Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾವೂ ಬೆಂಗಳೂರು ಬಿಟ್ಟರೆ ಖಾಲಿ.. ಖಾಲಿ.. ನಮ್ಮ ಬಗ್ಗೆ ಯೋಚನೆ ಮಾಡಿ ಮಾತಾಡಿ : ಕನ್ನಡಿಗರನ್ನು ಕೆರಳಿಸಿದ ಹೊರ ರಾಜ್ಯದ ಯುವತಿ..!

---Advertisement---

ಬೆಂಗಳೂರು: ಕರ್ನಾಟಕಕ್ಕೆ ಬಂದು ತಮ್ಮದೇ ಪಾರುಪತ್ಯ ಸಾಧಿಸುವ ಹೊರರಾಜ್ಯದವರು ಆಗಾಗ ನಾಲಿಗೆ ಹರಿ ಬಿಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಆಟೋ ಡ್ರೈವರ್ ವಿಚಾರದಲ್ಲಿ ಒಂದು ಘಟನೆ ನಡೆದಿದೆ. ಓಲಾ ಬುಕ್ಕಿಂಗ್ ಮಾಡಿ, ಕ್ಯಾನ್ಸಲ್ ಮಾಡಿದ ಕಾರಣಕ್ಕೆ ಹುಡುಗಿ ಜೊತೆಗೆ ಆಟೋ ಡ್ರೈವರ್ ಜಗಳ ಮಾಡಿದ್ದ ಎಂಬ ವಿಚಾರ. ಇದಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮಕ್ಕೂ ಒತ್ತಾಯಿಸಿದರು. ಬೆಂಗಳೂರು ಪೊಲೀಸರು ಆಕ್ಷನ್ ತೆಗೆದುಕೊಂಡಿದ್ದಾರೆ. ಬಳಿಕ ಡ್ರೈವರ್ ಕೂಡ ನಾನು ಏನು ಮಾಡಿಲ್ಲ ಎಂಬ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. ಆದರೆ ಈಗ ಇದೇ ವಿಚಾರವನ್ನು ಹೊರರಾಜ್ಯದ ಯುವತಿಯರು ನಾಲಿಗೆ ಹರಿಬಿಡುತ್ತಿದ್ದಾರೆ.

ಉತ್ತರ ಭಾರತದ ಯುವತಿಯೊಬ್ಬಳು ಈ ವಿಚಾರ ಸಂಬಂಧ ಈಗಾಗಲೇ ನಾಲಿಗೆ ಹರಿಬಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೊಬ್ಬ ಹೊರ ರಾಜ್ಯದ ಯುವತಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆ ಯುವತಿಯ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಉತ್ತರ ಭಾರತೀಯ ಮೂಲದ ಯುವತಿ ಸುಗಂಧ ಶರ್ಮಾ ಎಂಬಾಕೆ ರಾಜ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.

https://www.instagram.com/reel/DAGSldPS4pj/?igsh=MWhrcTZkcW9nYXh3Ng==

ಉತ್ತರ ಭಾರತದವರಾದ ನಾವೂ ಬೆಂಗಳೂರನ್ನು ಬಿಟ್ಟು ಹೋದ್ರೆ ನಿಮ್ಮ ಸಿಟಿ ಫುಲ್ ಖಾಲಿ ಆಗುತ್ತದೆ. ಇದಕ್ಕೂ ಮೊದಲು ಬೆಂಗಳೂರಿನ ಪಿಜಿಗಳು ಫುಲ್ ಖಾಲಿ ಆಗುತ್ತವೆ. ಕೋರಮಂಗಲ ಕ್ಲಬ್ ಗಳು ಖಾಲಿಯಾಗುತ್ತವೆ ಕಣ್ರೋ. ಕ್ಲಬ್ ಗಳಲ್ಲಿ ಡ್ಯಾನ್ಸ್ ಮಾಡಲು ಹುಡುಗಿಯರೇ ಇರುವುದಿಲ್ಲ. ಯೋಚನೆ ಮಾಡಿ ನಮ್ಮ ಬಗ್ಗೆ ಮಾತನಾಡಿ ಎಂದು ಹೇಳಿರುವ ವಿಡಿಯೋಗೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಈ ಯುವತಿಯ ವಿರುದ್ಧ ಕನ್ನಡದ ನಟ-ನಟಿಯರು ಕೆಂಡಕಾರಿದ್ದು, ಮೊದಲು ಆ ಯುವತಿಗೆ ರಾಜ್ಯದಿಂದ ಹೊರಗೆ ಹೋಗಲು ಹೇಳಿ ಎನ್ನುವ ಮಾತು ಶುರುವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...