Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಂಗ್ರೆಸ್ ಸರ್ಕಾರ RSS ಟಾರ್ಗೆಟ್ ಮಾಡ್ತಾ ಇದ್ಯಾ : ಸಿಎಂ ಸಿದ್ದರಾಮಯ್ಯ ಏನಂದ್ರು..?

---Advertisement---

 

ಮೈಸೂರು: ರಾಜ್ಯದಲ್ಲಿ ಸರ್ಕಾರಿ ಜಾಗಗಳನ್ನು ಬಳಸಿಕೊಳ್ಳುವುದಕ್ಕೆ ಅನುಮತಿ ಪಡೆಯಲೇಬೇಕು. ಖಾಸಗಿ ಕಾರ್ಯಕ್ರಮ ಅಥವಾ ಸಂಘ ಸಂಸ್ಥೆಗಳ ಕಾರ್ಯಕ್ರಮಗಳು ನಡೆಯಬೇಕು ಅಂದ್ರು ಈಗ ಸರ್ಕಾರ ಅನುಮತಿ ಬೇಕು. ಅಷ್ಟೇ ಅಲ್ಲ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಕೂಡ ಭಾಗಿಯಾಗಬಾರದು ಎಂಬ ಆದೇಶವಾಗಿದೆ. ಈಗಾಗಲೇ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಪಿಡಿಒ ಅಮಾನತಾಗಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಹಲವರು ಕಾಂಗ್ರೆಸ್, ಆರ್ಎಸ್ಎಸ್ ನ ಟಾರ್ಗೆಟ್ ಮಾಡ್ತಿದೆ ಅಂತ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನ ಈ ಹಿಂದೆಯೇ ಮಾಡಿದ್ರು. ಟಾರ್ಗೆಟ್ ಆರ್ ಎಸ್ ಎಸ್ ಅಲ್ವೇ ಅಲ್ಲ. ಬಿಜೆಪಿ ಯಾವಾಗಲೂ ರಾಜಕಾರಣವನ್ನೇ ಮಾಡುವುದು. ಎಂದು ಬಡವರ ಕೆಲಸವನ್ನು ಮಾಡುವುದೇ ಇಲ್ಲ ರಾಜಕಾರಣವನ್ನೇ ಮಾಡುವುದು ಎಂದಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿದ್ದು, ಜನ ಅಹವಾಲು ಸ್ವೀಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನೋಡಲು ಬಂದ ಜನ ವಿಧವಿಧವಾದ ಸಮಸ್ಯೆಗಳನ್ನು ಅವರ ಬಳಿ ತೋಡಿಕೊಂಡಿದ್ದಾರೆ. ಅದರಲ್ಲೂ ಮಹಿಳೆಯೊಬ್ಬರು ನಮ್ಮಂಥ ಬಡವರ ಕಡೆಗೂ ಒಮ್ಮೆ ನೋಡಿ ಸಿಎಂ ಸಾಹೇಬ್ರೆ ಅಂದಿದ್ದಾರೆ. ಸಿದ್ದರಾಮಯ್ಯ ಅವರು ಬಡವರಿಗೆ ಅನುಕೂಲವಾಗುವಂತೆಯೇ ಸಾಕಷ್ಟು ಯೋಜನೆಗಳನ್ನ ತಂದಿದ್ದಾರೆ. ಅದರಲ್ಲೂ ಮಹಿಳೆಯರಿಗಾಗಿ ಶಕ್ತಿ ಯೋಜನೆ, ವಿದ್ಯುತ್ ಫ್ರೀ ನೀಡಿರುವುದು, ಗೃಹಲಕ್ಷ್ಮೀ ಈ ಎಲ್ಲವೂ ಮಹಿಳೆಯರಿಗಾಗಿಯೇ ತಂದಿದ್ದಾರೆ. ಇಂದಿನ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲೂ ಮಹಿಳೆಯರು ತಮ್ಮ ಸಮಸ್ಯೆಗಳನ್ನ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೇಳಿಕೊಂಡಿದ್ದಾರೆ. ಸದ್ಯ ಇದೇ ವೇಳೆ ಆರ್ ಎಸ್ ಎಸ್ ಬಗೆಗಿನ ಚರ್ಚೆ, ಆರೋಪದ ಬಗ್ಗೆಯೂ ಉತ್ತರ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now