Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಾಸ್ತವ ಸ್ಥಿತಿ ತಿಳಿಯಲು ಮಣಿಪುರಕ್ಕೆ ಹೊರಟ INDIA ಕೂಟ

---Advertisement---

 

 

ನವದೆಹಲಿ: ಮಣಿಪುರದ ಘಟನೆ ನಾಚಿಕೆಗೇಡಿನ ಘಟನೆ. ಈ ಘಟನೆ ಸಂಬಂಧ ಪ್ರಧಾನಿ ಮೋದಿ ಸಂಸತ್ ಕಲಾಪದಲ್ಲಿ ಮಾತನಾಡಬೇಕು ಎಂದು ವಿಕ್ಷಗಳು ಪಟ್ಟು ಹಿಡಿದಿವೆ. ಆದ್ರೆ ಅದು ಇನ್ನು ಸಾಧ್ಯವಾಗಿಲ್ಲ. ಅದರ ಜೊತೆಗೆ ಮಣಿಪುರದಲ್ಲಿ ನಡೆದ ಘಟನೆ ಏನು ಎಂಬುದನ್ನು ತಿಳಿಯಲು, ಅಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯಲು, ಇಂದು ಮಣಿಪುರಕ್ಕೆ ಇಂಡಿಯಾ ಟೀಂ ಭೇಟಿ ನೀಡಲು ಹೊರಟಿದೆ.

16 ರಾಜಕೀಯ ಪಕ್ಷಗಳ 20 ನಾಯಕರು ಮಣಿಪುರಕ್ಕೆ ಹೊರಟಿದ್ದಾರೆ. ಅಧೀರ್ ರಂಜನ್ ಚೌಧರಿ (ಕಾಂಗ್ರೆಸ್​​), ಗೌರವ್ ಗೊಗಯಿ (ಕಾಂಗ್ರೆಸ್​), ರಾಜೀವ್ ರಂಜನ್ (ಜೆಡಿಯು), ಸುಸ್ಮಿತಾ ದೇವ್ (ಟಿಎಂಸಿ), ಕಣಿಮೋಳಿ ಕರುಣಾನಿಧಿ (ಡಿಎಂಕೆ), ಸಂದೋಶ್ ಕುಮಾರ್ (ಸಿಪಿಐ), ಎಎ ರಹೀಮ್ (ಸಿಪಿಐ), ಮನೋಜ್ ಕುಮಾರ್ ಝಾ (ಆರ್​​ಜೆಡಿ), ಜಾವೆದ್ ಅಲಿ ಖಾನ್ (ಎಸ್​​ಪಿ), ಮಾಹುವಾ ಮಾಜಿ (ಜೆಎಂಎಂ), ಪಿಪಿ ಮೊಹಮ್ಮದ್ ಫಾಜಿಲ್ (ಎನ್​ಸಿಪಿ), ಅನಿಲ್ ಪ್ರಸಾದ್​ ಹೆಗಡೆ (ಜೆಡಿಯು), ಇಟಿ ಮೊಹ್ಮದ್ ಬಶೀರ್​ (ಐಯುಎಂಎಲ್), ಎನ್​ಕೆ ಪ್ರೇಮಚಂದ್ರನ್ (ಆರ್​​ಎಸ್​ಪಿ), ಸುಶೀಲ್ ಗುಪ್ತ (ಆಮ್​​ ಆದ್ಮಿ ಪಾರ್ಟಿ), ಅರವಿಂದ್ ಸಾವಂತ್ (ಶಿವ ಸೇನಾ), ಡಿ.ರವಿ ಕುಮಾರ್ (ವಿಸಿಕೆ), ಥಿರು ಥೋಲ್ ಥಿರುಮವಲವನ್ (ವಿಸಿಕೆ), ಜಯಂತ್ ಸಿಂಗ್ (ಆರ್​ಎಲ್​ಡಿ), ಪೌಲೋ ದೇವಿ (ಕಾಂಗ್ರೆಸ್​) ಭೇಟಿ ನೀಡಿದ್ದಾರೆ.

ಮಣಿಪುರದ ಕಣಿವೆ, ಗುಡ್ಡಗಾಡು ಪ್ರದೇಶಗಳಿಗೆ ಇವರು ಭೇಟಿ ನೀಡಿ, ಅಲ್ಲಿನ ವಾಸ್ತವ ತಿಳಿಯಲಿದ್ದಾರೆ. ಇಂದು ಮತ್ತು ನಾಳೆ ಮುಂಗಾರು ಅಧಿವೇಶನಕ್ಕೆ ರಜೆ ಇರುವ ಕಾರಣ ಮಣಿಪುರಕ್ಕೆ ಭೇಟಿ ನೀಡಿ, ಅಲ್ಲಿನ ವಾಸ್ತವ ಅರಿತುಕೊಳ್ಳಲಿದ್ದಾರೆ. ಹಿಂಸಾಚಾರ ಸಂತ್ರಸ್ತರಿರುವ ಕ್ಯಾಂಪ್ ಗಳಿಗೆ ಭೇಟಿ, ಮೈತೇಯಿ, ಕುಕಿ ಸಮುದಾಯದ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment