Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿಜವಾಯಿತೇ ಬಬಲಾದಿ ಕಾಲಜ್ಞಾನ: ಮುಂದೇನಾಗುವುದು ಅನಾಹುತ ?

---Advertisement---

ಉತ್ತರ ಕರ್ನಾಟಕದ ಅತಿ ಹೆಚ್ಚು ನಂಬಿಕಸ್ತ ಕಾಲಜ್ಞಾನ ಬಬಲಾದಿ ಶ್ರೀ ಸದಾಶಿವ ಮುತ್ಯಾರ ಮಠದ ಭವಿಷ್ಯವಾಣಿ‌. ಇತ್ತೀಚೆಗೆ ನಡೆದ ಮಠದ ಜಾತ್ರೆಯಲ್ಲಿ ನುಡಿಯಲಾಗಿದ್ದ ಅಶುಭ ಮುನ್ಸೂಚನೆಗಳು ಈಗ ನಿಜವಾಗುತ್ತಿದೆ.

ಬಬಲಾದಿ ಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯ ಅಮಾವಾಸ್ಯೆಯ ನಂತರ ನಡೆಯುವ ಜಾತ್ರೆಯಲ್ಲಿ ಓಲೆಗರಿಯ ಕಾಲಜ್ಞಾನವನ್ನು ಓದಲಾಗುತ್ತದೆ. ಈ ವರ್ಷದ ಕಾಲಜ್ಞಾನವು ಶುಭಕ್ಕಿಂತ ಅಶುಭ ಫಲಗಳನ್ನೇ ಹೆಚ್ಚು ಸೂಚಿಸಿತ್ತು.ಗಡಿಯಲ್ಲಿ ಭೀತಿ ಎದುರಾಗಲಿದೆ, ಯುದ್ಧದ ಕಾರ್ಮೋಡ ಕವಿಯಲಿದೆ” ಎಂದು ಬಬಲಾದಿ ಮುತ್ಯಾ ಮೊದಲೇ ಭವಿಷ್ಯ ಹೇಳಿದ್ದರು.ಈಗ ಈ ಭವಿಷ್ಯ ಅಮೇರಿಕಾ-ಇರಾನ್-ಇಸ್ರೇಲ್ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದೆ.ಯುದ್ಧದ ಜೊತೆಗೆ “ಮಳೆ-ಬೆಳೆ ವ್ಯತ್ಯಯ, ಪ್ರವಾಹ ಮತ್ತು ಗಡಿಯಲ್ಲಿ ಆತಂಕದ ಛಾಯೆ” ಇರಲಿದೆ ಎಂದು ಕಾಲಜ್ಞಾನ ಹೇಳಲಾಗಿದೆ‌.

ಬಬಲಾದಿ ಮಠದ ಇತಿಹಾಸ ನೋಡಿದರೆ, ಇದು 400-500 ವರ್ಷಗಳ ಹಳೆಯದು. ಶ್ರೀ ಸಿದ್ದೇಶ್ವರ ಸ್ವಾಮಿಗಳ ಕಾಲಜ್ಞಾನ ಪರಂಪರೆಯನ್ನು ಮುಂದುವರಿಸುತ್ತದೆ. ಮಠದ ಪೀಠಾಧಿಪತಿಗಳಾದ ಸಿದ್ದು ಹೊಳಿಮಠ ಮುತ್ಯಾ ಅಥವಾ ಸದಾಶಿವ ಮುತ್ಯಾ ಅವರು ಪ್ರತಿ ವರ್ಷ ಭವಿಷ್ಯ ನುಡಿಯುತ್ತಾರೆ. ಶಿವರಾತ್ರಿ ಜಾತ್ರೆಯಲ್ಲಿ ನುಡಿದ ಈ ಭವಿಷ್ಯಗಳು ಹಲವು ಮುಖ್ಯ ಅಂಶಗಳನ್ನು ಹೊಂದಿವೆ. ಮೊದಲನೆಯದಾಗಿ, “ದೊಡ್ಡ ದುಃಖದ ಸುದ್ದಿ ಬಂದೀತು” ಎಂದು ಹೇಳಲಾಗಿದೆ. ಇದು ಮಹಾನ್ ವ್ಯಕ್ತಿಯ ಸಾವು ಅಥವಾ ದೊಡ್ಡ ದುರಂತಕ್ಕೆ ಸಂಬಂಧಿಸಿದೆ ಎಂದು ತಜ್ಞರು ಹೇಳುತ್ತಾರೆ. ಎರಡನೆಯದು, “ಗಡಿಯಲ್ಲಿ ಭೀತಿ, ಯುದ್ಧದ ಕಾರ್ಮೋಡ” – ದೇಶದ ಸೀಮೆಗಳಲ್ಲಿ ಚಿಂತೆಯ ವಾತಾವರಣ ಮತ್ತು ಯುದ್ಧದ ಅಪಾಯ ಹೆಚ್ಚಾಗುವುದು ಎಂದು ಭವಿಷ್ಯ. ಮೂರನೆಯದು, ಬೆಂಕಿ ಅವಘಡಗಳು ಹೆಚ್ಚಾಗುವುದು, ಪ್ರಜೆಗಳಲ್ಲಿ ಕಲಹ, ಅಗ್ನಿ ವಿಕೋಪಗಳು ಎನ್ನಲಾಗುತ್ತಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now