Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರಿನಲ್ಲಿ ಮೂರು ಮರಿಗಳೊಂದಿಗೆ ಚಿರತೆ ಪ್ರತ್ಯಕ್ಷ..!

---Advertisement---

ಚಿತ್ರದುರ್ಗ: ಚಿರತೆಗಳು ಕಾಡಿನಿಂದ ನಾಡಿಗೆ ಆಗಾಗ ಎಂಟ್ರಿ ಆಗ್ತಾನೆ ಇರ್ತಾವೆ. ಅಲ್ಲಲ್ಲಿ ಪ್ರತ್ಯಕ್ಷಗೊಂಡು ಜನರಿಗೆ ಆತಂಕ ತಂದು ಇಡುತ್ತಾ ಇರುತ್ತವೆ. ಚಿರತೆ ಕಣ್ಣಿಗೆ ಬಿದ್ದರೆ ದಾಳಿ ಮಾಡಿ ಪ್ರಾಣವನ್ನೇ ತೆಗೆದು ಬಿಡುತ್ತವೆ. ಹೀಗಾಗಿ ಎಲ್ಲಾದ್ರೂ ಚಿರತೆ ಕಂಡರೆ ಜನ ಗಾಬರಿಯಾಗುತ್ತಾರೆ. ಇದೀಗ ಅಂಥದ್ದೊಂದು ಆತಂಕ ಹಿರಿಯೂರು ಜನತೆಯಲ್ಲಿ ಮನೆ ಮಾಡಿದೆ.

ಹೌದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರಾಮಜೋಗಿಹಳ್ಳಿ ಬಳಿ ಕಾಣಿಸಿಕೊಂಡ ಚಿರತೆ ಕಾಣಿಸಿಕೊಂಡಿದೆ. ಅದು ಒಂಟಿಯಾಗಿ ಅಲ್ಲ ತನ್ನ ಮೂರು ಮರಿಗಳೊಂದಿಗೆ ಪ್ರತ್ಯಕ್ಷವಾಗಿದೆ. ಇಡೀ ಫ್ಯಾಮಿಲಿಯ ಜೊತೆಗೆ ಚಿರತೆ ಎಂಟ್ರಿ ಕೊಟ್ಟಿದೆ. ಇದನ್ನು ಕೇಳಿದ ಹಿರಿಯೂರು ಜನತೆಗೆ ಗಾಬರಿಯಾಗಿದೆ. ಲೆಕ್ಕದಲ್ಲಿ ನಾಲ್ಕು ಚಿರತೆಗಳು ಇದಾವೆ ಎಂಬಂತೆ ಆಗಿದೆ.

ಅದರಲ್ಲೂ ಚಿರತೆಯನ್ನ ರೈತರೊಬ್ಬರು ಹಾಡಹಗಲೇ ಕಂಡಿದ್ದಾರೆ. ರೈತರೊಬ್ಬರು ತಮ್ಮ ಹೊಲದಲ್ಲಿ ಟ್ರಾಕ್ಟರ್ ಹೊಡೆಯುತ್ತಿದ್ದರಂತೆ. ಈ ವೇಳೆ ತನ್ನ ಮೂರು ಮರಿಗಳೊಂದಿಗೆ ಚಿರತೆ ಓಡಾಡುವುದನ್ನು ಕಂಡಿದ್ದಾರೆ. ತಕ್ಷಣ ಆ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ರೈತನು ಮಾಡಿದ ವಿಡಿಯೋದಲ್ಲಿ ಮರಿ ಹಾಗೂ ಚಿರತೆಯ ವಿಡಿಯೋ ಸೆರೆಯಾಗಿದೆ. ಸದ್ಯ ಈ ವಿಡಿಯೋ ಗ್ರಾಮದ ಎಲ್ಲರ ಮೊಬೈಲ್ ನಲ್ಲೂ ಓಡಾಡುತ್ತಿದೆ. ವಿಡಿಯೋ ಕಂಡು ಸುತ್ತ ಮುತ್ತಲಿನ ಗ್ರಾಮಸ್ಥರಲ್ಲೂ ಭಯದ ಆಂತಕದ ವಾತಾವರಣ ನಿರ್ಮಾಣವಾಗಿದೆ. ಒಬ್ಬೊಬ್ಬರೇ ಓಡಾಡುವುದಕ್ಕೂ ಭಯಗೊಂಡಿದ್ದಾರೆ. ಹೊಲ, ಜಮೀನಿನ ಕಡೆಗೆ ಹೋಗುವಾಗ ಜೊತೆಯಲ್ಲಿ ಯಾರಾದರೂ ಇದ್ದರಷ್ಟೇ ಹಿಒಗುವ ಧೈರ್ಯ ಮಾಡುತ್ತಿದ್ದಾರೆ. ಚಿರತೆಯ ವಿಡಿಯೋ ನೋಡಿ ಗಾಬರಿಯಾಗಿರುವ ಜನ, ಬೇಗ ಈ ಚಿರತೆಗಳನ್ನ ಸೆರೆ ಹಿಡಿದರೆ ಸಾಕು ಎನ್ನುತ್ತಿದ್ದಾರೆ. ಹಾಗೇ ಸ್ಥಳಕ್ಕೆ ಅರಣ್ಯಾಧಿಕಾರಿ ಶಶಿಧರ್ ತಂಡ ದೌಡಾಯಿಸಿದ್ದು, ಚಿರತೆಯ ಸೆರೆಗೆ ಪ್ಲ್ಯಾನ್ ಹಾಕುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...