Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

18 ವರ್ಷ ತುಂಬಿದ  ತಕ್ಷಣ ಪ್ಯಾನ್ ಕಾರ್ಡ್ ನಲ್ಲಿ ಈ ವಿವರಗಳನ್ನು ಅಪ್‌ಡೇಟ್ ಮಾಡುವುದು ಕಡ್ಡಾಯ!

---Advertisement---

ನವದೆಹಲಿ :  ಪ್ಯಾನ್ ಕಾರ್ಡ್ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಗತ್ಯವಾದ ಪ್ರಮುಖ ಹಣಕಾಸು ದಾಖಲೆಯಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇದು ಬೇಕಾಗುತ್ತದೆ. ಅಪ್ರಾಪ್ತರ ಹೆಸರಿನಲ್ಲಿ ಪೋಷಕರು ಹೂಡಿಕೆ ಮಾಡಲು, ಬ್ಯಾಂಕ್ ಖಾತೆ ತೆರೆಯಲು ಅಥವಾ ಯಾವುದೇ ಹಣಕಾಸು ವಹಿವಾಟು ನಡೆಸಲು ಮೈನರ್ ಪ್ಯಾನ್ ಕಾರ್ಡ್ ನೆರವಾಗುತ್ತದೆ. ಜತೆಗೆ ಇದು ಗುರುತಿನ ಚೀಟಿಯಾಗಿಯೂ ಕಾರ್ಯನಿರ್ವಹಿಸುತ್ತದೆ.

ಆದರೆ ಚಿಕ್ಕ ವಯಸ್ಸಿನಲ್ಲಿ ಪಡೆದ ಪ್ಯಾನ್ ಕಾರ್ಡ್ ಅನ್ನು 18 ವರ್ಷ ಪೂರ್ಣಗೊಂಡ ಬಳಿಕ ಅಪ್‌ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಮೈನರ್ ಪ್ಯಾನ್ ಕಾರ್ಡ್‌ನಲ್ಲಿ ಮಗುವಿನ ಸಹಿ ಇರುವುದಿಲ್ಲ, ಬದಲಿಗೆ ಪೋಷಕರು ಅಥವಾ ಪಾಲಕರ ಸಹಿ ಇರುತ್ತದೆ. ಹೀಗಾಗಿ ಪ್ರೌಢಾವಸ್ಥೆಗೆ ಬಂದ ತಕ್ಷಣ ಸ್ವಂತ ಸಹಿ ಮತ್ತು ಹೊಸ ಫೋಟೋವನ್ನು ನವೀಕರಿಸಬೇಕಾಗುತ್ತದೆ.

ಪ್ಯಾನ್ ಕಾರ್ಡ್ ವಿವರಗಳನ್ನು ಏಕೆ ಅಪ್‌ಡೇಟ್ ಮಾಡಬೇಕು?

ಮಕ್ಕಳು ಬೆಳೆದಂತೆ ಅವರ ಮುಖಚಹರೆ ಮತ್ತು ರೂಪದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಅಪ್ರಾಪ್ತರಾಗಿದ್ದಾಗ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೋಷಕರೇ ನಿರ್ವಹಿಸಿರುವುದರಿಂದ, ಅದರಲ್ಲಿರುವ ಸಂಪರ್ಕ ವಿವರಗಳೂ ಪೋಷಕರದ್ದೇ ಆಗಿರುತ್ತವೆ. ಆದ್ದರಿಂದ 18 ವರ್ಷ ತುಂಬಿದ ನಂತರ ಸ್ವಂತ ಫೋಟೋ ಮತ್ತು ಸಹಿಯನ್ನು ಕಡ್ಡಾಯವಾಗಿ ನವೀಕರಿಸಬೇಕು. ಇದೇ ಸಮಯದಲ್ಲಿ ಹೆಸರು ಅಥವಾ ವಿಳಾಸದಂತಹ ವೈಯಕ್ತಿಕ ವಿವರಗಳಲ್ಲಿ ಯಾವುದೇ ತಪ್ಪುಗಳಿದ್ದರೂ ಸರಿಪಡಿಸಿಕೊಳ್ಳಬಹುದು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, 18 ವರ್ಷ ತುಂಬಿದ ತಕ್ಷಣ ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದಾಯ ತೆರಿಗೆ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದುವುದು ಕಾನೂನುಬಾಹಿರ. ಆದ್ದರಿಂದ ಹಳೆಯ ಮೈನರ್ ಪ್ಯಾನ್ ಕಾರ್ಡ್‌ನಲ್ಲಿಯೇ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಕಚೇರಿಗಳಿಗೆ ಅಲೆಯದೆ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಸುಲಭವಾಗಿ ಪೂರ್ಣಗೊಳಿಸಬಹುದು.

ವಿವರಗಳನ್ನು ಅಪ್‌ಡೇಟ್ ಮಾಡುವ ಸರಳ ವಿಧಾನ

ಪ್ಯಾನ್ ಕಾರ್ಡ್‌ನಲ್ಲಿ ವಿವರಗಳನ್ನು ತಿದ್ದುಪಡಿ ಮಾಡಲು ಮೊದಲು ಅಧಿಕೃತ ‘ಪ್ರೋಟೀನ್ ಇ-ಗವ್’ ಅಥವಾ ‘ಯುಟಿಐಐಟಿಎಸ್ಎಲ್’ ಪೋರ್ಟಲ್‌ಗೆ ಭೇಟಿ ನೀಡಬೇಕು. ಅಲ್ಲಿ ಮುಖಪುಟದಲ್ಲಿ ಕಾಣುವ ‘ಪ್ಯಾನ್ ಕರೆಕ್ಷನ್’ ಅಥವಾ ತಿದ್ದುಪಡಿ ಆಯ್ಕೆಯನ್ನು ಕ್ಲಿಕ್ ಮಾಡಿ, ಪ್ರಸ್ತುತ ಇರುವ ಪ್ಯಾನ್ ಸಂಖ್ಯೆ ಹಾಗೂ ಅಗತ್ಯ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು.

ನಂತರ ವಿಳಾಸ ಮತ್ತು ಗುರುತಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ದಾಖಲೆಯನ್ನು ಅಪ್‌ಲೋಡ್ ಮಾಡಿ, ಸ್ವಂತ ಸಹಿ ಮತ್ತು ನೂತನ ಭಾವಚಿತ್ರವನ್ನು ಸೇರಿಸಬೇಕು. ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ಅರ್ಜಿಯನ್ನು ಅಂತಿಮವಾಗಿ ಸಲ್ಲಿಕೆ ಮಾಡಬೇಕು. ಅರ್ಜಿ ಸಲ್ಲಿಕೆಯಾದ ಬಳಿಕ ಪರದೆಯ ಮೇಲೆ ಬರುವ ಸ್ವೀಕೃತಿ ಸಂಖ್ಯೆಯನ್ನು ಜೋಪಾನವಾಗಿ ಇರಿಸಿಕೊಳ್ಳಬೇಕು. ಈ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಪ್ರಕ್ರಿಯೆ ಆರಂಭಿಸುವ ಮುನ್ನ ಎಲ್ಲಾ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.

Join WhatsApp

Join Now

Join Telegram

Join Now