ಸುದ್ದಿಒನ್, ಚಿತ್ರದುರ್ಗ, ಜುಲೈ. 19 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಬೀಜದುಂಡೆ” ತಯಾರಿಕಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಚಿತ್ರದುರ್ಗ ಜಿಲ್ಲೆಯ ಪರಿಸರ ವಾದಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಸಿದ್ದರಾಜು ಜೋಗಿ ಅವರ ಉಪಸ್ಥಿತಿಯಲ್ಲಿ ಶಾಲೆಯ 3, 4 ಮತ್ತು 5ನೇ ತಗರತಿಯ ಸುಮಾರ 300 ವಿದ್ಯಾರ್ಥಿಗಳು ಭಾಗವಹಿಸಿ ಹುಣಸೆ, ಬೇವು, ಹೊಂಗೆ, ಸರ್ವೆ ಇತ್ಯಾದಿ ಮರಗಳ ಬೀಜಗಳನ್ನು ಹದ ಮಾಡಿದ ಮಣ್ಣನಲ್ಲಿಟ್ಟು ಬೀಜದ ಹುಂಡೆಗಳನ್ನು ತಯಾರಿಸಿದರು.

ನಂತರ ಪರಿಸರವಾದಿ ಸಿದ್ದರಾಜು ಜೋಗಿ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಐಶಾರಾಮಿ ಜೀವನಕ್ಕಾಗಿ ಎಗ್ಗಿಲ್ಲದಂತೆ ಅರಣ್ಯ ನಾಶ ಮಾಡುತ್ತಿದ್ದಾನೆ. ಇದೇ ರೀತಿ ಮುಂದುವರೆದಲ್ಲಿ ಮುಂದೊಂದು ದಿನ ಮನುಷ್ಯ ಇಂದು ಅಡುಗೆಗೆ ಸಿಲಿಂಡರ್ ಬಳಸುವಂತೆ, ಉಸಿರಾಟಕ್ಕಾಗಿ ಆಮ್ಲಜನಕದ ಸಿಲಿಂಡರ್‍ನ್ನು ಬ್ಯಾಗ್‍ನ ರೀತಿ ಹೊತ್ತು ತಿರುಗುವ ಕಾಲ ದೂರವಿಲ್ಲ. ಗಿಡಮರಗಳ ಕಟಾವಿನಿಂದ ಪರಿಸರದಲ್ಲಿ ಅಮ್ಲಜನಕದ ಕೊರತೆ ಉಂಟಾಗಿ ನಮ್ಮೆಲ್ಲರಿಗೂ ಜೀವಾನಿಲವಾದ ಅಮ್ಲಜನಕಕ್ಕೆ ಪರದಾಡುವಂತಾಗಿದೆ.
ಅಲ್ಲದೇ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಅಸಮತೋಲನ ಕಳೆದುಕೊಂಡು ಮನುಷ್ಯ ಜೀವಕಷ್ಟೇ ಅಲ್ಲದೇ ಸಕಲ ಜೀವರಾಶಿಗಳ ಪ್ರಾಣಕ್ಕೂ ಕುತ್ತುಂಟಾಗುತ್ತದೆ. ಅದ್ದರಿಂದ ನಮ್ಮಿಂದಾಗುತ್ತಿರುವ ಪರಿಸರ ಉಪಟಳವನ್ನು ನಾವಾಗಿಯೇ ಪರಿಹರಿಸಿಕೊಳ್ಳಬೇಕು. ಅದಕ್ಕೊಂದು ಸೂಕ್ತ ಮಾರ್ಗ ಬೀಜದುಂಡೆ ತಯಾರಿಸಿ ಬರಡು ಪ್ರದೇಶಗಳಲ್ಲಿ ಹರಡುವುದರಿಂದ ನೈಸರ್ಗಿಕ ಮಳೆಯಿಂದ ಚಿಗುರೊಡೆದು ಅರಣ್ಯ ಬೆಳೆಯಲು ಸಹಕಾರಿಯಾಗಲಿದೆ, ನೀವಿಂದು ತಯಾರಿಸಿದ ಬೀಜದುಂಡೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮರಗಳು ಬೆಳೆದರೆ ನಿಮ್ಮ ಇಂದಿನ ಶ್ರಮ ಸಾರ್ಥಕವಾಗುತ್ತದೆ ಎಂದರು.
ನಿಮ್ಮ ಹಾಗೂ ನಿಮ್ಮ ಪೋಷಕರ ಹುಟ್ಟು ಹಬ್ಬದಲ್ಲಿ ಅಥವಾ ವಾರ್ಷಿಕೋತ್ಸವಗಳಲ್ಲಿ ಕೇಕ್ ಕತ್ತರಿಸುವ ಬದಲು ನಾಲ್ಕಾರು ಗಿಡಗಳನ್ನು ನೆಟ್ಟು, ಪರಿಸರ ಜಾಗೃತಿ ಮೂಡಿಸುವುದು ತುಂಬ ಅರ್ಥಪೂರ್ಣವಾದ ಕೆಲಸ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಂ.ಪೃಥ್ವೀಶ, ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಐಸಿಎಸ್‍ಇ ವಿಭಾಗದ ಪ್ರಾಚಾರ್ಯರಾದ ಶ್ರೀ ಬಸವರಾಜಯ್ಯ ಪಿ, ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












