Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾಮಾನ್ಯ ಜನರಿಗೆ ಬಿಗ್ ಶಾಕ್ ಕೊಟ್ಟ ಕೆಎಂಎಫ್ : ನಂದಿನಿ ತುಪ್ಪ 90 ರೂ.ಏರಿಕೆ..!

---Advertisement---

ಬೆಂಗಳೂರು: ಒಂದು ಕಡೆ ಜಿಎಸ್ಟಿ ದರ ಇಳಿಕೆಯಾಗಿದೆ ಎಂಬುದಕ್ಕೆ ಖುಷಿ ಕೊಡಬೇಕೋ ಅಥವಾ ಕೆಲವೊಂದು ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಎಂದು ಸಂಕಟ ಪಡಬೇಕೋ ತಿಳಿಯುತ್ತಿಲ್ಲ. ಅದರಲ್ಲೂ ಪ್ರತಿನಿತ್ಯ ಬಳಕೆ ಮಾಡುವ ತುಪ್ಪದ ಬೆಲೆ ಇದ್ದಕ್ಕಿದ್ದ ಹಾಗೇ ಗಗನಕ್ಕೇರುತ್ತಿದೆ. ಈ ಸುದ್ದಿ ಕೇಳಿ ಕೆಎಂಎಫ್ ವಿರುದ್ಧ ಸಾಮಾನ್ಯ ಜನ ಬೇಸರ ಹೊರ ಹಾಕಿದ್ದಾರೆ. ಹಾಗಾದ್ರೆ ತುಪ್ಪದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ‌.

ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ ಈಗ 90 ರೂಪಾಯಿ ಏರಿಕೆಯಾಗಿದೆ. ಇಂದಿನಿಂದಲೇ ಈ ನೂತನ ಬೆಲೆ ಜಾರಿಗೆ ಬರಲಿದೆ ಎಂದು ಕೆಎಂಎಫ್ ಸೂಚನೆ ನೀಡಿದೆ. ಈ ಹಿಂದೆ 1 ಕೆಜಿ ತುಪ್ಪಕ್ಕೆ 610 ರೂಪಾಯಿ ಇತ್ತು. ಪ್ರಸ್ತುತ 90 ರೂಪಾಯಿ ಏರಿಕೆಯಾಗಿರುವ ಹಿನ್ನಲೆ ಈಗ ಬರೋಬ್ಬರಿ 700 ರೂಪಾಯಿ ಆಗಿದೆ. ಇನ್ನು ತುಪ್ಪ ಹೊರತುಪಡಿಸಿ ಬೇರೆ ಯಾವುದೇ ಹಾಲು ಉತ್ಪನ್ನಗಳ ಬೆಲೆ ಏರಿಕೆಯಾಗಿಲ್ಲ.

ಪ್ರತಿ ದಿನ ಬಳಸುವ ಪದಾರ್ಥಗಳ ಮೇಲೆ ಬೆಲೆ ಏರಿಕೆಯನ್ನು ಕಂಡು ಜನರಂತು ಬೇಸರದಲ್ಲಿಯೇ ಜೀವನ ಸಾಗಿಸಿಕೊಂಡು ಹೋಗ್ತಿದ್ದಾರೆ. ಹಾಲಿನ ದರವಂತು ಏರುತ್ತಲೇ ಇದೆ. ಈಗ ನೋಡಿದ್ರೆ ತುಪ್ಪದ ಬೆಲೆಯೂ ಏರಿಕೆಯಾಗಿದೆ. ಸಾಮಾನ್ಯ ಜನ ದುಡಿಯುವ ಹಣವೆಲ್ಲಾ ಬಾಡಿಗೆ, ಆಹಾರ ಪದಾರ್ಥಗಳಿಗೇನೆ ಸಮವಾಗುತ್ತಿದೆ. ಈ ಬೇಸರ ಗೃಹಿಣಿಯರಿಗೆ ಇದೆ. ಎಲ್ಲರ ಮನೆಯಲ್ಲಿಯೂ ತುಪ್ಪವನ್ನ ಬಳಸಿಯೇ ಬಳಸುತ್ತಾರೆ ಒಂದೆರಡು ರೂಪಾಯಿ ಏರಿಕೆಯಾಗಿದ್ದರೆ ಜನ ಹೇಗೋ ಸರಿದೂಗಿಸಿಕೊಳ್ಳುತ್ತಿದ್ದರು. ಆದರೆ ದಿಢೀರನೇ 90 ರೂಪಾಯಿ ಏರಿಕೆಯಾದರೆ ಸಹಿಸಿಕೊಳ್ಳುವುದು ಹೇಗೆ ಜನ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now