ದಕ್ಷಿಣ ಕನ್ನಡ: ಕಳೆದ ಕೆಲವು ದಿನಗಳಿಂದ ಅನಾಮಿಕ ವ್ಯಕ್ತಿ ತೋರಿಸಿದ ಜಾಗದಲ್ಲೆಲ್ಲಾ ಎಸ್ಐಟಿ ಅಗೆದು ಅಗೆದು ಸುಸ್ತಾಗಿದ್ದಾರೆ. ಆರಂಭದಲ್ಲಿ ಈ ವಿಚಾರವಾಗಿ ಸಾಕಷ್ಟು ಕುತೂಹಲವಿತ್ತು. ಆದರೆ ಅಗೆದ ಜಾಗದಲ್ಲಿ ಏನು ಸಿಗದೆ ಇರೋದನ್ನ ಕಂಡು ಜನ ಕೂಡ ಉತ್ಸಾಹ ಕಳೆದುಕೊಂಡಿದ್ದಾರೆ. 13ನೇ ಸ್ಪಾಟ್ ಬಗ್ಗೆ ಎಲ್ಲರ ಚಿತ್ತವಿತ್ತು. ಆದರೆ ನಿನ್ನೆ ಅದನ್ನು ಅಗೆಯಲಾಗಿದ್ದು, ಅಲ್ಲಿಯೂ ಮಣ್ಣು ಬಿಟ್ಟರೆ ಬೇರೆನು ಕಂಡಿಲ್ಲ. GPR ಸಿಸ್ಟಮ್ ಮಾಡಿ, ಅಲ್ಲಿ ಉತ್ಖನನ ಮಾಡಿ ಆ ಸ್ಪಾಟ್ ತನಿಖೆ ನಡೆಸಬೇಕು ಅಂತ ಸುಮ್ಮನೆ ಆಗಿದ್ರು. ನಿನ್ನೆ ಆ ಕೆಲಸವೂ ಆಗಿದೆ. ಆದರೂ ಏನು ಸಿಕ್ಕಿಲ್ಲ.
ಆದರೆ 13ನೇ ಸ್ಪಾಟ್ ನಲ್ಲಿ ಮತ್ತೆ ಉತ್ಖನನ ಮಾಡಿವಂತೆ ಆ ಅನಾಮಿಕ ವ್ಯಕ್ತಿ ಒತ್ತಡ ಹಾಕಿದ್ದು, ಮತ್ತೆ ಇಂದು ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಅಗೆದ ಜಾಗದ ಅಕ್ಕಪಕ್ಕದ ಜಾಗದಲ್ಲಿಯೇ ಇಂದು ಕೂಡ ಹುಡುಕಾಟ ನಡೆಯುತ್ತಿದೆ. ಸದ್ಯ ಇಷ್ಟು ದಿನ ಅಗೆದ ಜಾಗದ ಪೈಕಿಯಲ್ಲಿ ಆರನೇ ಸ್ಪಾಟ್ ನಲ್ಲಿ ಬಿಟ್ಟರೆ ಬೇರೆಲ್ಲೂ ಸಿಕ್ಕಿಲ್ಲ.
ಈ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಕೂಡ ಮಾತನಾಡಿದ್ದಾರೆ. ಈ ಹದಿಮೂರನೇ ಸ್ಪಾಟ್ ಆದ ಬಳಿಕ ಮುಂದೆ ನೋಡಿ ತೀರ್ಮಾನ ಮಾಡೋಣಾ ಅಂತ ಹೇಳಿದ್ದಾರೆ. ಏನು ಸಿಗದೆ ಇದ್ದರೆ ಶೋಧಕಾರ್ಯವನ್ನ ನಿಲ್ಲಿಸುವ ಸಾಧ್ಯತೆಯು ಇದೆ. ಈ ವ್ಯಕ್ತಿ ತೋರಿಸಿದ ಎಲ್ಲಾ ಕಡೆಯಲ್ಲೂ ಆ ವ್ಯಕ್ತಿಯನ್ನ ಕರೆದುಕೊಂಡು ಹೋಗ್ತಾ ಇದ್ದೀವಿ, ಮಣ್ಣನ್ನ ಅಗೆಯುತ್ತಾ ಇದ್ದೀವಿ. ಆದರೂ ಏನು ಪ್ರಯೋಜನವಾಗಿಲ್ಲ ಎಂದಿದ್ದಾರೆ. 50% ಅವಶೇಷಗಳು ಸಿಕ್ಕಿದ್ದರೆ ಎಸ್ಐಟಿ ಅಧಿಕಾರಿಗಳು ಇನ್ನಷ್ಟು ಹೆಚ್ಚು ಗಮನ ಹರಿಸುತ್ತಿದ್ದರೇನೋ. ಅವಶೇಷಗಳು ಸಿಗದೆ ಹೋದರೆ ಬಹುಶಃ ಇವತ್ತಿಗೆ ಅಗೆಯುವ ಕೆಲಸ ನಿಲ್ಲಬಹುದು ಎಂದೇ ಊಹಿಸಲಾಗಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






