ಸಾಮಾನ್ಯವಾಗಿ ಆಲೂಗಡ್ಡೆಯನ್ನು ಹೆಚ್ಚು ದಿನ ಒಂದೇ ಕಡೆ ಇಟ್ಟರೆ ಮೊಳಕೆಯೊಡೆಯುವುದು ಸಹಜ. ಕೆಲವೊಮ್ಮೆ ಗೃಹಿಣಿಯರು ಮೊಳಕೆ ತಾನೇ ಎಂದು ಮೊಳಕೆಯನ್ನು ಕಿತ್ತಾಕಿ ಬಳಿಕ ಅದರಲ್ಲಿ ಅಡುಗೆ ಮಾಡುತ್ತಾರೆ. ಆದರೆ ಇದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂಬುದು ಮಾತ್ರ ಊಹೆಗೂ ನಿಲುಕದ್ದಾಗಿದೆ. ಹಾಗಾದ್ರೆ ಮೊಳಕೆಯೊಡೆದ ಹಾಲುಗಡ್ಡೆ ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಬರಲಿವೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
* ಮೊಳಕೆಯೊಡೆದ ಹಾಲುಗಡ್ಡೆ ವಿಷಕಾರಿ ಹಾಗೂ ಫುಡ್ ಪಾಯಿಸನ್ ಗೆ ಕಾರಣವಾಗಬಹುದು. ಹೀಗಾಗಿ ಆರೋಗ್ಯದ ಮೇಲೆ ಬೇರೆ ರೀತಿಯಾದಂತ ಪರಿಣಾಮವನ್ನೇ ಬೀರುತ್ತವೆ.
* ಆಲೂಗಡ್ಡೆಗಳು ಸೋಲನೈನ್ ಮತ್ತು ಚಾಕನೈನ್ ಎಂಬ ನೈಸರ್ಗಿಕ ಅಂಶಗಳ ಮೂಲವಾಗಿರುತ್ತವೆ. ಎರಡು ಗ್ಲೈಕೋಲ್ಕಲಾಯ್ಡ್ ಸಂಯುಕ್ತಗಳು ನೈಸರ್ಗಿಕವಾಗಿ ಬದನೆಕಾಯಿ ಹಾಗೂ ಟಮೋಟೋ ಸೇರಿದಂತೆ ಇತರ ಆಹಾರಗಳಲ್ಲಿ ಕಂಡು ಬರುತ್ತದೆ. ಆದರೆ ಮೊಳಕೆ ಬಂದ ಆಲೂಗಡ್ಡೆಯಲ್ಲಿ ಈ ಅಂಶಗಳು ಕಡಿಮೆಯಾಗಿರುತ್ತವೆ.
* ಆಲೂಗಡ್ಡೆ ಮೊಳಕೆಯೊಡೆದಾಗ ಅದರಲ್ಲಿ ಸೋಲನೈನ್ ಉತ್ಪತ್ತಿಯಾಗಿರುತ್ತದೆ. ಅದು ನಮ್ಮ ದೇಹಕ್ಕೆ ಸೇರಿದಾಗ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ.
* ಆ ರೀತಿಯ ಆಲೂಗಡ್ಡೆ ತಿನ್ನುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದು ಹೃದಯಕ್ಕೂ ಸಮಸ್ಯೆ, ತಲೆ ಸುತ್ತಿ ಬೀಳುತ್ತಾರೆ. ರಕ್ತದೊತ್ತಡ ಸರಿಯಾಗಿದ್ದರೆ ಮಾತ್ರ ಹೃದಯವೂ ಆರೋಗ್ಯದಿಂದ ಕೆಲಸ ಮಾಡಬಹುದು.
* ಇದ್ದಕ್ಕಿದ್ದ ಹಾಗೇ ಅಧಿಕವಾದ ಜ್ವರವೂ ಕಾಣಿಸುತ್ತದೆ.
* ದೇಹದಲ್ಲಿ ವಿಷಕಾರಿ ಅಂಶ ಅಡಗಿದ್ದರೆ ತಲೆನೋವು ಹೆಚ್ಚಾಗುತ್ತದೆ.
* ತಿಂದದ್ದೆಲ್ಲ ವಾಂತಿಯಾಗುವುದಕ್ಕೆ ಶುರುವಾಗುತ್ತದೆ.
* ಇದರಿಂದ ಅತಿಸಾರ ಬೇಧಿಯೂ ಶುರುವಾಗುತ್ತದೆ.
* ಏನಾದರೂ ಮಾಡಲು ಹೋದರೆ ಗೊಂದಲದ ಆಲೋಚನೆಗಳು ತಲೆಗೆ ಬರುತ್ತವೆ.
* ವಿಷ ಹೆಚ್ಚಾದರೆ ಸಾವು ಕೂಡ ಸಂಭವಿಸಬಹುದು. ಹೀಗಾಗಿ ಮೊಳಕೆಯೊಡೆದ ಆಲೂಗಡ್ಡೆಯನ್ನು ತಿನ್ನುವುದಕ್ಕಿಂತ ಎಸೆಯುವುದು ಒಳ್ಳೆಯದು.