Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಹಳೇ ವರ್ಚಸ್ಸಿಗೆ ಮರಳಲು ಎಸ್ ಎಂ ಕೃಷ್ಣ ಹಾದಿ ಹಿಡಿದರಾ ಸಿದ್ದರಾಮಯ್ಯ..?

---Advertisement---

ಬೆಂಗಳೂರು: ಸಿದ್ದರಾಮಯ್ಯ ಅವರ ಕ್ರೇಜ್ ರಾಜ್ಯದಲ್ಲಿ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಹೈಕಮಾಂಡ್ ನಾಯಕರಿಗೂ ಗೊತ್ತಿದೆ. ಆ ಕಾರಣಕ್ಕಾಗಿಯೇ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಅವರನ್ನ ಅಹಿಂದ ನಾಯಕ ಎಂದೇ ಕರೆಯುತ್ತಾರೆ. ಹೀಗಾಗಿಯೇ ಎಐಸಿಸಿ ಮಟ್ಟದಲ್ಲೂ ಅಹಿಂದ ನಾಯಜತ್ವದ ಜವಾಬ್ದಾರಿ ನಿಭಾಯಿಸ್ತಾ ಇದ್ದಾರೆ. ಇಷ್ಟು ವರ್ಷದ ರಾಜಕೀಯದಲ್ಲಿ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರಿಗೆ ಮೂಡ ಹಗರಣ ದೊಡ್ಡ ಸವಾಲಾಗಿ‌ ಪರಿಣಮಿಸಿತ್ತು. ಇದಾದ ಮೇಲೆಯೇ ಸಿಎಂ ಬದಲಾವಣೆ‌ ಚರ್ಚೆಗಳೆಲ್ಲಾ ಶುರುವಾಗಿದ್ದು. ಹೀಗಾಗಿ ಹಲವರು, ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು ಕಡಿಮೆ ಆಯ್ತು ಅಂತೆಲ್ಲಾ ಮಾತಾಡಿಕೊಂಡರು. ಇದೀಗ ತಮ್ಮ ವರ್ಚಸ್ಸು ಹಾಗೇ ಇದೆ ಅಂತ ತೋರಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರು ಹೊಸ ಯೋಜನೆ ಶುರು ಮಾಡಿದ್ದಾರೆ. ಅದರಲ್ಲೂ ಎಸ್ ಎಂ ಕೃಷ್ಣ ಅವರ ಹಾದಿಯನ್ನ ಅನುಸರಿಸುತ್ತಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಿಂದ ಸಿದ್ದರಾಮಯ್ಯ ಅವರಿಗೆ ಕ್ರೇಜ್ ಎಷ್ಟಿದೆ ಅನ್ನೋದು ಗೊತ್ತಾಗಿತ್ತು. ಇದೀಗ ಅದೇ ರೀತಿಯಾದ ಉತ್ಸವಗಳನ್ನ ಆಚರಿಸಿಕೊಳ್ಳುವುದಕ್ಕೆ ಯೋಜನೆ ರೂಪಿಸಿದ್ದಾರೆ. ಅದೇ ರೀತಿ ಹಾಸನದಲ್ಲಿ ಸಿದ್ದರಾಮೋತ್ಸವ 2.0 ಗೆ ಎಲ್ಲಾ ತಯಾರಿ ನಡೆದಿತ್ತು. ಆದರೆ ಒಂದಷ್ಟು ಚರ್ಚೆಗಳ ನಂತರ ಅದು ಜನಕಲ್ಯಾಣ ಸಮಾವೇಶವಾಗಿ ಬದಲಾಗಿತ್ತು.

ಈಗ ತಮ್ಮ ವರ್ಚಸ್ಸನ್ನ ತೋರಿಸುವುದಕ್ಕೆ ಬೇರೆ ಬೇರೆ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು, ಜನರ ಸಮಸ್ಯೆಗಳನ್ನ ಆಲಿಸುವ ಮೂಲಕ ತಮ್ಮ ವರ್ಚಸ್ಸನ್ನು ಕಾಪಾಡಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

Join WhatsApp

Join Now

Join Telegram

Join Now

Leave a Comment