ಬೆಂಗಳೂರು: ಸಿಎಂ ಕುರ್ಚಿ ಕದನ ಮತ್ತೆ ಶುರುವಾಗಿದೆ. ಡಿಕೆ ಶಿವಕುಮಾರ್ ಬೆಂಬಲಿಗರು ಹೈಕಮಾಂಡ್ ಮಧ್ಯಪ್ರವೇಶಿಸಿ ಇದನ್ನ ಇತ್ಯರ್ಥ ಮಾಡಿ ಅಂತಿದ್ದಾರೆ. ಅತ್ತ ಯತೀಂದ್ರ ಅವರು ನಮ್ಮ ತಂದೆಯೇ ಐದು ವರ್ಷಕ್ಕೂ ಸಿಎಂ ಅಂತಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ಸಿಎಂ ಸಿದ್ದರಾಮಯ್ಯ ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.
ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಅವರು ಹೇಳಿದಂತೆ ನಾನು, ಡಿಕೆ ಶಿವಕುಮಾರ್ ನಡೆದುಕೊಳ್ಳಬೇಕು. ಇದನ್ನ ಎಷ್ಟು ಸಾರಿ ಹೇಳೋದು ನಿಮಗೆ. ಯಾರೂ ಕೇಳುವುದಕ್ಕೆ ಹೋಗಬೇಡಿ ಇನ್ನು ಮುಂದೆ. ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳೋದು. ಅದನ್ನು ಬಿಟ್ಟು ಬೇರೆ ಕೇಳೋದೆ ಇಲ್ಲವಾ..?
ಮೂರು ತಿಂಗಳು ಆಯ್ತು ಇದನ್ನ ನೀವೂ ಶುರು ಮಾಡಿ. ಇನ್ನು ಮೇಲೆ ಇದನ್ನ ಕೇಳಬೇಡಿ ದಯಮಾಡಿ. ಹೈಕಮಾಂಡ್ ಗೆ ಎಲ್ಲವೂ ಗೊತ್ತು. ಹೈಕಮಾಂಡ್ ಅವರು ಎಲ್ಲವನ್ನು ತೀರ್ಮಾನ ಮಾಡ್ತಾರೆ. ಇವತ್ತು ಡಿಕೆ ಸುರೇಶ್ ಮಾತಾಡಿದ್ರೆ ಅವರನ್ನೇ ಕೇಳಿ. ನನಗೆ ಯಾಕೆ ಕೇಳ್ತೀರಾ..? ನಾನು ಹೈಕಮಾಂಡ್ ಹೇಳಿದಂತೆ ಕೇಳೋದು ಎಂದಿದ್ದಾರೆ.
ಇನ್ನು ಸಿಎಂ ಆಗಬೇಕೆಂಬ ಕಸರತ್ತು ನಡೆಸುತ್ತಿರುವ ಡಿಕೆ ಶಿವಕುಮಾರ್ ಅದಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ. ನಿನ್ನೆ ದೆಹಲಿಗೂ ಹೋಗಿದ್ದಾರೆ. ಅಸ್ಸಾಂ ಚುನಾವಣೆ ಇರುವ ಹಿನ್ನೆಲೆ ಡಿಕೆ ಶಿವಕುಮಾರ್ ಅವರ ಹೆಗಲಿಗೇನೆ ಇದರ ಜವಬ್ದಾರಿಯನ್ನ ವಹಿಸಲಾಗಿದೆ. ಹೀಗಾಗಿ ಅದರ ಮೀಟಿಂಗ್ ಗಾಗಿ ದೆಹಲಿಗೆ ಹೋಗಿದ್ದಾರೆ. ಈ ಬಾರಿಯಾದರೂ ಹೈಕಮಾಂಡ್ ನಾಯಕರು ಭೇಟಿಯಾಗ್ತಾರಾ ಎಂಬುದನ್ನ ನೋಡಬೇಕಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






