Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜವಾಹರ್ ನವೋದಯ ವಿದ್ಯಾಲಯ: 9 ಮತ್ತು 11 ನೇ ತರಗತಿ ಪ್ರವೇಶಕ್ಕೆ ಅರ್ಜಿ

---Advertisement---

ಸುದ್ದಿಒನ್, ಚಿತ್ರದುರ್ಗ. (ಅ.26) : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿಗೆ 9 ಮತ್ತು 11ನೇ ತರಗತಿಗೆ ಪ್ರವೇಶ ಪಡೆಯಲು ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಶಾಲೆಗಳ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನ.
https://cbseitms.nic.in/2023/nvsxi_11/PrincipalLogin/getafflictionno ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಿತ್ರದುರ್ಗ ಜಿಲ್ಲೆಯ ಖಾಯಂ ನಿವಾಸಿಯಾಗಿರಬೇಕು. ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿರುವ ಸರ್ಕಾರ, ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 2023-24ರ ಶೈಕ್ಷಣಿಕ ಅವಧಿಯಲ್ಲಿ 8 ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

9ನೇ ತರಗತಿಗೆ ಅರ್ಜಿ ಸಲ್ಲಿಸಲು 2009 ಮೇ 5 ರಿಂದ 2011ರ ಜುಲೈ 31 ರ ನಡುವೆ ಜನಿಸಿರಬೇಕು. 11ನೇ ತರಗತಿಗೆ ಅರ್ಜಿ ಸಲ್ಲಿಸಲು 2007ರ ಜೂನ್ 1 ರಿಂದ 2009ರ ಜುಲೈ 31 ರ ನಡುವೆ ಜನಿಸಿರಬೇಕು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಆಯ್ಕೆ ಪರೀಕ್ಷೆಯು 2024ರ ಫೆಬ್ರವರಿ 10 ರಂದು ನಡೆಯಲಿದೆ.

8 ನೇ ತರಗತಿ ವಿದ್ಯಾರ್ಥಿಗಳಿಗೆ ಆಯ್ಕೆ ಪರೀಕ್ಷೆ: ಹಿಂದಿ, ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಓಎಂಆರ್ ಆಧಾರಿತ ವಸ್ತುನಿಷ್ಠ ಪ್ರಕಾರ ದ್ವಿಭಾಷಾ ಪತ್ರಿಕೆ (ಹಿಂದಿ ಮತ್ತು ಇಂಗ್ಲಿಷ್) ಪಠ್ಯಕ್ರಮ ಮತ್ತು ಆಯ್ಕೆಯ ಮಾನದಂಡಗಳಿಗಾಗಿ ಎನ್‍ವಿಎಸ್ ಅಧಿಸೂಚನೆಯನ್ನು ನೋಡಬಹುದು.

10ನೇ ತರಗತಿ ವಿದ್ಯಾರ್ಥಿಗಳಿಗೆ ಆಯ್ಕೆ ಪರೀಕ್ಷೆ: ಮಾನಸಿಕ ಸಾಮಥ್ರ್ಯ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಒಎಂಆರ್ ಆಧಾರಿತ ವಸ್ತುನಿಷ್ಠ ಪ್ರಕಾರ ದ್ವಿಭಾಷಾ ಪತ್ರಿಕೆ (ಹಿಂದಿ ಮತ್ತು ಇಂಗ್ಲಿಷ್) ಪಠ್ಯಕ್ರಮ ಮತ್ತು ಆಯ್ಕೆಯ ಮಾನದಂಡಗಳಿಗಾಗಿ ಎನ್‍ವಿಎಸ್ ಅಧಿಸೂಚನೆಯನ್ನು ನೋಡಬಹುದು.

10ನೇ ತರಗತಿ ಅಧ್ಯಯನದ ಜಿಲ್ಲೆ ಮತ್ತು ನಿವಾಸ ಒಂದೇ ಆಗಿದ್ದರೆ, ನಂತರ ಮಾತ್ರ ಅಭ್ಯರ್ಥಿಯನ್ನು ಜಿಲ್ಲಾ ಮಟ್ಟದ ಮೆರಿಟ್‍ಗೆ ಪರಿಗಣಿಸಲಾಗುತ್ತದೆ ಎಂದು ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...