Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿಕ್ಕಬಳ್ಳಾಪುರ ಭಾಗದಲ್ಲಿ ಒಂದು ಸೀಟ್ ಗೆಲ್ಲಿ ನೋಡೋಣಾ : ವಿಜಯೇಂದ್ರ ವಿರುದ್ಧ ಸಿಡಿದೆದ್ದ ಸುಧಾಕರ್

---Advertisement---

ಬೆಂಗಳೂರು: ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೆ.ಸುಧಾಕರ್ ಕೂಡ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ. ಯಾರೂ ಪಕ್ಷಕ್ಕಾಗಿ ದುಡಿದಿದ್ದಾರೆ ಅಂಥವರನ್ನ ಕೈ ಬಿಡ್ಯಾರೆ. ಯಾರದ್ದೂ ಪಕ್ಷಕ್ಕೇನು ಕೊಡುಗೆ ಇಲ್ಲ ಅಂಥವರನ್ನ ಅಧ್ಯಕ್ಷರನ್ನಾಗಿ ಮಾಡ್ತೀರಿ. ಯಾಕೆ ಸಮಾಲೋಚನೆ ಮಾಡಲಿಲ್ಲ. ಕೋರ್ ಕಮಿಟಿ ಮೀಟಿಂಗ್ ಆಗಿದೆ. ಚಿಕ್ಕಬಳ್ಳಾಪುರದ ವಿಚಾರ ಯಾಕೆ ಬಂದಿಲ್ಲ. ಹದಿಮೂರು ಜಿಲ್ಲೆಯ ಚರ್ಚೆಯೇ ಆಗಿಲ್ಲ. ಇವತ್ತು ನೋಡಿದ್ರೆ ಪ್ರಕಟಿಸ್ತೀರಿ. ನಮ್ಮ ಪ್ರಧಾನ ಮಂತ್ರಿಗಳು, ಗೃಹ ಮಂತ್ರಿಗಳು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಭೇಟಿ ಮಾಡ್ತೇನೆ, ಎಲ್ಲವನ್ನು ಬಿಚ್ಚಿಡ್ತೇನೆ ಎಂದಿದ್ದಾರೆ.

ಇವರ ಕಾರ್ಯ ವೈಖರಿ, ಇವರ ಒಂದು ಅಹಂಕಾರ, ಇವರ ದರ್ಪ. ಇರಬಹುದು ಸಾವಿರಾರು ಕೋಟಿ. ಆದರೆ ಒಬ್ಬ ರಾಜಕಾರಣಿ, ಒಬ್ಬ ರಾಜ್ಯಾಧ್ಯಕ್ಷ. ಇವರ ಹಿಂಬಾಲಕರು ನನ್ನನ್ನ ಸೋಲಿಸಬೇಕು ಎಂಬ ಪ್ರಯತ್ನಪಟ್ಟರು. ಆದರೆ ನಮ್ಮ‌ ಮೇಲೆ ಜನ ಇಟ್ಟಿದ್ದ ಪ್ರೀತಿಯಿಂದ ಗೆದ್ದೆ. ಕಳೆದ ಹತ್ತು ದಿನದ ಹಿಂದೆ ಕಾಲ್ ಮಾಡಿದ್ದೀನಿ. ರಿಸೀವ್ ಮಾಡಲ್ಲ, ರಿಪ್ಲೇ ಮಾಡಲ್ಲ. ಪಾಯಿಟ್ಮೆಂಟ್ ಕೊಟ್ಟಿದ್ರು, ಆಮೇಲೆ ಕ್ಯಾನ್ಸಲ್ ಮಾಡಿದ್ರು. ನಡ್ಡಾಜಿ ಅವರಿಗೆ ಒಂದು ಮೆಸೇಜ್ ಕಳುಹಿಸಿದ್ರೆ ತಕ್ಷಣ ಅವರು ನಂಗೆ‌ ಅಪಾಯಿಟ್ಮೆಂಟ್ ಕೊಡ್ತಾರೆ. ಹಿರಿಯ ಮುಖಂಡರುಗಳೇ ಸಮಯ ಕೊಡುತ್ತಾರೆ. ಬಿಜೆಪಿ ಏನು ನಿಮ್ಮ ಆಸ್ತಿನಾ..? ಬನ್ನಿ ಕಟ್ಟಿ ಬನ್ನಿ ಚಿಕ್ಕಬಳ್ಳಾಪುರ ಭಾಗದಲ್ಲಿ ಒಂದು ಸೀಟ್ ಗೆಲ್ಲಿ ನೋಡೋಣಾ. ಚಾಲೆಂಜ್ ಮಾಡ್ತೀನಿ ನಿಮ್ಮ ನಾಯಕತ್ವದಲ್ಲಿ ಒಂದು ಸೀಟ್ ಗೆಲ್ಲಿ ನೋಡೋಣಾ.

ನಮ್ಮ ಭವಿಷ್ಯವನ್ನೇ ಮೊಟಕುಗೊಳಿಸುವ ನಿರ್ಧಾರ ತೆಗೆದುಕೊಳ್ಳುವುದು, ಪಕ್ಷವನ್ನೇ ಅವನತಿಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಬೇರೆ ಮಾರ್ಗ ಕಾಣಿಸ್ತಿಲ್ಲ. ಕೊನೆಯ ಮಾರ್ಗ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಇಲ್ಲಿನ ಪರಿಸ್ಥಿತಿ ಹೇಳ್ತೀನಿ. ಅಂತಿಮವಾಗಿ ನನ್ನ ರಾಜಕೀಯ ನಡೆ ಏನಾಗಬೇಕು ಎಂಬುದನ್ನ ತಿಳಿಸ್ತೇನೆ. ನನಗೆ ಪದವಿಗಳು ಮುಖ್ಯ ಅಲ್ಲ ಸೆಲ್ಫ್ ರೆಸ್ಪೆಕ್ಟ್, ಸ್ವಾಭಿಮಾನ ಮುಖ್ಯ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment