ಬಳ್ಳಾರಿ, (ಮೇ.07) : ಬಳ್ಳಾರಿ ವಿಭಾಗದ ಕುರುಗೋಡು ಘಟಕದಿಂದ ಕುರುಗೋಡು-ಬಳ್ಳಾರಿ-ಬೆಂಗಳೂರು ಮಾರ್ಗದಲ್ಲಿ ಮೇ 07ರಿಂದ ಪ್ರತಿಷ್ಠಿತ ಎಸಿ ಸ್ಲೀಪರ್ ನೂತನ ಸಾರಿಗೆಯನ್ನು ಪ್ರಾರಂಭಿಸಲಾಗಿದೆ ಎಂದು ಕಕರಸಾ ನಿಗಮ ಬಳ್ಳಾರಿ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಇನಾಯತ್ ಬಾಗ್‍ಬಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿರುಗುಪ್ಪದಿಂದ ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ, ಸಿರುಗುಪ್ಪದಲ್ಲಿ ರಾತ್ರಿ 8.45ಕ್ಕೆ ಹಾಗೂ ಬಳ್ಳಾರಿಯಿಂದ ರಾತ್ರಿ 10.30ಕ್ಕೆ ಹೊರಡಲಿದ್ದು, ಬೆಳಗ್ಗೆ 5.30ಕ್ಕೆ ಬೆಂಗಳೂರಿಗೆ ತಲುಪಲಿದೆ ಮತ್ತು ಬೆಂಗಳೂರಿನಿಂದ ಬಳ್ಳಾರಿ ಮಾರ್ಗ ಸಿರುಗುಪ್ಪಗೆ ಬೆಂಗಳೂರಿನಲ್ಲಿ ರಾತ್ರಿ 11.15ಕ್ಕೆ ಹೊರಡಲಿದ್ದು, ಬಳ್ಳಾರಿಗೆ ಬೆಳಗ್ಗೆ 06ಕ್ಕೆ ಮತ್ತು ಸಿರುಗುಪ್ಪಗೆ ಬೆಳಗ್ಗೆ 07.15ಕ್ಕೆ ತಲುಪಲಿದೆ.

ನೂತನ ಎ/ಸಿ ಸ್ಲೀಪರ್ ಸಾರಿಗೆಗೆ www.ksrtc.in ಗೆ ಲಾಗ್-ಇನ್ ಆಗುವ ಮೂಲಕ ಆನ್ ಲೈನ್ ಮುಖಾಂತರ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.
ಸದರಿ ಎ/ಸಿ ಕ್ಲೀಪರ್ ನೂತನ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.





GIPHY App Key not set. Please check settings