Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಸ್ಲಿಮರ ಜೊತೆಗೆ ನಿಲ್ಲುತ್ತೇನೆ ಅನ್ನೋದಲ್ಲ.. ಸಿದ್ದರಾಮಯ್ಯ ಮುಸ್ಲಿಮರೇ : ಈಶ್ವರಪ್ಪ

---Advertisement---

ಹುಬ್ಬಳ್ಳಿ: ಇತ್ತಿಚೆಗೆ ಮುಸ್ಲಿಮರ ಪರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌ ನೀಡಿದ್ದರು. ಆ ಹೇಳಿಕೆ ಮೇಲೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಇದೀಗ ಕೆ ಎಸ್ ಈಶ್ವರಪ್ಪ ಸಿದ್ದರಾಮಯ್ಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರ ಜೊತೆಗೆ ನಿಲ್ಲುತ್ತೇನೆ ಅನ್ನುವುದಿಲ್ಲ, ಸಿದ್ದರಾಮಯ್ಯ ಅವರು ಮುಸ್ಲಿಮರೆ ಎಂದಿದ್ದಾರೆ.

 

ಡಿ ಕೆ ಶಿವಕುಮಾರ್ ಅವರು ಮುಸಲ್ಮಾನರನ್ನು ಮೈ ಬ್ರದರ್ ಎನ್ನುತ್ತಾರೆ. ಇದರ ಅರ್ಥ ಏನು..? ಮುಸ್ಲಿಮರನ್ನು ತೃಪ್ರಿ ಪಡಿಸಲು ಅವಾರು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧರಿರುತ್ತಾರೆ. ಕುಮಾರಸ್ವಾಮಿ ಅವರು ಬ್ರದರ್ ಎನ್ನುವುದು ಏನಣ್ಣ ಚೆನ್ನಾಗಿದ್ದೀವಿ ಅನ್ನುವ ಅರ್ಥದಲ್ಲಿ. ವಯಸ್ಸಾದವರನ್ನು ಬ್ರದರ್ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಸ್ವಾರ್ಥದಲ್ಲಿ ಹೀಗೆ ಕರೆಯುತ್ತಾರೆ. ರಾಷ್ಟ್ರದ್ರೋಹಿಯನ್ನು ಬ್ರದರ್ ಎನ್ನುತ್ತಾರೆ. ಎಷ್ಟರ ಮಟ್ಟಿಗೆ ಸೊಕ್ಕು ಇರಬೇಕು ಎಂದು ಕಿಡಿಕಾರಿದ್ದಾರೆ.

 

ಸಿದ್ದರಾಮಯ್ಯ ಅವರು ಈ ಹಿಂದೆ ಹೀಗೆ ಮಾಡಿಯೇ ಅಧಿಕಾರ ಕಳೆದುಕೊಂಡಿದ್ದರು. ಆದರೂ ಅವರಿಗೆ ಬುದ್ದಿ ಬಂದಿಲ್ಲ. ಸಿದ್ದರಾಮಯ್ಯ ಎಲ್ಲ ಸಮಾಜವನ್ನು ಮೈಮೇಲೆ ಎಳೆದುಕೊಂಡರು. ಜಾತಿ ಒಡೆದ ನಂತರ ಮುಸ್ಲಿಮರು ಮಾತ್ರ ಗತಿ ಎಂದು 10 ಸಾವಿರ ಕೋಟಿ ರೂಪಾಯಿ ಕೊಡುತ್ತೇನೆ ಎಂದಿದ್ದಾರೆ. ಅದು ಪ್ರೂವ್ ಆಗಬೇಕು,ಅದು ಅವರ ವಯಕ್ತಿಕ ವಿಚಾರ. ನಾವು ಮುಸ್ಲಿಮರ ವಿರೋಧಿ‌ ಅಲ್ಲ. ನಾವು ರಾಷ್ಟ್ರದ್ರೋಹಿ ಮುಸ್ಲಿಮರ ವಿರೋಧಿ ಎಂದು ಹೇಳುವ ಮೂಲಕ ಸಮಾವೇಶದಲ್ಲಿ ಮುಸ್ಲಿಂ ಗುರುಗಳ ಬಗ್ಗೆ ವೇದಿಕೆ ಹಂಚಿಕೊಂಡಿದ್ದರ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಶಾಸಕ ಯತ್ನಾಳ್ ಕೂಡ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...