ಹಾಸನ: ಜಗತ್ತು ಇನ್ನು ಯಾವ ಸ್ಥಿತಿಗೆ ತಲುಪುತ್ತೋ ಅನ್ನೋ ಆತಂಕದಲ್ಲೇ ಜನ ಬದುಕುವಂತಾಗಿದೆ. ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಅಂದುಕೊಂಡರೂ ಒಳಗೊಳಗೆ ಭಯ ಪಡುವ ಸ್ಥಿತಿ ಇನ್ನು ಹಾಗೆ ಇದೆ. ಕೊರೊನಾ ಇನ್ನು ಕಡಿಮೆಯಾಗಿಲ್ಲ. ಕೆಲವು ಕಡೆ ಮಳೆಯ ಅವಾಂತರ ಬೇರೆ ಇದೆಲ್ಲಾ ಅಪಾಯಕ್ಕೆ ಎಡೆ ಮಾಡಿಕೊಡುತ್ತಾ ಎಂಬ ಭಯದ ನಡುವೆ ಹೌದು ಎನ್ನುವಂತಿದೆ ಕೋಡಿ ಮಠದ ಶ್ರೀಗಳ ಮಾತು.
ಹೌದು, ಇಂದು ಜಿಲ್ಲೆಯ ಅರಕೆರೆ ಮಾಡಾಳು ಗೌರಮ್ಮ ಉತ್ಸವದಲ್ಲಿ ಶ್ರೀಗಳು ಭಾಗಿಯಾಗಿದ್ರು. ಇದೆ ವೇಳೆ ಸದ್ಯದ ರಾಜ್ಯದ ಸ್ಥಿತಿಗತಿ ಬಗ್ಗೆ ಮಾತನಾಡಿದ್ದಾರೆ. ಮಳೆಯಾಗುವ ಸಾಧ್ಯತೆ ಹೆಚ್ಚಿದೆ, ಭೂಮಿ ನಡುಗುತ್ತೆ, ಆಪತ್ತುಗಳು ಇನ್ನು ಕಳೆದಿಲ್ಲ ಎಂದಿದ್ದಾರೆ.
ನಾನು ಅಂದು ಹೇಳಿದ್ದೆ. ಜಗತ್ತಿನ ಭೂಪಟದಲ್ಲಿ ಒಂದು ದೇಶ ಕಾಣೆಯಾಗುವ ಸಾಧ್ಯತೆ ಇದೆ ಎಂದು. ಈಗ ನೋಡಿ ಅಫ್ಘಾನಿಸ್ತಾನ ಭೂಪಟದಿಂದ ಕಾಣೆಯಾಗುವ ಸಾಧ್ಯತೆ ಇದೆ. ಇನ್ನು ಕೊರೊನಾ ವೈರಸ್ ಕೂಡ ಇನ್ನು ಕಡಿಮೆಯಾಗಿಲ್ಲ. ವೈರಸ್ ಇನ್ನು ಎರಡು ವರ್ಷ ಇರಲಿದೆ. ಅಷ್ಟೇ ಅಲ್ಲ ವೈರಸ್ ತೀವ್ರತೆ ಹೆಚ್ಚಾಗಲಿದೆ, ಸಾವು ನೋವುಗಳು ಕೂಡ ಇನ್ನು ಹೆಚ್ಚು ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.