Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನೆಯಿಂದ ಹೊರಹೋಗೋದು ತುಕಾಲಿ ಸಂತೂನಾ..? : ಸಂತು – ಪಂತು ಕಣ್ಣೀರಿಗೆ ಕರಗಿದ ಬಿಗ್ ಬಾಸ್

---Advertisement---

ಬಿಗ್ ಬಾಸ್ ಸೀಸನ್ 10 ಫಿನಾಲೆಗೆ ಸನಿಹವಾಗಿದೆ. ಮನೆ ಮಂದಿಯ ಆಟವೂ ಹಾಗೇ ಇದೆ. ಕಡೆಯ ಲಕ್ಸುರಿ ಬಜೆಟ್ ಅನ್ನು ಸುಲಭವಾಗಿಯೇ ಕಳೆದುಕೊಂಡಿದ್ದಾರೆ. ಇದರ ನಡುವೆ ಮನೆಯಿಂದ ಇಂದು ಹೊರಹೋಗುವವರು ಯಾರು..? ಫಿನಾಲೆಗೆ ಉಳಿದುಕೊಳ್ಳುವುದು ಯಾರು ಎಂಬುದೇ ಕುತೂಹಲಕಾರಿಯಾಗಿದೆ. ಈಗಾಗಲೇ ಟಿಕೆಟ್ ಟು ಫಿನಾಲೆ ಟಾಸ್ಕ್ ಗಳಲ್ಲಿ ಸಂಗೀತಾ ಗೆಲುವು ಕಂಡಿದ್ದಾರೆ. ಫಿನಾಲೆಗೆ ಟಿಕೆಟ್ ಪಡೆದು ಸೇಫ್ ಆಗಿದ್ದಾರೆ.

ಪ್ರತಾಪ್ ಕೂಡ ಮುಂಚೂಣಿಯಲ್ಲಿದ್ದಾರೆ. ನಮ್ರತಾ 3ನೇ ಸ್ಥಾನದಲ್ಲಿದ್ದಾರೆ. ನಮ್ರತಾ ಸೇರಿದಂತೆ ಕಾರ್ತಿಕ್, ವಿನಯ್, ವರ್ತೂರು ಸಂತೋಷ್, ತನಿಷಾ ನಾಮಿನೇಟ್ ಆಗಿದ್ದಾರೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ. ಅವರು ತುಕಾಲಿ ಸಂತೋಷ್ ಎಂದೇ ಊಹೆ ಮಾಡಲಾಗಿದೆ.

ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ‘ಸಂತು-ಪಂತು ಒಬ್ಬರಿಗೆ ಇಂದು ಜರ್ನಿ ಮುಗಿಯಲಿದೆ’ ಎಂದಿದ್ದಾರೆ. ವರ್ತೂರು ಸಂತೋಷ್, ತುಕಾಲಿಗೆ. ತುಕಾಲಿ ಸಂತೋಷ್ ವರ್ತೂರು ಸಂತೋಷ್ ಅವರಿಗೆ ಬೆಂಬಲ ನೀಡಿದ್ದಾರೆ. ಇಬ್ಬರ ಫ್ರೆಂಡ್ಶಿಪ್ ನೋಡಿ ಸುದೀಪ್ ಕೂಡ ಶಬ್ಬಾಶ್ ಹೇಳಿದ್ದಾರೆ.

 

ಈ ಸೀಸನ್ ನಲ್ಲಿ ಯಾರಲ್ಲೂ ನೋಡಿರದ ಬಾಂಧವ್ಯವನ್ನು ನಿಮ್ಮಲ್ಲಿ ನೋಡಿದ್ದೇನೆ ಎಂದಿದ್ದಾರೆ. ಈ ಸೀಸನ್ ನಲ್ಲಿ ಆರಂಭದಿಂದ ಕಡೆಯವರೆಗೂ ಒಳ್ಳೆ ಸ್ನೇಹ ಕಾಪಾಡಿಕೊಂಡು ಬಂದಿದ್ದು ಇವರಿಬ್ಬರೇನೆ. ಯಾರಲ್ಲಿಯೂ ಮನೆ ಬಿಟ್ಟು ಹೋಗ್ತಾ ಇದ್ದೀವಿ ಅನ್ನೋ ಫೀಲಿಂಗ್ಸ್ ಇಲ್ಲ. ಯಾರೂ ಆ ಭಾವನೆಯನ್ನು ವ್ಯಕ್ತಪಡಿಸುತ್ತಲೂ ಇಲ್ಲ. ಗೇಮ್ ಗೇಮ್ ಗೇಮ್ ಅಷ್ಟೇ. ಆದರೆ ನಿನ್ನೆ ರಾತ್ರಿ ಕೂಡ ತುಕಾಲಿ ಹಾಗೂ ವರ್ತೂರು ಇನ್ನು ಕೆಲವೇ ದಿನಗಳಲ್ಲಿ ಈ ಜರ್ನಿ ಮುಗಿದು ಬಿಡುತ್ತದೆ ಎಂದೇ ಕಣ್ಣೀರು ಹಾಕಿದ್ದರು. ಇದೀಗ ಬಿಗ್ ಬಾಸ್ ಇವರಿಬ್ಬರ ಬಾಂಧವ್ಯಕ್ಕೆ ಮನಸೋತಿದೆ. ಮೂಲಗಳ ಪ್ರಕಾರ ಇಂದು ಬಿಗ್ ಬಾಸ್ ಮನೆಯಿಂದ ಯಾರೂ ಹೊರ ಹೋಗುತ್ತಿಲ್ಲ. ತುಕಾಲಿ ಕೂಡ ಸೇವ್ ಆಗಿದ್ದಾರೆ. ಆದರೆ ವಾರದ ನಡುವೆ ಒಬ್ಬರನ್ನು ಮನೆಗೆ ಕಳುಹಿಸಲಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment