Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಂದೆಯೂ ಜೆಡಿಎಸ್ ಪಕ್ಷದಿಂದಾನೇ ಸ್ಪರ್ಧಿಸುತ್ತೇನೆ : ಜಿಟಿಡಿ

---Advertisement---

ಮೈಸೂರು: ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿರುವ ಜಿಟಿ ದೇವೇಗೌಡ ಅವರಿಗೆ ಪಕ್ಷದಿಂದ ಇನ್ನಷ್ಟು ದೂರವಿಡಲು ಜೆಡಿಎಸ್ ತೀರ್ಮಾನಿಸಿದೆ ಎನ್ನಲಾಗ್ತಾ ಇದೆ. ಹೀಗಾಗಿಯೇ ಸಾ.ರಾ.ಮಹೇಶ್ ಅವರನ್ನ ಚಾಮುಂಡೇಶ್ವರಿ ಕ್ಷೇತ್ರದಿಂದ ನಿಲ್ಲಿಸಬೇಕು ಎಂಬ ಚರ್ಚೆಗಳು ನಡೆದಿವೆಯಂತೆ. ಇದರ ನಡುವೆ ಜಿಟಿ ದೇವೇಗೌಡ ಅವರು ನಾನು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿಂದಾನೇ ಸ್ಪರ್ಧಿಸ್ತೇನೆ ಎಂಬ ಮಾತನ್ನ ಹೇಳಿದ್ದಾರೆ.

ಮೈಸೂರಿನ ಜನತೆಗೆ ಹಾಗೂ ಚಾಮುಂಡೇಶ್ವರಿ ಜನತೆಗೆ ನಾನು ಏನು ಅಂತ ಗೊತ್ತಿದೆ. ಯಾವ ನಾಯಕರಿಗೂ ನಾನು ದ್ರೋಹ ಮಾಡಲ್ಲ. ಆ ಬುದ್ದಿಯೂ ನನಗಿಲ್ಲ. ನಾನು ಯಾವತ್ತು ನಾಯಕತ್ವವನ್ನು ನಂಬಿ ಬೆಂಬಲ ಕೊಡುವವನು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ನಂತರ 3 ಬಾರಿ ಎಂಎಲ್ಎ ಆಗಿ ಕುಮಾರಪರ್ವ, ಮರಳಿ ಮನೆಗೆ ಕಾರ್ಯಕ್ರಮ ಮಾಡಿದ್ದೇನೆ.‌

ಇವತ್ತಿಗೂ ನಾನು ದೇವೇಗೌಡ, ಕುಮಾರಸ್ವಾಮಿ ಜೊತೆಗೆ ಒಟ್ಟಾಗಿಯೇ ಇದ್ದೀವಿ. ಚಾಮುಂಡೇಶ್ವರಿ ಕ್ಷೇತ್ರ ನನ್ನನ್ನು ಅವರ ಮನೆಯ ಮಗನ ರೀತಿ, ಸಹೋದರನ ರೀತಿ ನೋಡಿಕೊಂಡಿದೆ. ನಾನು ಯಾವತ್ತು ಪಕ್ಷದ ವರಿಷ್ಠರ ವಿರುದ್ಧ ಮಾತನ್ನಾಡಿಲ್ಲ. ನನ್ನ ಕ್ಷೇತ್ರ ದೊಡ್ಡದು. ಅದರ ಕೆಲಸ ಮಾಡುವುದರಲ್ಲಿ ಬ್ಯುಸಿಯಾಗಿದ್ದೇನೆ. ಅಸೆಂಬ್ಲಿ ಚುನಾವಣೆ ಇನ್ನು ಎರಡು ವರ್ಷ ಇದೆ. ಚುನಾವಣೆ ಸಂದರ್ಭದಲ್ಲಿ ಅದನ್ನು ಮಾತನಾಡೋಣಾ . ನಾನು ಜೆಡಿಎಸ್ ನಲ್ಲಿಯೇ ಇದ್ದೇನೆ. ಒಂದು ಕಾಲು ಕೂಡ ಹೊರಗೆ ಇಟ್ಟಿಲ್ಲ. ನಾನು ಜೆಡಿಎಸ್ ನಿಂದ ಗೆದ್ದಿದ್ದೇನೆ. ಈಗಲೂ ಜೆಡಿಎಸ್ ನಲ್ಲಿ ಇದ್ದೇನೆ. ಮುಂದೆಯು ಜೆಡಿಎಸ್ ನಿಂದ ಚುನಾವಣೆಗೆ ನಿಲ್ಲುತ್ತೇನೆ. ಚುನಾವಣೆ ಸಮೀಪ ಬಂದಾಗ ಎಲ್ಲವೂ ಒಳ್ಳೆಯದೆ ಆಗುತ್ತೆ. ನಮಗೂ ಒಳ್ಳೆಯ ದಿನ ಬರುತ್ತದೆ ಎಂದಿದ್ದಾರೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...