ಬಿಗ್ ಬಾಸ್ ಸೀಸನ್ 10 ಶೋನ ವಿಜೇತರಾಗಿ ವಿನ್ ಆದ ಮೇಲೆ ಕಾರ್ತಿಕ್ ಸಾಕಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದರ ನಡುವೆ ಸಂಗೀತಾ ವಿಚಾರವೂ ಬಂದು ಹೋಗಿದೆ. ಈ ವೇಳೆ ನಾನಾಗಿ ನಾನು ಪರ್ಸನಲ್ ಆಗಿ ಹೋಗಿ ಭೇಟಿ ಮಾಡುವುದಿಲ್ಲ ಎಂದು ಕಾರ್ತಿಕ್ ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ ಶೋಗೆ ಆರಂಭದಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಸೇರಿದಂತೆ ಹಲವರು ಅಸಮರ್ಥರಾಗಿ ಹೋಗಿದ್ದರು. ದಿನಕಳೆದಂತೆ ಅಸಮರ್ಥರು ಸಿಕ್ಕಾಪಟ್ಟೆ ಒಗ್ಗಟ್ಟಾಗಿ ಇದ್ದರು. ಬಳಿಕ ಸಮರ್ಥರೆಂದೆ ಗುರುತಿಸಿಕೊಂಡರು. ಇದೀಗ ಅಸಮರ್ಥರೇ ರನ್ನರ್ ಹಾಗೂ ವಿನ್ನರ್ ಆಗಿದ್ದಾರೆ. ಪ್ರತಾಪ್ ರನ್ನರ್ ಅಪ್ ಆದರೆ ಕಾರ್ತಿಕ್ ವಿನ್ನರ್ ಆಗಿದ್ದಾರೆ.
ಬಿಗ್ ಬಾಸ್ ಮನೆಯೊಳಗಿದ್ದಾಗ ಕಾರ್ತಿಕ್ ಹಾಗೂ ಸಂಗೀತಾ ಬಹಳ ಬೇಗನೇ ಕ್ಲೋಸ್ ಆಗಿದ್ದರು. ನೋಡುಗರ ಕಣ್ಣಿಗೆ ಅದು ಪ್ರೀತಿಯಾಗಿಯೇ ಕಂಡರು ಕೂಡ, ಸಂಗೀತಾ ಆಗಾಗ ಫ್ರೆಂಡ್ಶಿಪ್ ಫ್ರೆಂಡ್ಶಿಪ್ ಅಂತ ಒತ್ತಿ ಒತ್ತಿ ಹೇಳುತ್ತಿದ್ದರು. ಆದರೆ ದಿನಕಳೆದಂತೆ ಕಾರ್ತಿಕ್ ಹಾಗೂ ಸಂಗೀತಾ ನಡುವಿನ ಬಾಂಧವ್ಯ ಕಡಿಮೆಯಾಗಿತ್ತು, ಕಿತ್ತಾಟವೇ ಜಾಸ್ತಿಯಾಗಿತ್ತು.

ಬಿಗ್ ಬಾಸ್ ಜರ್ನಿ ಇನ್ನೇನು ಮುಗಿಯಬೇಕು ಎಂದಾಗಲೂ ಅವರಿಬ್ಬರ ನಡುವಿನ ಬೇಸರ ಹಾಗೇ ಇತ್ತು. ಆದರೆ ಬಿಗ್ ಬಾಸ್ ನೀಡಿದ ಟಾಸ್ಕ್ ಗಳು ಅದನ್ನು ದೂರ ಮಾಡಿತ್ತು. ಅಂದು ಕ್ಷಮೆ ಕೇಳಿದ ಇಬ್ಬರು, ಪ್ರೀತಿಯ ಹಗ್ ಕೊಟ್ಟಿದ್ದರು. ಅವರಿಬ್ಬರ ಫ್ರೆಂಡ್ಶಿಪ್ ಬಿಗ್ ಬಾಸ್ ಮುಗಿದ ಮೇಲೂ ಮುಂದುವರೆಯುತ್ತಾ ಎಂಬುದೇ ಎಲ್ಲರ ಕುತೂಹಲದ ಪ್ರಶ್ನೆಯಾಗಿತ್ತು. ಅದಕ್ಕೂ ಉತ್ತರಿಸಿರುವ ಕಾರ್ತಿಕ್, ನಾನು ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅವರಿಗೆ ಹೇಳಿದ್ದೆ, ಏನೇ ದ್ವೇಷ ಇದ್ದರೂ ಇಲ್ಲಿಯೇ ಬಿಟ್ಟು ಹೋಗೋಣಾ ಅಂತ. ಸಿಕ್ಕಿದರೆ ಖಂಡಿತಾ ಮಾತನಾಡಿಸುತ್ತೇನೆ, ಆದರೆ ಹುಡುಕಿಕೊಂಡು ಹೋಗೋದಿಲ್ಲ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









