ಕಾಂತಾರ ಸಿನಿಮಾ ನೋಡಿದ್ರಾ : ಟಿಕೆಟ್ ಜೋಪಾನ, ಹಣ ವಾಪಸ್ ಬರಬಹುದು..!

1 Min Read

ಬೆಂಗಳೂರು: ಈಗಂತೂ ಕಾಂತಾರ ಕಲರವ. ನಾ ಮುಂದು ತಾ ಮುಂದು ಅಂತ ಸಿನಿಮಾ ನೋಡುವುದಕ್ಕೆ ಕ್ಯೂ ನಿಂತಿದ್ದಾರೆ. ಈಗಾಗಲೇ ನೋಡಿರುವವರು ಟಿಕೆಟ್ ಜೋಪಾನವಾಗಿಟ್ಟುಕೊಂಡರೆ ಮುಂದೊಂದು ದಿನ ಟಿಕೆಟ್ ಹಣ ವಾಪಾಸ್ ಸಿಕ್ಕರು ಸಿಗಬಹುದು. ಸರ್ಕಾರ ಈ ಬಗ್ಗೆ ಸಿನಿ ಪ್ರೇಮಿಗಳಿಗೆ ಮಾಹಿತಿ ನೀಡಿದೆ.

 

ಇತ್ತೀಚೆಗೆ ಸರ್ಕಾರ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರವನ್ನು ಕೇವಲ 200 ರೂಪಾಯಿಗೆ ನಿಗದಿ ಮಾಡಿತ್ತು. ಆದ್ರೆ ಇದನ್ನ ವಿರೋಧಿಸಿದ ಹೊಂಬಾಳೆ ಬ್ಯಾನರ್ ಹಾಗೂ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್, ರಾಜ್ಯ ಸರ್ಕಾರದ ಆದೇಶವನ್ನು ತಡೆಹಿಡಿದಿತ್ತು. ಇದರ ಪರಿಣಾಮ ಕಾಂತಾರ ಸಿನಿಮಾ 500, 600, 700 ರೂಪಾಯಿ ದರ ನಿಗದಿ ಮಾಡಿದೆ. ಈ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ರದ್ದು ಕೋರಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿತ್ತು.

 

ಇನ್ನು ಈ ಟಿಕೆಟ್ ದರದ ವಿಚಾರಕ್ಕೆ ಕೋರ್ಟ್ ಮತ್ತೊಂದು ಕಿವಿ ಮಾತನ್ನ ಹೇಳಿದೆ. ಒಂದು ವೇಳೆ ಸರ್ಕಾರದ ನಿರ್ಧಾರವನ್ನ ಹೈಕೋರ್ಟ್ ಎತ್ತಿ ಹಿಡಿದರೆ ವೀಕ್ಷಕರ ಹಣವನ್ನು ವಾಪಾಸ್ ನೀಡಬೇಕಾಗುತ್ತದೆ ಎಂಬುದನ್ನ ತಿಳಿಸಿದೆ. ಹೀಗಾಗಿ ಸರ್ಕಾರ ಜನತೆಗೆ ಸೂಚನೆ ನೀಡಿದ್ದು, ಎಲ್ಲಾ ದಾಖಲೆಗಳನ್ನು ಜೋಪಾನವಾಗಿಡಿ ಎಂದಿದೆ. ಅಂದ್ರೆ ನೀವೂ ಟಿಕೆಟ್ ಬುಕ್ ಮಾಡಿದ ರೀತಿ, ಆನ್ಲೈನ್ ಆದ್ರೆ ಅದರ ಸ್ಕ್ರೀನ್ ಶಾಟ್, ಡೈರೆಕ್ಟ್ ಆಗಿ ಹೋಗಿ ತೆಗೆದುಕೊಂಡಿದ್ದರೆ, ಆ ಟಿಕೆಟ್ ಹಾಗೇ ಉಳಿಸಿಕೊಳ್ಳುವುದು, ಹಣ ಸಂದಾಯ ಮಾಡಿದ್ದಕ್ಕೆ ಸಾಕ್ಷಿ. ಈ ಎಲ್ಲಾ ದಾಖಲೆಗಳನ್ನು ಜೋಪಾನ ಮಾಡಿಕೊಂಡರೆ, ಸರ್ಕಾರದ ನಿರ್ಧಾರವನ್ನು ಸರಿ ಎಂಬ ತೀರ್ಪು ಬಂದರೆ ಹಣ ವಾಪಾಸ್ ಸಿಗುವ ಸಾಧ್ಯತೆ ಇದೆ.

Share This Article