in ,

ನಾಚಿಕೆಗೇಡಿನ ಸಂಗತಿ ಎಂದ ಜೆಡಿಎಸ್.. ಪ್ರಧಾನಿ ಹುದ್ದೆಗೆ ಕಳಂಕವೆಂದ ಕಾಂಗ್ರೆಸ್ : ಅಷ್ಟಕ್ಕೂ ಮೋದಿಯ ಯಾವ ವಿಚಾರಕ್ಕೆ ಇವ್ರೆಲ್ಲ ಹಿಂಗಂದ್ರು..?

suddione whatsapp group join

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾಜ್ಯಕ್ಕೆ ಭೇಟಿ ನೀಡಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರಿಗೆ ಸಿಎಂ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ಪ್ರಮುಖ ನಾಯಕರು ಸ್ವಾಗತ ಕೋರಿದ್ದಾರೆ. ಅದರ ಜೊತೆಗೆ ರೌಡಿಶೀಟರ್ ಸಾಲಿನಲ್ಲಿರುವ ಫೈಟರ್ ರವಿಗೆ ಪ್ರಧಾನಿ ಮೋದಿಯವರು ಕೈ ಮುಗಿದಿರುವ ಫೋಟೋ ಒಂದು ವೈರಲ್ ಆಗಿದೆ.

ಈ ಫೋಟೋ ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ @narendramodi ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಕಿಡಿಕಾರಿದೆ.

ಇಂದು ಮಾಜಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರಿಗೆ ಮತ್ತು ಅಂಡರ್ ವರ್ಲ್ಡ್ ಡಾನ್ ಕೆಲಸ ಮಾಡುವವರಿಗೆ ತಲೆಬಾಗಿ ಕೈ ಮುಗಿದಿದ್ದಾರೆ. ಇದಿ ನಾಚಿಕೆಗೇಡಿನ ಕೆಲಸ. ಈ ದೃಶ್ಯ ನೋಡ್ತಾ ಇದ್ರೆ ಕರ್ನಾಟಕದಲ್ಲಿ ಬಿಜೆಪಿ ಯಾವ ರೀತಿಯ ದಯನೀಯ ಸ್ಥಿತಿ ತಲುಪಿದೆ ಎಂದು ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ರಾಹುಲ್ ಗಾಂಧಿ ಲಂಡನ್ ನಲ್ಲಿ ನೀಡಿದ ಹೇಳಿಕೆಗೆ ಸಂಸತ್ ನಲ್ಲಿ ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕರು..!

ಈ ರಾಶಿಯವರ ಬಹು ಮುಖ್ಯವಾದ ಕೆಲಸ, ಕಂಕಣಬಲ, ಉದ್ಯೋಗ, ಆಕಸ್ಮಿಕ ಧನ ಲಾಭ, ಯಶಸ್ಸಿನ ಕಡೆಗೆ