Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾನು ದರ್ಶನ್ ಪರ ನಿಲ್ತೇನೆ ಅಂದ್ರು ಧ್ರುವ ಸರ್ಜಾ..!

---Advertisement---

ಬೆಂಗಳೂರು: ಈ ಹಿಂದೆ ಕಾವೇರಿ ಹೋರಾಟದಲ್ಲಿ ದರ್ಶನ್ ವೇದಿಕೆಗೆ ಬಂದರು ಧ್ರುವ ಅವರು ಮಾತನಾಡಿಸಿರಲಿಲ್ಲ. ಬಳಿಕ ಅವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಅರ್ಥವಾಗಿತ್ತು. ಆ ಬಗ್ಗೆ ಧ್ರುವ ಸರ್ಜಾ ಕೂಡ ನೇರವಾಗಿಯೇ ಉತ್ತರವನ್ನು ನೀಡಿದ್ದರು. ಆದರೆ ಏನಾಗಿದೆ ಎಂಬುದನ್ನ ಮಾತ್ರ ಹೇಳಿರಲಿಲ್ಲ. ಇದೀಗ ಧ್ರುವ ಸರ್ಜಾ ದರ್ಶನ್ ಪರವಾಗಿ ಮಾತನಾಡಿದ್ದಾರೆ.

ರಾಜ್ಯದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ರಮ್ಯಾ, ಪ್ರಥಮ್ ನಡುವೆ ಟಾಕ್ ವಾರ್ ನಡೀತಿರೋದು ಗೊತ್ತಿರುವ ವಿಚಾರ. ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಕಮೆಂಟ್ ಗಳನ್ನ ಹಾಕಿದ್ದರು. ಹೀಗಾಗಿ ಯಾರೆಲ್ಲಾ ಕಮೆಂಟ್ ಹಾಕಿದ್ದರೋ ಅವರ ಸೋಷಿಯಲ್ ಮೀಡಿಯಾ ಪ್ರೊಫೈಲ್ ಜೊತೆಗೆ ದೂರನ್ನು ದಾಖಲಿಸಿದ್ದಾರೆ. ಇನ್ನೊಂದು ಕಡೆ ಪ್ರಥಮ್ ಹೌಹಾರುತ್ತಿದ್ದಾರೆ. ದರ್ಶನ್ ಅಭಿಮಾನಿಗಳಿಂದ ನನಗೆ ತೊಂದರೆಯಾಗ್ತಿದೆ ಅಂತ ಧರಣಿಯನ್ನೇ ಕೂತಿದ್ದರು. ಈ ಇಬ್ಬರ ಬಗ್ಗೆಯೂ ಮಾತನಾಡುವಾಗ ದರ್ಶನ್ ಪರವಹಿಸಿದ್ದಾರೆ.

ರಮ್ಯಾ ವಿಚಾರದಲ್ಲಿ ನಾನು ರಮ್ಯಾ ಪರ ನಿಲ್ಲುತ್ತೇನೆ. ಯಾಕಂದ್ರೆ ಅವರ ನಡೆ ಸರಿ ಇದೆ. ಆದರೆ ಪ್ರಥಮ್ ಪರವಾಗಿ‌ ನಿಲ್ಲುವುದಿಲ್ಲ. ಪ್ರಥಮ್ ವಿಚಾರಕ್ಕೆ ಬಂದ್ರೆ ನಾನು ದರ್ಶನ್ ಪರವಾಗಿ‌ ನಿಲ್ತೇನೆ ಎಂದಿದ್ದಾರೆ. ಪ್ರಥಮ್ ಮಾತುಗಳು ತುಸು ಅತಿಯಾಗಿದೆ ಎಂದಿದ್ದಾರೆ. ಪ್ರಥಮ್ ದರ್ಶನ್ ಅಭಿಮಾನಿಗಳು ಅಟ್ಯಾಕ್ ಮಾಡಲು ಬಂದಿದ್ದರು, ನನಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡ್ತಾರೆ ಅಂತೆಲ್ಲ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ ದರ್ಶನ್ ಹಾಕೋದು ವಿಗ್ ಅವ್ರತ್ರ ಏನು ಕಿತ್ಕೊಳೋಕೆ ಸಾಧ್ಯ ಎಂಬೆಲ್ಲಾ ರೀತಿ ಮಾತನಾಡಿದ್ದಾರೆ. ಹೀಗಾಗಿ ಧ್ರುವ ಸರ್ಜಾ ಅವರು ಪ್ರಥಮ್ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment