ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 17 : ಸಾಮಾನ್ಯ ಜನರಿಗೆ ಮೂರ್ಛೆ ರೋಗದ ಬಗ್ಗೆ ಇರುವ ಮೂಢನಂಬಿಕೆ ಹೋಗಲಾಡಿಸಲು ಸರಿಯಾದ ತಿಳುವಳಿಕೆ ಅತ್ಯವಶ್ಯ ಎಂದು ಡಾ. ಜಿ. ಒ. ನಾಗರಾಜ್ ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಹೇಳಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಚಿತ್ರದುರ್ಗ ವತಿಯಿಂದ ಜಿಲ್ಲಾ ಆಸ್ಪತ್ರೆಯ ಬಿ ಸಿ ರಾಯ್ ಸಭಾಂಗಣದಲ್ಲಿ ಆಯೋಜಿಸಿದ ಮೂರ್ಛೆರೋಗ (ಎಪಿಲೆಪ್ಸಿ) ದಿನಾಚರಣೆ ಕುರಿತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ ಅವರು ಮಾತನಾಡಿದರು. ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಯಿಂದ ಹಾಗೂ ಕೌಟುಂಬಿಕ ಹಿನ್ನೆಲೆಯಿಂದ ಮೂರ್ಛೆರೋಗ ವಯಸ್ಸು, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಯಾರಿಗಾದರೂ ಮೂರ್ಛೆರೋಗ ಬರುವ ಸಾಧ್ಯತೆಯಿದ್ದು ಮೂಢನಂಬಿಕೆಗೆ ಒಳಗಾಗದೆ ವೈದ್ಯರ ಬಳಿ ಚಿಕಿತ್ಸೆ ಪಡೆದು ಉತ್ತಮ ಆರೋಗ್ಯ ಹೊಂದಬೇಕೆಂದರು.

ಡಾ. ಕಿರಣ್ ಗೌಡ ನರರೋಗ ತಜ್ಞರು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಇವರು ಮಾತನಾಡುತ್ತಾ ಕೆಲವರಿಗೆ ಓದುವಾಗ ಮತ್ತು ತಲೆಯ ಮೇಲೆ ನೀರು ಹಾಕಿದಾಗ, ತಲೆಗೆ ಪೆಟ್ಟು ಬಿದ್ದಾಗ ಮೆದುಳು ಜ್ವರದಿಂದ, ಮಧ್ಯಪಾನ ಸೇವನೆಯಿಂದ ಅಥವಾ ಅನುವಂಶಿಯತೆಯಿಂದ ಹುಟ್ಟಿನಿಂದ ಸಾಯುವವರೆಗೆ ಯಾರಿಗೆ ಬೇಕಾದರೂ ಕಾರಣ ಇದ್ದು ಅಥವಾ ಇಲ್ಲದೆ ಕೂಡ ಪಿಟ್ಸ್ ಬರಬಹುದು ಎಂದರು ಯಾವುದೇ ವ್ಯಕ್ತಿಗೆ ಪಿಟ್ಸ್ ಬಂದಾಗ 30 ಅಥವಾ 40 ಸೆಕೆಂಡುಗಳಲ್ಲಿ ಫಿಟ್ಸ್ ತಾನಾಗಿಯೇ ನಿಲ್ಲುತ್ತದೆ ಪಿಕ್ಸ್ ಬಂದ ರೋಗಿಯನ್ನು ಎಡಮೊಗ್ಗುಲಲ್ಲಿ ಅಥವಾ ಬೋರಲು ಮಲಗಿಸುವುದು ಗಾಳಿ ಬೆಳಕು ಇರುವಂತೆ ನೋಡಿಕೊಳ್ಳುವುದು ಒಳಿತು ಆದರೆ ಬಾಯಿ ಒಳಗೆ ಚಮಚೆ ಅಥವಾ ಬೆರಳುಗಳನ್ನು ಇಡಬಾರದು ಹಾಗೂ ಪಿಟ್ಸ್ ಬರುವವರು ಬೆಂಕಿ ತೂಪಾದ ವಸ್ತುವಿನ ಹತ್ತಿರ ಅಪಾಯದ ಸ್ಥಳಗಳಲ್ಲಿ ಕೆಲಸ ನಿರ್ವಹಿಸಬಾರದು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಕೊಳ್ಳಬೇಕೆಂದರು

ಡಾಕ್ಟರ್ ಮಂಜುನಾಥ್ ಆರ್ ಮನೋ ವೈದ್ಯರು ಮಾತನಾಡುತ್ತಾ ಹಲವರಿಗೆ ಮೆದುಳಲ್ಲಿ ಗಾಯ ಜೊತೆಗೆ ಭಾವನೆ ಆಲೋಚನೆಗಳಲ್ಲಿ ಬದಲಾವಣೆಯಾದಾಗ ಪಿಟ್ಸ್ ಬರುವ ಸಾಧ್ಯತೆ ಇದೆ ಹಲವರು ಪಿಟ್ಸ್ ಬಂದವರನ್ನು ಇದು ಒಂದು ಪಾಪ ಶಾಪ ಕರ್ಮದಿಂದ ಬಂದಿದೆ ಎಂಬ ಮೂಡನಂಬಿಕೆಯಿಂದ ದೇವರ ಹತ್ತಿರ ಕರೆದುಕೊಂಡು ಹೋಗಿ ಸುಖ ಸುಮ್ಮನೆ ಸಮಯ ವ್ಯರ್ಥ ಮಾಡಿ ರೋಗ ಉಲ್ಬಣಕ್ಕೆ ಹೆಚ್ಚು ಅವಕಾಶ ಮಾಡಿ ಕೊಡದಂತೆ ನರರೋಗ ಅಥವಾ ಮನೋ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಕಾಲ ವಿಳಂಬವಾದಲ್ಲಿ ರೋಗ ತೀವ್ರತೆ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು ಫೆಬ್ರವರಿ 10 2015 ರಿಂದ ಅಕಸ್ಮಾರ ದಿನವನ್ನ ಪ್ರತಿ ವರ್ಷ ಆಚರಿಸಲಾಗುತ್ತಿದ್ದು ಅಪಸ್ಮಾರದಿಂದ ಬಳಲುತ್ತಿರುವವರನ್ನು ಬೆಂಬಲಿಸುವ ಮತ್ತು ಮೇಲಕ್ಕೆ ಎತ್ತುವ ಹಾಗೂ ಜಾಗೃತಿ ಮೂಡಿಸುವುದು ನಿರಂತರವಾಗಿರಬೇಕು ವಹಿಸಬೇಕೆಂದರು
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ “ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಹಿಡಿಯುವುದನ್ನು ಬಿಡಬೇಡಿ” ಜ್ಞಾನದ ಬೆಳಕಿನಿಂದ ಅಜ್ಞಾನದ ಕತ್ತಲನ್ನು ಕಳೆಯಿರಿ ನಕ್ಕಷ್ಟು ಆರೋಗ್ಯ ವೃದ್ಧಿ ಆಗುತ್ತೆ ಅವಕಾಶ ಸಿಕ್ಕಾಗ ಮಾತ್ರ ನಗು ಇರಲಿ ಎಂದು ನರ್ಸಿಂಗ್ ವಿದ್ಯಾರ್ಥಿಗಳನ್ನು ನಗೆಗಡಲೆಲ್ಲಿ ತೇಲಿಸಿ ಸರ್ವರಿಗೆ ವಂದನಾರ್ಪಣೆ ಮಾಡಿದರು . ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಜಾನಕಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾದಿಕಾರಿ ವೈ. ತಿಪ್ಪೇಸ್ವಾಮಿ. ಶ್ರೀಧರ.ಟಿ. ಕ್ಲಿನಿಕಲ್ ಸೈಕಲಾಜಿಸ್ಟ್, ಶರತ್ ಪಿ. ಜಿಲ್ಲಾ ಸಂಯೋಜಕ ಭಾವನ ಕೆ ಪಿಜಿಯೋಥೆರಪಿಸ್ಟ್ , ದಿವ್ಯ ಜಿ ಜೆ ಸ್ಪೀಚ್ ತೆರಪಿಸ್ಟ್, ರೂಪ ಸೈಕಾಲಜಿಸ್ಟ್ ಹಾಗೂ 120ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

















