Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತೀಯ ಜೀವ ವಿಮಾ ನಿಗಮ | ದೇಶದಲ್ಲಿಯೇ ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆ : ಎಸ್. ಹನುಮಂತ ನಾಯಕ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆಪ್ಟೆಂಬರ್. 03 : ನಗರದ ಭಾರತೀಯ ಜೀವ ವಿಮಾ ನಿಗಮ ಶಾಖೆ ವತಿಯಿಂದ ಏರ್ಪಡಿಸಿದ 68ನೇ ವರ್ಷದ ವಿಮಾ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಶಾಖಾ ವ್ಯವಸ್ಥಾಪಕ ಎಸ್. ಹನುಮಂತ ನಾಯಕ ನೆರವೇರಿಸಿದರು.

ನಂತರ ಮಾತನಾಡಿ ಭಾರತೀಯ ಜೀವ ವಿಮಾ ಸಂಸ್ಥೆ ದೇಶದಲ್ಲಿಯೇ ಏಕೈಕ ಅತ್ಯುತ್ತಮ ವಿಶ್ವಾಸವುಳ್ಳ  ವಿಮಾ ಸಂಸ್ಥೆಯಾಗಿದೆ, ದೇಶದ ಬಹುತೇಕ ಜನರು ಈ ವಿಮಾ ಸಂಸ್ಥೆಯ ಬಗ್ಗೆ ಅತ್ಯಂತ ವಿಶ್ವಾಸವನ್ನು ಇಟ್ಟುಕೊಂಡಿದ್ದು ವಿಮಾ ಪಾಲಸಿದಾರರಾಗಿದ್ದಾರೆ. ಹಾಗಾಗಿ ನಾವುಗಳೆಲ್ಲಾರು ಸಹಕಾರ ಸಹಬಾಳ್ವೆಯಿಂದ ವಿಮಾ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸೋಣಾ ಎಂದರು.

ನಾನು ಈ ಶಾಖೆಗೆ ಹೊಸದಾಗಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನಿಮ್ಮಗಳ ಸಹಕಾರ ಬಹಳ ಮುಖ್ಯವಾಗಿದೆ ವ್ಯವಸ್ಥಾಪಕ ಮತ್ತು ಸಿಬ್ಬಂದಿ ವರ್ಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಿಮ್ಮಗಳ ಸಹಕಾರದಿಂದ ನನ್ನ ಸೇವಾ ಅವಧಿಯಲ್ಲಿ ನಮ್ಮ ಶಾಖೆ ವಿಭಾಗ ಮಟ್ಟದಲ್ಲಿ  ಅತ್ಯುನ್ನತ ಗುರಿ ಮತ್ತು ಶ್ರೇಣಿ  ತಲುಪುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿ ಎಲ್ಲರಿಗೂ ವಿಮಾ ಸಪ್ತಾಹದ  ಶುಭಾಶಯಗಳನ್ನು ತಿಳಿಸಿದರು.

 

ಈ ಸಂದರ್ಭದಲ್ಲಿ ಸಹಾಯಕ ಶಾಖ ವ್ಯವಸ್ಥಾಪಕ ಲಕ್ಷ್ಮಿಕಾಂತ್, ಹಿರಿಯ ಆಡಳಿತ ಅಧಿಕಾರಿ ಸೀತಾ ಲಕ್ಷ್ಮಿ ಅಭಿವೃದ್ಧಿ ಅಧಿಕಾರಿ ಮಹೇಶ್ ಎ . ಓ. ಶ್ಯಾಮಣ್ಣ ಎ. ಎ.ಓ. ಯತೀಶ್ ಸಾಂಸ್ಕøತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಚಂದ್ರು ಎಚ್.ಜಿ.ಎ.ಗಳಾದ ರೇಣುಕಾ ಇಂದಿರಾ ಮಮತಾ ನಿರ್ಮಲ ಸುಮಾ  ಗೀತಾ ಗಿರಿವಾಣಿ ಶೇಷಾದ್ರಿ  ಶ್ರೀನಿವಾಸ್ ಮಹಿಳಾ ಪ್ರತಿನಿಧಿ ಕೆ. ಸುಜಾತ ತ್ರಿವೇಣಿವೀಣಾ ದೇವರಾಜ್ ವಿವಿಧ ಶ್ರೇಣಿಯ ವಿಮಾ ಪ್ರತಿನಿಧಿಗಳು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...