ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 15 : ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಗಣಿಬಾಧಿತ ಪ್ರದೇಶಕ್ಕೆ ಒಳಪಟ್ಟಿರುವ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ, ಗಣಿಬಾಧಿತವಲ್ಲದ ಗ್ರಾಮ ಪಂಚಾಯಿತಿಗಳಿಗೆ ನಿವೇಶನಗಳನ್ನು ಗ್ರಾಮಸಭೆಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಜಿಪಂ ಸಿಇಒ ಆದೇಶ ಹೊರಡಿಸಿರುತ್ತಾರೆ. ಮೂಲ ಗಣಿಭಾದಿತ ಹಳ್ಳಿಗಳಿಗೆ ಮಾತ್ರ ನಿವೇಶನ ಹಂಚಿಕೆ ಮಾಡಬೇಕೆಂದು ಕರ್ನಾಟಕ ರಾಜ್ಯ ಗಣಿಭಾದಿತ ಪ್ರದೇಶ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಹೆಚ್. ರಮೇಶ್ ಬಿ ದುರ್ಗ ಇವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಿಇಒ ಅವರು ಹೊರಡಿಸುವ ಆದೇಶವನ್ನು ಈ ಕೂಡಲೇ ರದ್ದುಗೊಳಿಸಲು ಮನವಿ ಸಲ್ಲಿಸಿದರು.

ವಾಸ್ತವಿಕವಾಗಿ ಗಣಿಭಾದಿತ ಪ್ರದೇಶಕ್ಕೆ ಅತಿ ಹೆಚ್ಚು ಗಣಿ ಚಟುವಟಿಕೆಯಿಂದ ಭಾದಿತವಾಗಿರುವ ಪಂಚಾಯಿತಿಗಳಾದ ಬಿ.ದುರ್ಗ, ಮುತ್ತುಗದೂರು, ಅಂದನೂರು, ಗುಂಟನೂರು, ಸಿರಿಗೆರೆ, ಅಳಗವಾಡಿ, ಹಿರೇಗುಂಟನೂರು, ಭೀಮಸಮುದ್ರ, ದೊಡ್ಡಾಲಘಟ್ಟ, ಸಿದ್ದಾಪುರ, ಈ ಮೇಲ್ಕಂಡ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಗಣಿಯ ಮತ್ತು ಲಾರಿಗಳ ಧೂಳಿನಿಂದ ಸುತ್ತ ಮುತ್ತ ವಾಸಿಸುವ ಜನಗಳ ಆರೋಗ್ಯದ ಮೇಲೆ ಅಪಾರ ದುಷ್ಪರಿಣಾಮ ಭೀರುತ್ತಿವೆ ಎಂದು ಹೆಚ್. ರಮೇಶ್ ದೂರಿದರು.

ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್ ಹಾಗೂ ಕರುಳು ಕ್ಯಾನ್ಸರ್ ಮಾನಸಿಕ ಖಿನ್ನತೆ ಮತ್ತು ಗರ್ಭಿಣಿ ಹೆಣ್ಣು ಮಕ್ಕಳ ಮೇಲೆ ಮತ್ತು ಭ್ರೂಣದಲ್ಲಿಯೇ ಗಣಿ ಧೂಳಿನಿಂದ ಸಾವನ್ನಪ್ಪುತ್ತಿವೆ. ಮತ್ತು ಗಣಿ ಧೂಳಿನಿಂದ ರೈತರಿಗೆ ದುಷ್ಪರಿಣಾವೇನೆಂದರೆ, ರೈತರ ಮುಖ್ಯ ಬೆಳೆಗಳಾದ ಹತ್ತಿ,ಅವರೆ, ಹೆಸರು,ಉದ್ದು, ತೊಗರಿ,ಜೋಳ, ಬಿಳಿಜೋಳ ಮತ್ತು ಎಣ್ಣೆಕಾಳುಗಳ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ, ಮತ್ತು ತೋಟಗಾರಿಕೆ ಬೆಳೆಗಳಾದ ಹೂವು, ತೆಂಗು, ಅಡಿಕೆ, ಹಲಸು,ಪಪ್ಪಾಯ, ಮಾವು ಇನ್ನುಳಿದ ಬೆಳೆಗಳಿಗೆ ಪರಾಗ ಸ್ಪರ್ಶದಿಂದ ಬೆಳೆಯುತ್ತವೆ. ಗಣಿ ಧೂಳಿನಿಂದ ಆಗುವ ಪರಿಣಾಮ ಜೇನು ಹುಳುಗಳು ಬಂದು ಪರಾಗಸ್ಪರ್ಶ ಮಾಡದೆ ಸಂಪೂರ್ಣವಾಗಿ ಬೆಳೆಗಳ ಇಳುವರಿ ಕಡಿಮೆಯಾಗಿದ್ದು, ರೈತರು ತಂಬಾ ಶೋಚನೀಯ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ, ವಕೀಲರಾದ ಮಾಲತೇಶ್ ಅರಸ್ ಹೇಳಿದರು.

ಆದ ಕಾರಣ ತಾವುಗಳು ಈ ಕೂಡಲೆ ಉನ್ನತವಾದ ತಂಡವನ್ನು ರಚಿಸಿ ತನಿಖೆ ಮಾಡಬೇಕು. ಮತ್ತು ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಹಾಗೂ ಅಂತರ್ಜಲಮಟ್ಟ ತುಂಬಾ ಆಳಕ್ಕೆ ಹೋಗಿದ್ದು ಅಂದರೆ ಒಂದು ಸಾವಿರದ ಅಡಿಯಿಂದ ಒಂದೂವರೆ ಸಾವಿರ ಅಡಿವರೆಗೂ ಕೊರೆದರೂ ಹಳ್ಳಿಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಚಿತ್ರದುರ್ಗ ಗಣಿಭಾದಿತ ಪ್ರದೇಶದಲ್ಲಿ ಅಂತರ್ಜಲ ಸಂಪೂರ್ಣವಾಗಿ ಕುಸಿದಿದೆ. ಇದನ್ನು ಸರಿಪಡಿಸ ಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗಣಿಭಾದಿತ ಪ್ರದೇಶ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಹೆಚ್. ರಮೇಶ್ ಬಿ ದುರ್ಗ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ, ವಕೀಲರಾದ ಮಾಲತೇಶ್ ಅರಸ್, ಸಂಚಾಲಕರಾದ ಟಿ.ರುದ್ರಮುನಿ, ಯಶವಂತ್, ಅಜಯ್, ಗಣಿಭಾದಿತ ಪ್ರದೇಶ ಹೋರಾಟ ಸಮಿತಿ ಮುಖಂಡರಾದ ವಿಶ್ವನಾಥನಹಳ್ಳಿ ಎಸ್. ರಂಗಸ್ವಾಮಿ, ಗಂಜಿಗಟ್ಟೆ ರಮೇಶ್ ನಾಯ್ಕ, ವೆಂಕಟೇಶ್ ನಾಯ್ಕ, ಮೋಹನ್, ಸಾಸಲು ಸ್ಟುಡಿಯೋ ಕುಮಾರ್, ಚಂದ್ರೇಗೌಡ, ಮರುಳಸಿದ್ದಪ್ಪ, ಕೆ.ಎನ್ .ಹಳ್ಳಿ ಅಜ್ಜಪ್ಪ, ಕಾಗಳಗೆರೆ ಓಂಕಾರಪ್ಪ, ನಿಂಗರಾಜ್, ಮದಕರಿಪುರ ಟಿ. ಆರ್. ರಂಗನಾಥ್ , ಚಂದ್ರಪ್ಪ ಇತರರು ಇದ್ದರು.

