ಸುದ್ದಿಒನ್, ಹಿರಿಯೂರು, ಜೂನ್. 03 : ಕನ್ನಡ ತಮಿಳಿನಿಂದ ಹುಟ್ಟಿಕೊಂಡಿದೆ ಎಂದು ನಟ ಕಮಲ್ ಹಾಸನ್ ಹೇಳಿಕೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಕೂಡಲೇ ಕಮಲ್ ಹಾಸನ್ ಕನ್ನಡಿಗರ ಕ್ಷಮೆಯಾಚನೆ ಮಾಡಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕೆ ಅಭಿನಂದನ್ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕನ್ನಡ ಭಾಷೆಗೆ ತನ್ನದೇ ಆದ ಶಾಸ್ತ್ರೀಯ ಸ್ಥಾನಮಾನ, ಇತಿಹಾಸ ಇದೆ. ಇಂತಹ ಭಾಷೆ ಬಗ್ಗೆ ಕಮಲ್ ಹಾಸನ್ ಹೇಳಿಕೆ ನೀಡಿರುವುದು ವಿಪಾರ್ಯಸವಾಗಿದೆ. ಕನ್ನಡ ಭಾಷೆ ಬಗ್ಗೆ ಮಾತಾಡಲು ಕಮಲ್ ಹಾಸನ್ ಭಾಷಾಜ್ಞಾನಿ ಅಲ್ಲ ಅಥವಾ ವಿಜ್ಞಾನಿಯು ಅಲ್ಲ. ಕನ್ನಡ ಭಾಷೆ ಬಗ್ಗೆ ತಪ್ಪು ಹೇಳಿಕೆ ನೀಡಿ, ಕ್ಷಮೆ ಕೇಳುವುದಿಲ್ಲ ಎಂದು ಉದ್ದಟತನ ಮೆರೆದಿದ್ದಾರೆ. ಇಂತವರ ಚಿತ್ರಗಳನ್ನು ರಾಜ್ಯದಲ್ಲಿ ಪ್ರದರ್ಶಿಸಬಾರದು. ಜೊತೆಗೆ ಭಾಷಾ ವಿರೋಧಿಗಳನ್ನು ರಾಜ್ಯದೊಳಗೆ ಸೇರಿಸಬಾರದು. ಚಿತ್ರರಂಗದಲ್ಲಿ ಕಮಲ್ ಹಾಸನ್ ಯಶಸ್ವಿಯಾಗಲು ಕರುನಾಡಿನ ಶ್ರಮವಿದೆ ಎಂಬುದನ್ನು ಅವರು ಮರೆಯಬಾರದು. ಕೂಡಲೇ ಕ್ಷಮೆ ಕೇಳಿ ಕನ್ನಡಾಭಿಮಾನ ಮೆರೆಯಬೇಕು ಎಂದು ಆಗ್ರಹಿಸಿದರು.



















