Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಧಿಕಾರಿಗಳ ಯಡವಟ್ಟಿನಿಂದ ಯಶ್ ತಾಯಿ ಹಾಗೂ ದೇವರಾಜ್ ನಡುವೆ ಜಗಳ ಆಗ್ತಾ ಇದೆಯಾ..?

---Advertisement---

ಹಾಸನ : ಕಳೆದ ಕೆಲವು ದಿನಗಳಿಂದ ಹಾಸನದ ತಮ್ಮ ಮನೆ ಬಳಿಯ ಜಮೀನಿನ ಸಂಬಂಧ ಯಶ್ ತಾಯಿ ಪುಷ್ಪಾ ಹಾಗೂ ದೇವರಾಜ್ ನಡುವೆ ಜಗಳ ತಾರಕಕ್ಕೇರಿದೆ. ಕೋರ್ಟ್ ಮೆಟ್ಟಿಲು ಕೂಡ ಏರಿ ಆಗಿದೆ, ಕಾಂಪೌಂಡ್ ಹೊಡೆದು ಹಾಕಿ, ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಪೊಲೀಸರು ಮಧ್ಯಪ್ರವೇಶ ಮಾಡಿ, ಜಗಳಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ ಎಲ್ಲಾ ದಾಖಲೆಗಳನ್ನ ಪರಿಶೀಲನೆ ಮಾಡುವಾಗ ಅರ್ಥ ಆಗಿದ್ದು, ಇದು ಅಧಿಕಾರಿಗಳ ಯಡವಟ್ಟು ಎಂಬುದು ಅರ್ಥ ಆಗಿದೆ.

ಒಂದೇ ಸೈಟ್ ಗೆ ಅಧಿಕಾರಿಗಳು ಎರಡೆರಡು ದಾಖಲೆಗಳನ್ನು ನೀಡಿ ಗೋಲ್ಮಾಲ್ ಎಸಗಿದ್ದಾರೆ ಎಂಬುದು ತಿಳಿದು ಬಂದಿದ್ದಾರೆ. ಯಾಕಂದ್ರೆ ಎರೆಉ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ, ದೇವರಾಜು ಅವರ ಬಳಿ ಇರುವ ದಾಖಲೆಗಳು ಲಕ್ಷ್ಮಮ್ಮ ಅವರೇ ಜಾಗದ ಮಾಲೀಕರು ಎಂಬುದನ್ನ ಸಾಬೀತುಪಡಿಸುತ್ತಿದೆ. ಪುಷ್ಪಾ ಅವರ ಬಳಿಯಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ನಿವೇಶನ ಅವರಿಗೆ ಸೇರಿದೆ ಎಂಬುದನ್ನು ತೋರಿಸುತ್ತಿದೆ. ಹೀಗಾಗಿ ಕೋರ್ಟ್ ನಿಂದಾನೇ ಇದರ ಅಂತಿಮ ತೀರ್ಪು ಹೊರ ಬೀಳಬೇಕಿದೆ. ಸದ್ಯಕ್ಕೆ ಪೊಲೀಸರು ಜಗಳವನ್ನಂತು ನಿಲ್ಲಿಸಿದ್ದಾರೆ.

ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ವಿದ್ಯಾನಗರದಲ್ಲಿರುವ 40*60 ಅಳತೆಯ ನಿವೇಶನವನ್ನು 29-1-2020 ರಲ್ಲಿ ಪುಷ್ಪಾ ಅವರು ಅಮೆರಿಕದಲ್ಲಿ ವಾಸವಾಗಿರುವ ಗಿರೀಶ್ ಕೋಂ ಮಹಲಿಂಗಪ್ಪ ಅವರಿಂದ ಖರೀದಿ ಮಾಡಿ ಕಾಂಪೌಂಡ್ ಹಾಕಿದ್ದರು. ಈ ಹಿಂದೆ ಅಂದರೆ 1982 ರಲ್ಲಿ ಚಿಕ್ಕೆಗೌಡ ಸನ್ ಆಫ್ ತಿಮ್ಮೇಗೌಡರಿಂದ ಸೈಟ್‍ನ್ನು ಕೆ.ಪಿ.ಶ್ರೀಮತಿ / ಪಿ.ಮಲ್ಲೇಶ್ ಖರೀದಿಸಿದ್ದು ಅವರಿಂದ ಕೆ.ಪಿ.ಶ್ರೀಮತಿ 2007 ರಲ್ಲಿ ಗಿರೀಶ್ ಕೋಂ ಮಹಲಿಂಗಪ್ಪ ಖರೀದಿ ಮಾಡಿದ್ದರು. 1982 ರಿಂದ ಇಬ್ಬರ ಹೆಸರಿನ ಮೂಲಕ ಮೂರನೇ ಮಾಲೀಕರಾಗಿ ಪುಷ್ಪಾ ಸೈಟ್ ಖರೀದಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...