Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

63ನೇ ವಸಂತಕ್ಕೆ ಕಾಲಿಟ್ಟ ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ : ಅದ್ದೂರಿ ಸಂಭ್ರಮಾಚರಣೆ

---Advertisement---

ಬೆಂಗಳೂರು: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರಿಗೆ 63 ವರ್ಷದ ಸಂಭ್ರಮ. ಇಂದು ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ. ಶ್ರೀಮುತ್ತು ಮನೆಯ ರಸ್ತೆಯಲ್ಲೆಲ್ಲಾ ಶಿವಣ್ಣ ಅವರ ಬ್ಯಾನರ್ ಗಳು ರಾರಾಜಿಸುತ್ತಾ ಇದ್ದವು. ಹೊಸ ಹೊಸ ಸಿನಿಮಾಗಳ ಪೋಸ್ಟರ್ ಗಳನ್ನು ಕೂಡ ದಾರಿಯುದ್ಧಕ್ಕೂ ಹಾಕುವ ಮೂಲಕ ಶುಭಕೋರಿದ್ದಾರೆ.

ಇನ್ನು ಶಿವಣ್ಣ ಅವರಿಗೆ ಅಮೆರಿಕಾದಲ್ಲಿ ಚಿಕಿತ್ಸೆ ನೀಡಿ, ಗುಣಮುಖರಾಗುವಂತೆ ಮಾಡಿದ ವೈದ್ಯರು ಕೂಡ ಬೆಂಗಳೂರಿಗೆ ಬಂದಿದ್ದರು. ಶಿವಣ್ಣ ಅವರಿಗೆ ಶುಭಕೋರಿ, ಆರೋಗ್ಯ ಚೆನ್ನಾಗಿರಲೆಂದು ಹಾರೈಸಿದರು. ಇದೇ ವೇಳೆ ಶಿವಣ್ಣ ಅವರು ಕೂಡ ವೈದ್ಯರಿಗೆ ಪೇಟ ಧರಿಸಿ, ಶಾಲು ಹೊದಿಸಿ ಧನ್ಯವಾದಗಳನ್ನ ತಿಳಿಸಿದರು. ಅಭಿಮಾನಿಗಳಂತು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲರ ಬಾಯಲ್ಲೂ ಶಿವಣ್ಣನ ಬಗ್ಗೆ ಜೈಕಾರ ಜೋರಾಗಿ ಕೇಳಿ ಬರ್ತಾ ಇತ್ತು. ಶಿವಣ್ಣನ ಆರೋಗ್ಯ ಇನಗನಷ್ಟು ಗಟ್ಟಿಯಾಗಿರಲಿ ಎಂದು ಶುಭಕೋರಿದರು.

ಶಿವಣ್ಣ 63 ವರ್ಷ ವಯಸ್ಸು ಅಂತ ಅನ್ನಿಸುವುದೇ ಇಲ್ಲ. ವಯಸ್ಸು ಅನ್ನೋದು ಬರೀ ನಂಬರ್ ಅಷ್ಟೆ ಎಂಬುದು ಶಿವಣ್ಣನಿಗೆ ಅದ್ಭುತವಾಗಿ ಹೊಂದಾಣಿಕೆಯಾಗುತ್ತದೆ. ಈ ವಯಸ್ಸಿನಲ್ಲೂ ಒಪ್ಪಿಕೊಂಡಿರುವ ಸಿನಿಮಾಗಳ ಪಾತ್ರಗಳು ಮಾತ್ರ ಗ್ರೇಟ್ ರೀತಿಯೇ ಫೀಲ್ ಆಗುತ್ತದೆ. ಒಂದೊಂದು ಪಾತ್ರವೂ ಚಾಲೆಂಜಿಂಗ್ ಪಾತ್ರದಂತೆ ಕಾಣಿಸುತ್ತಿವೆ. ಇಂದು ಅವರ ಮನೆಯ ಬಳಿ ಬಂದಿದ್ದ ಎಲ್ಲ ಅಭಿಮಾನಿಗಳಿಗೂ ಶಿವಣ್ಣ ಧನ್ಯವಾದಗಳನ್ನ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳು ತಂದಿದ್ದ ದೊಡ್ಡಗಾತ್ರದ ಕೇಕ್ ಗಳನ್ನು ಕಟ್ ಮಾಡಿ, ಅಭಿಮಾನಿಗಳಿಗೂ ತಿನ್ನಿಸಿ, ಖುಷಿ ಕೊಟ್ಟಿದ್ದಾರೆ. ಶಿವಣ್ಣರ ಎನರ್ಜಿ ಕಂಡು ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment