ಯದ ಮುಖ್ಯಮಂತ್ರಿಗಳು ಈ ನಾಡಿನ ರೈತರ ಬಗ್ಗೆ ಕಿಂಚಿತ್ತು ಕಾಳಜಿಯನ್ನ ತೋರಿಸುತ್ತಿಲ್ಲ. ಅತಿವೃಷ್ಟಿ ಸಂದರ್ಭದಲ್ಲೂ ರಾಜ್ಯ ಸರ್ಕಾರ ಯಾವ ರೀತಿ ಮೈಮರೆತಿತ್ತು ಎಂಬುದನ್ನ ನೋಡಿದ್ದೇವೆ.

 

ಈಗ ರೈತ ಬೀದಿಗಿಳಿದು ಹೋರಾಟ ಮಾಡ್ತಾ ಇದ್ದರು, ಇಲ್ಲಿನ ಸಚಿವರು, ಶಾಸಕರು ಯಾರು ಬೆಂಬಲವನ್ನ ನೀಡ್ತಾ ಇಲ್ಲ. ಅವರು ದೇಶಕ್ಕೆ ಅನ್ನ ಕೊಡುವ ರೈತರು. ಹೀಗಾಗಿ ಅವರ ಋಣ ನಮ್ಮ ಮೇಲಿದೆ. ಅವರಿಗೆ ಬೆಂಬಲ ನೀಡಬೇಕು. ಈ ನಾಡುಕಂಡಂತ ಧೀಮಂತ ರೈತ ನಾಯಕ ಬಿಎಸ್ ಯಡಿಯೂರಪ್ಪ ಅವರು. ರೈತರ ಪರವಾದಂತ ಬಜೆಟ್ ಕೊಟ್ರು. ಕೃಷಿ ಬಜೆಟ್ ಕೊಟ್ರು. ರೈತರಿಗೆ ಏನೆಲ್ಲಾ ಸಹಾಯವಾಗಬೇಕು ಆ ರೀತಿ ನಡೆದುಕೊಂಡರು. ಇಂದು ನಾನು ಕೂಡ ರೈತರ ಪರವಾಗಿ, ತಂದೆಯಂತೆಯೇ ನಿಂತಿದ್ದೀನಿ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಿ ಬಂದಿಲ್ಲ. ಬದಲಿಗೆ ಯಡಿಯೂರಪ್ಪ ಮಗನಾಗಿ ಬಂದಿದ್ದೇನೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...