ಟವೆಲ್ ಸರಿಯಾಗಿ ವಾಶ್ ಮಾಡದೆ ಇದ್ರೆ ಅದ್ರಿಂದಾನೇ ಬರುತ್ತೆ ಹಲವು ಕಾಯಿಲೆ..!

1 Min Read

ಪ್ರತಿನಿತ್ಯ ಸ್ನಾನ ಮಾಡಿದಾಗ ಮೈ ಹೊರೆಸಲು ಟವೆಲ್ ಬಳಸುತ್ತೇವೆ. ಒಂದೇ ಟವೆಲ್ ಅನ್ನು ವಾರಗಟ್ಟಲೇ ಬಳಕೆ ಮಾಡುತ್ತೇವೆ. ಕೆಲವೊಂದು ಮನೆಯಲ್ಲಿ ಒಂದೇ ಟವೆಲ್ ಅನ್ನೇ ಎಲ್ಲರೂ ಬಳಸುತ್ತಾರೆ. ಆದರೆ ಇದರಿಂದಾನೇ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಯಾಕಂದ್ರೆ ತೇವಾಂಶದ ಟವೆಲ್ ನಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ.

* ಟವೆಲ್ ಬಳಸಿದ ನಂತರ ಸ್ವಚ್ಛ ಮಾಡಿ. ಒಂದು ವೇಳೆ ತೊಳೆಯಲು ಆಗದೆ ಹೋದಲ್ಲಿ ಬಿಸಿಲಿನಲ್ಲಿ ಚೆಮ್ಮಾಗಿ ಒಣಗಿಸಿ. ಒದ್ದೆ ಬಟ್ಟೆಯನ್ನು ಹಾಗೇ ಇಟ್ಟರೆ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವುದರ ಜೊತೆಗೆ ಫಂಗಸ್ ಆಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.

* ಟವೆಲ್ ಸರಿಯಾದ ಕ್ರಮದಲ್ಲಿ ಒಣಗಿಸದೆ ಇದ್ದಲ್ಲಿ ಎಸ್ಟೀಮಾ ಅಥವಾ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಿಮ್ಮ ಟವೆಲ್ ಅನ್ನಿ ಬೇರೆಯವರು ಬಳಸಲು ಬಿಡಬೇಡಿ.

* ಮುಖ್ಯವಾಗಿ ಮೊಡವೆ ಸಮಸ್ಯೆಗಳು ಹೆಚ್ಚಾಗುತ್ತವೆ. ಟವ್ ಸ್ವಚ್ಛತೆ ಕಾಪಾಡದೆ ಹೋದಲ್ಲಿ ಮೊಡವೆಗಳು ಉಲ್ಬಣವಾಗುತ್ತವೆ. ಹೀಗಾಗಿ ಸೌಂದರ್ಯ ಕಾಪಾಡುವುದಕ್ಕೂ ಟವೆಲ್ ಸ್ವಚ್ಛವಾಗಿರಲಿ.

* ಮತ್ತೊಂದು ಬಹಳ ಮುಖ್ಯವಾದ ವಿಚಾರ ಅಂದ್ರೆ ಸ್ನಾನ ಮಾಡುವುದಕ್ಕೂ, ಮುಖ ಹೊರೆಸುವುದಕ್ಕೂ, ತಲೆ ಹೊರೆಸಿಕೊಳ್ಳುವುದಕ್ಕೂ ಒಂದೇ ಟವೆಲ್ ಬಳಸಬೇಡಿ.

* ಸಾಧ್ಯವಾದಷ್ಟು ನೀವೂ ಬಳಸುವ ಟವೆಲ್ ಅನ್ನು ಬಿಸಿ ನೀರಿನಲ್ಲಿ ತೊಳೆಯಿರಿ. ಹಾಗೇ ಬಿಸಿಲಿನಲ್ಲಿ ಒಣಗಿಸಿ. ಹೀಗೆ ಮಾಡುವುದರಿಂದ ಕಾಯಿಲೆಯಿಂದಾನೂ ದೂರ ಇರಬಹುದು. ತ್ವಜೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಒಂದೇ ಮನೆಯಲ್ಲಿದ್ದೀವಿ ಅಂತ ಮೇಲೆ ಹೇಳಿದ ತಪ್ಪುಗಳನ್ನು ಮಾಡಿದರೆ ಖಂಡಿತ ಸೌಂದರ್ಯಕ್ಕೂ ಸಮಸ್ಯೆಯಾಗುತ್ತದೆ. ಹಲವು ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಸಣ್ಣ ಸಣ್ಣ ವಿಚಾರಗಳು ಬಹಳ ಮುಖ್ಯವಾಗುತ್ತದೆ. ಎಚ್ಚರದಿಂದ ಇರಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *