ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಸಿನಿ ಪ್ರೇಮಿಗಳು ಕಾದದ್ದು ಸುಮ್ನೆ ಅಲ್ಲ. ವರ್ಷಗಳಿಂದ ಕಾದಿದ್ದಕ್ಕೆ ಇಂದು ತೆರೆಯ ಮೇಲೆ ರಿಷಬ್ ಶೆಟ್ಟಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ದೇಶದಾದ್ಯಂತ ಇಂದು ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿದೆ. ಮುಂಗಡವಾಗಿ ನಿನ್ನೆಯೂ ರಿಲೀಸ್ ಆಗಿತ್ತು. ಸಾಕಷ್ಟು ಜನ ನಿನ್ನೆಯೇ ಕಾಂತಾರ ದರ್ಶನವನ್ನ ಕಣ್ತುಂಬಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಅಭಿನಯಕ್ಕೆ, ಚಿತ್ರದ ಮೇಕಿಂಗ್ ಗೆ ಜನ ಫಿದಾ ಆಗಿದ್ದಾರೆ. ಬೆಳಗ್ಗೆಯಿಂದಾನೂ ಬಹುತೇಕ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದೆ. ಯು/ಎ ಸಿನಿಮಾ ಇದಾಗಿದ್ದು 2 ಗಂಟೆ 48 ನಿಮಿಷ 53 ಸೆಕೆಂಡ್ ಗಳ ಕಾಲ ಸಿನಿಮಾ ಇದೆ. ದೇಶದಾದ್ಯಂತ 7 ಸಾವಿರ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ. ಎಲ್ಲಾ ಕಡೆಯಲ್ಲೂ ಹೌಸ್ ಫುಲ್ ಪ್ರದರ್ಶನದೊಂದಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.

ದಸರಾ ಹಬ್ಬದ ಸಂಭ್ರಮ ಒಂದು ಕಡೆಯಾದ್ರೆ ಕಾಂತಾರ ಸಂಭ್ರಮ ಮತ್ತೊಂದು ಕಡೆ. ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶಿಸಿ ನಟಿಸಿದ ಈ ಚಿತ್ರ ಸರಿಸುಮಾರು 125 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡಿದೆ. ಅರವಿಂದ್ ಕಶ್ಯಪ್ ಕ್ಯಾಮರಾ ವರ್ಕ್ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲರ ನಟನೆ, ಕ್ಲೈಮ್ಯಾಕ್ಸ್ ಗೆ ಸಿನಿ ಪ್ರೇಮಿಗಳು ಖುಷಿಯಾಗಿದ್ದಾರೆ. ಕಾಂತಾರ ಕ್ಲೈಮ್ಯಾಕ್ಸ್ ನೋಡಿ ಖುಷಿಯಾಗಿದ್ದವರಿಗೆ ಕಾಂತಾರ ಚಾಪ್ಟರ್ 1 ಕ್ಲೈಮ್ಯಾಕ್ಸ್ ಇನ್ನು ಸಖತ್ತಾಗಿದೆ ಅನ್ನಿಸಿದೆ. ಒಟ್ಟಾರೆ ಕಾದಿದ್ದಕ್ಕೂ ಒಳ್ಳೆ ಸಿನಿಮಾವನ್ನೇ ಹೊಂಬಾಳೆ ನೀಡಿದೆ.












