Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ರತಾ ಜೊತೆಗೆ ಮದುವೆ ಆಗಿಬಿಟ್ರಾ ಕಾರ್ತಿಕ್ : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಫೋಟೋಸ್

---Advertisement---

ಬಿಗ್ ಬಾಸ್ ಸೀಸನ್ 10ರಲ್ಲಿ ಕಾರ್ತಿಕ್ ಹಾಗೂ ನಮ್ರತಾ ಕೂಡ ಸ್ಪರ್ಧಿಗಳಾಗಿದ್ದರು. ಅದರಲ್ಲೂ ಆರಂಭದಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ ಇಬ್ಬರ ನಡುವೆ ಲವ್ ಇದೆ ಅಂತಾನೆ ಕರುನಾಡ ಜನತೆ, ಬಿಗ್ ಬಾಸ್ ವೀವರ್ಸ್ ಮಾತನಾಡಿಕೊಳ್ಳುತ್ತಿದ್ದರು. ಆದರೆ ಸಂಗೀತಾ ಅದನ್ನು ಬಿಗ್ ಬಾಸ್ ಮನೆಯಲ್ಲಿಯೇ ತಳ್ಳಿ ಹಾಕಿ, ಆರಂಭದಲ್ಲಿಯೇ ಕ್ಲಾರಿಟಿಯನ್ನು ಕೊಟ್ಟಿದ್ದರು. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ವ ಅಂತ.

ದಿನ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಮನಸ್ತಾಪ ಬಂತು, ಕಾರ್ತಿಕ್, ನಮ್ರತಾ ಜೊತೆಗೆ ಆತ್ಮೀಯತೆಯನ್ನು ಬೆಳೆಸಿಕೊಂಡರು. ಇಬ್ಬರ ನಡುವೆ ಹೆಲ್ದಿ ಫ್ಲರ್ಟ್ ಕೂಡ ನಡೆಯುತ್ತಾ ಇತ್ತು. ಆದರೆ ನಮ್ರತಾ ಫ್ಲರ್ಟ್ ಮಾಡಬೇಡಿ ಅಂತಾನೆ ಹೇಳುತ್ತಿದ್ದರು. ಇದೀಗ ಇಬ್ಬರದ್ದು ಮದುವೆಯಾಗಿ ಹೋಗಿದೆ.

ಅದಕ್ಕೆ ಸಾಕ್ಷಿ ಎಂಬಂತೆ ನಮ್ರತಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ನಮ್ರತಾ ಮದುವೆ ಹೆಣ್ಣಿನ ಲುಕ್ ನಲ್ಲಿ ಇದ್ದರ, ಕಾರ್ತಿಕ್ ವರನ ರೀತಿ ಅಲಂಕಾರಗೊಂಡಿದ್ದಾರೆ. ಮಂಟಪದಲ್ಲಿ ಕೂತು ತಾಳಿಯನ್ನು ಕಟ್ಟಲಾಗಿದೆ, ಅರುಂಧತಿ ನಕ್ಷತ್ರವನ್ನು ತೋರಿಸಲಾಗಿದೆ. ಇದೆಲ್ಲಾ ನೋಡಿದ ಫ್ಯಾನ್ಸ್ ಒಂದು ಮಾತು ಹೇಳದೆ ಮದುವೆ ಆಗಿದ್ದಾರೆ ಎಂದು ಬೇಸರ ಹೊರ ಹಾಕಿದ್ದರೆ, ಅತ್ತ ಕಾರ್ತಿಕ್ ಕರಿಮಣಿ ಮಾಲೀಕ ನಾನಲ್ಲ ಎಂದು ಮಧುಮಗನ ಗೆಟಪ್ ನಲ್ಲಿರುವ ಫೋಟೋಗಳ ವಿಡಿಯೋ ಹಾಕಿದ್ದಾರೆ. ಆ ವಿಡಿಯೋಗಂತೂ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದೆ.

ಬಿಗ್ ಬಾಸ್ ಫೀವರ್ ಇನ್ನು ಕಡಿಮೆಯಾಗಿಲ್ಲ. ಹಾಗೇ ಕಂಟೆಸ್ಟೆಂಟ್ ಗಳ ಕ್ರೇಜ್ ಕೂಡ ಕಡಿಮೆಯಾಗಿಲ್ಲ. ಹೀಗಾಗಿ ಇದೊಂದು ಕಂಪನಿಗಾಗಿ ಮಾಡಿರುವ ಫೋಟೋಶೂಟ್ ಎಂಬುದು ಗೊತ್ತಾಗುತ್ತಿದೆ. ಟ್ರೆಂಡಿಂಗ್ ನಲ್ಲಿರುವ ಜೋಡಿಗಳನ್ನು ಕರೆಸಿ, ಪ್ರಮೋಷನ್ ಮಾಡಿಕೊಂಡಿದ್ದಾರೆ ಅಷ್ಟೇ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...