Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಕಾಂತಾರ ಚಾಪ್ಟರ್ 1 ಟ್ರೇಲರ್ ರಿಲೀಸ್ : ರಿಷಬ್ ಶೆಟ್ಟಿ ಹೇಳಿದ ದಂತಕಥೆ..!

---Advertisement---

 

ಕಾಂತಾರ ಸಿನಿಮಾ ಹಿಟ್ ಆದ ಬೆನ್ನಲ್ಲೇ ಅದರ ಪ್ರೀಕ್ವೇಲ್ ಮಾತುಕಥೆ ಕೂಡ ಶುರುವಾಗಿತ್ತು. ಕಾಂತಾರವನ್ನ ಬರೀ ಚಂದನವನ ಅಲ್ಲ ಇಡೀ ದೇಶದಾದ್ಯಂತ ಮೆಚ್ಚಿ ಕೊಂಡಾಡಿದ್ದರು. ಇದೀಗ ಎಲ್ಲರೂ ಬಹುನಿರೀಕ್ಷೆಯಿಂದ ಕಾಯ್ತಾ ಇದ್ದಂತ ಕಾಂತಾರ ಚಾಪ್ಟರ್ 1 ಟ್ರೇಲರ್ ರಿಲೀಸ್ ಆಗಿದೆ. ಹೊಂಬಾಳೆ ಯೂಟ್ಯೂಬ್ ಚಾನೆಲ್ ನಲ್ಲಿಯೇ ಎಲ್ಲಾ ಭಾಷೆಯ ಟ್ರೇಲರ್ ತೆರೆಕಂಡಿದೆ. ಅಕ್ಟೋಬರ್ 2ರಂದು ಕಾಂತಾರ ಸಿನಿಮಾ ತೆರೆಗೆ ಬರುತ್ತಿದೆ.

ಅದ್ಬುತ ಲೊಕೇಶನ್, ಅದ್ದೂರಿ ಸೆಟ್ ಗಳು ಸಿನಿಮಾದ ಟ್ರೇಲರ್ ನಲ್ಲಿಯೇ ಕಾಣಿಸುತ್ತಿವೆ. ಕಾಂತಾರ ಬಂದಾಗ ಕೊನೆಯಲ್ಲಿ ಒಂದು ಕಾಡಲ್ಲಿ ಶಿವ ನಾಪತ್ತೆಯಾಗಿದ್ದ. ಅವರ ವಂಶದವರು ಅಲ್ಲಿಯೇ ಮಾಯವಾಗುತ್ತಿದ್ದರು. ಆಗ ಶಿವನ ಹೆಂಡತಿ ಬಸುರಿಯೂ ಆಗಿದ್ದರು. ಈಗ ಶಿವನ ತಂದೆಯ ಕಾಲದ ಕಥೆಯನ್ನ ಹೇಳಲಾಗ್ತಾ ಇದೆ. ಕಾಡು, ರಾಜ ಮನೆತನ ಈ ಎಲ್ಲವೂ ಟ್ರೇಲರ್ ನಲ್ಲಿ ಕಾಣಿಸ್ತಾ ಇದೆ. ಕಾಡಿನಲ್ಲಿ ವಾಸಿಸುವ ಜನರಿಗೆ ಆ ಕಾರ್ಣಿಕದ ಕಲ್ಲು ಸಿಗಯತ್ತದೆ, ಜನರನ್ನ ಕಾಪಾಡುವುದಕ್ಕೆ ಒಬ್ಬ ಹುಟ್ಟುತ್ತಾನೆ ಅವರೇ ರಿಷಬ್ ಶೆಟ್ಟಿ. ಕಾಂತಾರದ ಒಳಗೆ ಯಾವತ್ತು ಹೋಗ್ಬೇಡಿ ಮಕ್ಕಳೇ ಎಂಬ ಡೈಲಾಗ್ ಕುತೂಹಲವನ್ನ ಹುಟ್ಟಿಸಿದೆ.

ಇಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಬಂದಿದ್ದಾರೆ. ರಾಜಕುಮಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ವಾಸಿಸುವ ರಿಷಬ್ ಮೇಲೆ‌ ರಾಣಿ ರುಕ್ಮಿಣಿಗೆ ಲವ್ ಆಗುತ್ತೆ. ಮುಂದೆ ಏನೆಲ್ಲಾ ಆಗುತ್ತೆ ಎಂಬ ಕುತೂಹಲಕ್ಕಾಗಿಯೇ ಎಲ್ಲರೂ ಕಾಯ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟನೆ ಮಾಡಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...