Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರತದ ತರ್ಕ ಶಾಸ್ತ್ರ ಎಲ್ಲಕ್ಕಿಂತ ಮಿಗಿಲಾದುದು : ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 9886295817

ಚಿತ್ರದುರ್ಗ,(ಜು.01) : ಭಾರತದ ತರ್ಕ ಶಾಸ್ತ್ರ ಎಲ್ಲಕ್ಕಿಂತ ಮಿಗಿಲಾದುದು, ವಿಜ್ಞಾನ, ಗಣಿತ ಸೇರಿದಂತೆ ಇತರೆ ಶಾಸ್ತ್ರಗಳಿಗೂ ಸಹಾ ತಳಹದಿಯಾಗಿದೆ ಎಂದು ಸಮೂಹ ಶಕ್ತಿ ಪ್ರಧಾನ ಪ್ರೇರಕರು, ಹಿರಿಯ ಪತ್ರಕರ್ತರಾದ ದೀಪಕ್ ತಿಮ್ಮಯ್ಯ ತಿಳಿಸಿದರು.

ನಗರದ ಆಮೃತ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಮೂಹ ಶಕ್ತಿ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ನಾಗರೀಕ ಜವಾಬ್ದಾರಿಗಳ ಎಂಬ ವಿಷಯದ ಬಗ್ಗೆ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ತಾಯಿಯಾದವಳು ತನ್ನ ಆತ್ಮತೃಪತಿಯಿಂದ ಮಗುವಿಗೆ ಹಾಲನ್ನು ನೀಡಬೇಕು, ಆಗ ಮಾತ್ರ ನೈಜವಾದ ತಾಯಿಯಾಗಲು ಸಾಧ್ಯವಿದೆ. ಇದು ಬಿಟ್ಟು ದೊಡ್ಡವರಾದ ಮೇಲೆ ನನ್ನನ್ನು ನೋಡಿಕೊಳ್ಳುತ್ತಾರೆ ಎಂಬ ಭಾವನೆಯಿಂದ ಹಾಲನ್ನು ನೀಡಬಾರದು, ನಾನು ಆಡಿದ ಮಾತಿನಿಂದ ಹತ್ತು ಜನ ಅಲ್ಲ ಒಬ್ಬ ವ್ಯಕ್ತಿ ಬದಲಾದರೂ ಸಹಾ ಸಾರ್ಥಕವಾಗುತ್ತದೆ. ಇಲ್ಲಿ ಸಂಖ್ಯೆ ಮುಖ್ಯ ಅಲ್ಲ ಸತ್ಯ ಮುಖ್ಯವಾಗುತ್ತದೆ. ಸಾಧನೆಗೆ ಉಪಕರಣಗಳು ಮುಖ್ಯವಲ್ಲ ನಮ್ಮಲ್ಲಿರುವ ಶ್ರದ್ದೆ ಮುಖ್ಯವಾಗುತ್ತದೆ ಎಂದರು.

ಭಾರತದಲ್ಲಿ ತರ್ಕ ಎನ್ನುವುದು ಬಹು ಮೂಲವಾಗಿದೆ, ಅದರೆ ಇಲ್ಲಿ ಯಾವುದೂ ಸಹಾ ಪರಿಪೂರ್ಣವಾಗಿಲ್ಲ, ಆದರೆ ಪರಿಪೂರ್ಣದ ಕಡೆಗೆ ಹೋಗುತ್ತಿದೆ. ದೇವರು ಸಹಾ ಪರಿಪೂರ್ಣ ಅಲ್ಲ ಅವರು ಸಹಾ ಪರಿಪೂರ್ಣಕ್ಕೆ ಹತ್ತಿರವಾಗುತ್ತಿದ್ದಾರೆ. ಇಂದಿನ ತಂತ್ರಜ್ಞಾನದಿಂದ ಎಲ್ಲವು ಸಹಾ ಹತ್ತಿರವಾಗುತ್ತಿದೆ ಇಂದು ಸಾಧ್ಯವಿಲ್ಲ ಎನ್ನುವುದು ಮುಂದಿನ ದಿನಮಾನದಲ್ಲಿ ಸಾಧ್ಯವಾಗುತ್ತಿದೆ. ಹುಟ್ಟಿದ ವ್ಯಕ್ತಿ ಸಾಯಲೇ ಬೇಕಿದೆ ಆದರೆ ಹುಟ್ಟು ಮತ್ತು ಸಾವಿನ ಮಧ್ಯದಲ್ಲಿ ಏನಾದರೂ ಸಾಧನೆ ಮಾಡಿ ಸಾಯಬೇಕಿದೆ. ಹಾಗೇಯೇ ಸತ್ತರೇ ಮಾನವನಾಗಿ ಹುಟ್ಟಿದ್ದಕೂ ಸಹಾ ಅರ್ಥ ಇರುವುದಿಲ್ಲ ಎಂದು ದೀಪಕ್ ತಿಮ್ಮಯ್ಯ ತಿಳಿಸಿದರು.

ಇಂದಿನ  ದಿನಮಾನದಲ್ಲಿ ಎಲ್ಲದರ ದಿನಾಚರಣೆಯನ್ನು ಮಾಡಲಾಗುತ್ತಿದೆ, ತಂದೆ, ತಾಯಿ,ಅಕ್ಕ, ತಂಗಿ ವೈದೈರು ಪತ್ರಕರ್ತರು ಸೇರಿದಂತೆ ವಿವಿಧ ರೀತಿಯ ದಿನಾಚರಣೆಗಳು ನಡೆಯುತ್ತಿವೆ ಒಮ್ಮೆ ಇವು ಯಾಕಾದರೂ ಬಂದವೂ ಎನ್ನುವಂತಾಗುತ್ತದೆ ಆದರೆ ಇವುಗಳನ್ನು ಆಚರಣೆ ಮಾಡುವುದರಿಂದ ಅಂದಿನ ದಿನವಾದರೂ ಸಹಾ ಮಕ್ಕಳು ತಮ್ಮ ಪೋಷಕರನ್ನು ಹುಡುಕಿಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ಎಂದ ಅವರು, ಇಂದಿನ  ಚುನಾವಣೆಗಳು ಹಣ ಇಲ್ಲದೆ ನಡೆಯುವುದಿಲ್ಲ, ಹಣವನ್ನು ಹಾಕಿ ಗೆದ್ದವರು ಗೆದ್ದ ಮೇಲೆ ಅದರಿಂದ ಹಣವನ್ನು ತೆಗೆಯುವುದಕ್ಕೆ ಮುಂದಾಗುತ್ತಾರೆ ಜನಪರವಾದ ಕೆಲಸವನ್ನು ಮಾಡುವುದಿಲ್ಲ, ಪ್ರಜಾಪ್ರಭುತ್ವವನ್ನು ಯಾರೂ ಸಹಾ ಸರಿಯಾದ ರೀತಿಯಲ್ಲಿ ಅರ್ಥ್ಯಸಿಕೊಂಡಿಲ್ಲ, ಎಲ್ಲರು ತಮಗೆ ಬೇಕಾದ ರೀತಿಯಲ್ಲಿ ಹೇಳುತ್ತಾರೆ. ಇದರ ಬಗ್ಗೆ ರಾಜಕಾರಣಿಗಳು, ಸಾಮಾನ್ಯ ಜನರಿಗೂ ಸಹಾ ಸರಿಯಾದ ರೀತಿಯಲ್ಲಿ ಗೋತ್ತಿಲ್ಲ, ಜನರ ಹಕ್ಕುಗಳನ್ನು ಕಾಪಾಡುವುದು ಸರ್ಕಾರದ ಪರವೋಚ್ಚವಾದ ಕರ್ತವ್ಯವಾಗಿದೆ ಎಂದರು.

ಕಾಯಕ ನಾಡದ ನಮ್ಮ ರಾಜ್ಯದಲ್ಲಿ ಇಂದಿನ ದಿನಮಾನದಲ್ಲಿ ಸರ್ಕಾರದ ಸೌಲಭ್ಯವನ್ನು ನೋಡಿ ಯಾಕೆ ಕಾಯಕವನ್ನು ಮಾಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಇಂದಿನ  ಕಾಲಕೆಕ ಎಲ್ಲರು ಸಃಆ ಹಣಕ್ಕೆ ಹೆಚ್ಚಿನ ಪ್ರಾತಿನೀಧ್ಯವನ್ನು ನೀಡುತ್ತಾರೆ. ಗುಣಕ್ಕೆ ಇಲ್ಲಿ ಪ್ರಾತಿನೀದ್ಯ ಸಿಗುವುದಿಲ್ಲ, ಪೋಲಿಸ್ ಠಾಣೆಗಳಲ್ಲಿ ನ್ಯಾಯ ಸಿಗುತ್ತಿಲ್ಲ, ಉತ್ತಮವಾದ ರಸ್ತೆಗಳು ಇಲ್ಲ, ಸರಿಯಾದ ರೀತಿಯಲ್ಲಿ ಚರಂಡಿಗಳು ನಿರ್ಮಾಣವಾಗುತ್ತಿಲ್ಲ, ನಾಗರೀಕತೆಯ ಬಗ್ಗೆ ಯಾರು ಸಹಾ ಮಾತನಡುತ್ತಿಲ್ಲ ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅವರನ್ನು ನೋಡುವ ರೀತಿಯೂ ಸಹಾ ಬದಲಾಗುತ್ತಿದೆ. ಬಡವರು ಮಾತ್ರ ಕಾನೂನನ್ನು ಪಾಲಿಸುತ್ತಾರೆ ಆದೇ ಶ್ರೀಮಂತರು ಅದನ್ನು ಧಿಕ್ಕರಿಸುತ್ತಿದ್ದಾರೆ. ಭಾತರದ ಸಂವಿಧಾನ ಒಳ್ಳೇಯದು ಇದನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕಿದೆ ನಾವು ಸಂವಿಧಾನವನ್ನು ರಕ್ಷಣೆ ಮಾಡಿದರೆ ಅದು ನಮನ್ನು ರಕ್ಷಿಸುತ್ತದೆ ಎಂದು ದೀಪಕ್ ತಿಮ್ಮಯ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮೂಹ ಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶೀ ರವಿ ಸೆಲ್ಕೋ ಸೋಲಾರ ಸಂಸ್ಥೆಯ ಏರಿಯಾ ಮ್ಯಾನೇಜರ್ ಮಂಜುನಾಥ್ ಭಾಗವತ್ ವಿರೇಶ್ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಫೈನಲಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿಯಾಯ್ತು RCB

ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್‌

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

error: Content is protected !!