ಶಕುನ ಶಾಸ್ತ್ರಗಳ ಪ್ರಕಾರ, ಹಲ್ಲಿ ಕೇವಲ ಗೋಡೆಯ ಮೇಲೆ ಓಡಾಡುವ ಜೀವಿಯಷ್ಟೇ ಅಲ್ಲ; ಅದು ಕೆಲವೊಮ್ಮೆ ನಮ್ಮ ಜೀವನದಲ್ಲಿ ಸಂಭವಿಸಬಹುದಾದ ಶುಭ-ಅಶುಭ ಘಟನೆಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ.ಅದರ ಬಣ್ಣ, ಮತ್ತು ಅದು ಮನೆಯಲ್ಲಿ ಕಾಣಿಸಿಕೊಳ್ಳುವ ಸ್ಥಳ ಎಲ್ಲವೂ ವಿಶೇಷ ಅರ್ಥವನ್ನು ಹೊಂದಿವೆ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.
ಮನೆಯಲ್ಲಿ, ವಿಶೇಷವಾಗಿ ಪೂಜಾ ಕೊಠಡಿಯ ಸಮೀಪ ಕಪ್ಪು ಬಣ್ಣದ ಹಲ್ಲಿ ಕಾಣಿಸಿಕೊಂಡರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಒಟ್ಟಿಗೆ ಎರಡು ಹಲ್ಲಿಗಳು ಕಾಣಿಸುವುದು ಸಾಮಾನ್ಯವಾದರೂ, ಅವು ಜಗಳವಾಡುತ್ತಿರುವುದು ಶಕುನ ಶಾಸ್ತ್ರದ ಪ್ರಕಾರ ಒಳ್ಳೆಯ ಲಕ್ಷಣವಲ್ಲ.ಪೂಜಾ ಕೊಠಡಿಯಲ್ಲಿ ಅಥವಾ ದೇವಸ್ಥಾನದಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದನ್ನು ಕೆಲವರು ಶುಭವೆಂದು ಪರಿಗಣಿಸುತ್ತಾರೆ

ಹಲ್ಲಿಗಳು ಪದೇ ಪದೇ ನೆಲಕ್ಕೆ ಬೀಳುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಬಲ ಭುಜದ ಮೇಲೆ ಹಲ್ಲಿ ಬೀಳುವುದು ಶುಭವೆಂದು ಹೇಳಲಾಗುತ್ತದೆ. ಆದರೆ ಶುಕ್ರವಾರದಂದು ಹಲ್ಲಿ ಕಾಣಿಸಿಕೊಂಡರೆ, ಅದನ್ನು ಲಕ್ಷ್ಮೀ ದೇವಿಯ ಕೃಪೆಯ ಸಂಕೇತವೆಂದು ನಂಬಲಾಗುತ್ತದೆ.
ಇವುಗಳೆಲ್ಲವೂ ಪರಂಪರೆ ಮತ್ತು ನಂಬಿಕೆಗಳ ಭಾಗವಾಗಿವೆ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು. ವೈಜ್ಞಾನಿಕವಾಗಿ ನೋಡಿದರೆ, ಹಲ್ಲಿಗಳು ಪ್ರಕೃತಿಯ ಒಂದು ಭಾಗವಾಗಿದ್ದು ಕೀಟಗಳನ್ನು ತಿನ್ನುವ ಮೂಲಕ ಮನೆಗೆ ಸಹಾಯಕವಾಗುತ್ತವೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













